ಕನ್ನಡಪ್ರಭ ವಾರ್ತೆ ತುರ್ವಿಹಾಳ
ಶರಣಮ್ಮ ಅವರು ಅತಿಥಿ ಶಿಕ್ಷಕಿಯಾಗಿ ಆಯ್ಕೆಯಾಗಿದ್ದರೂ, ಅವರ ಬದಲಿಗೆ ಪತಿ ತರಗತಿಗಳಿಗೆ ಹಾಜರಾಗಿ ಬೋಧನಾ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೇಮಕಗೊಂಡವರು ಕರ್ತವ್ಯ ನಿರ್ವಹಿಸಬೇಕು :ಅತಿಥಿ ಶಿಕ್ಷಕರಾಗಿ ಆಯ್ಕೆಯಾದ ವ್ಯಕ್ತಿಯ ಬದಲಿಗೆ ಮತ್ತೊಬ್ಬರು, ಅದರಲ್ಲೂ ಕುಟುಂಬದ ಸದಸ್ಯರು ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬಹುದೇ ಎಂಬ ಪ್ರಶ್ನೆ ಸಾರ್ವಜನಿಕ ರಿಂದ ಕೇಳಿಬಂದಿದೆ. ಅತಿಥಿ ಶಿಕ್ಷಕರ ನೇಮಕಾತಿ ಹಾಗೂ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿ ದ ನಿಯಮಗಳ ಕುರಿತು ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಮುಖ್ಯ ಶಿಕ್ಷಕರ ಕ್ರಮಕ್ಕೆ ಪ್ರಶ್ನೆ: ಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಕಡಿವಾಳ ಅವರು ಈ ರೀತಿಯ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದ್ದು, ಶಾಲೆಯಲ್ಲಿ ಬೋಧನಾ ಕಾರ್ಯಕ್ಕೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ನೇಮಕಾತಿ ಪ್ರಕ್ರಿಯೆ ಮತ್ತು ನಿಯಮಾ ನುಸಾರ ಈ ವ್ಯವಸ್ಥೆ ಮಾನ್ಯವೇ ಎಂಬುದು ಸ್ಪಷ್ಟವಾಗಬೇಕಿದೆ.ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯ ವಾಸ್ತವಾಂಶವನ್ನು ಪರಿಶೀಲಿಸಿ, ಅತಿಥಿ ಶಿಕ್ಷಕರ ನೇಮಕಾತಿ ಆದೇಶ, ಹಾಜರಾತಿ ಹಾಗೂ ಕರ್ತವ್ಯ ನಿರ್ವಹಣೆಯ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅತೀಥಿ ಶಿಕ್ಷಕಿ ಶರಣಮ್ಮ ಅವರು ರಜೆಯಲ್ಲಿರುವುದು ಹಾಗೂ ಅವರ ಪತಿ ಕಾರ್ಯನಿರ್ವಿಸುವುದು ನನ್ನ ಗಮನಕ್ಕಿಲ್ಲ, ನನಗೆ ಬೇರೆ ಬೇರೆ ಒತ್ತಡಗಳು ಬಂದಿದವು ನಾನು ಆಗ ಹೇಳಿದ್ದೆ ನೋಡಿ ಶಿಕ್ಷಕರ ಕೊರತೆ ಇದ್ದರೇ ಆಯ್ಕೆ ಮಾಡಿ ಎಂದಿದ್ದೆ, ಸರಕಾರ ನಿಯಮನುಸಾರವಾಗಿ ಮಾಡಬೇಕಿತ್ತು ಆದರೇ ಇವರು ಯಾವುದೇ ನಿಮಯ ಇಲ್ಲದಂತೆ ಅವರ ಬದಲಿಗೆ ಇವರಿಗೆ ಅವಕಾಶ ನೀಡಿರುವುದು ತಪ್ಪು ಎಂದು ತುರ್ವಿಹಾಳದ ಸಿಆರ್‌ಪಿ ಹನುಮೇಶ ಹೇಳಿದ್ದಾರೆ.