ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರೀತಿಸಿ ಮದುವೆ ಆಗಿದ್ದ ದಂಪತಿಗಳ ಮಧ್ಯೆ ಬಂದ ಸ್ನೇಹಿತ ಪತ್ನಿಯನ್ನು ಮೋಹಿಸಿ ಕರೆದೊಯ್ದ ವಿಚಾರಕ್ಕೆ ಮನನೊಂದ ಪತಿ ಸೆಲ್ಫಿ ವಿಡಿಯೋ ಮೂಲಕ ನನ್ನ ಸಾವಿಗೆ ಓಡಿ ಹೋದ ಪತ್ನಿ ಹಾಗೂ ಸ್ನೇಹಿತ ಕಾರಣ ಎಂದು ಹೇಳಿ ನ್ಯಾಯ ಕೊಡಿಸಿ ಎಂದು ಸ್ನೇಹಿತರಲ್ಲಿ ಮನವಿ ಮಾಡಿದ ವಿಡಿಯೋ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿ ನೇಣಿಗೆ ಶರಣಾದ ಧಾರಣ ಘಟನೆ ಮಂಗಳವಾರ ಪಟ್ಟಣದ ಗಟ್ಟಿ ಲೇಔಟ್ ಬಡಾವಣೆಯಲ್ಲಿ ನಡೆದಿದೆ.ನಾಗೇಶ್ (35) ನೇಣಿಗೆ ಶರಣಾದ ಪತಿ. ಕಳೆದ 12 ವರ್ಷದ ಹಿಂದೆ ರಂಜಿತಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ನಾಗೇಶ್ ಈಚೆಗೆ ಸ್ವಂತ ಮನೆ ಮಾರಾಟ ಮಾಡಿ ಗಟ್ಟಿ ಲೇಔಟ್ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈಚೆಗೆ ಈ ದಂಪತಿ ಮಧ್ಯೆ ಬಿರುಗಾಳಿಯಂತೆ ಬಂದ ಸ್ನೇಹಿತ ಭರತ್ ಎಂಬಾತ ರಂಜಿತಾಳನ್ನು ಮೋಹಕ್ಕೆ ಸಿಲುಕಿಸಿಕೊಂಡು ಓಡಿ ಹೋದ ಘಟನೆ ನಡೆದಿದೆ.
ತೀವ್ರ ಮನನೊಂದ ನಾಗೇಶ್ ಜಿಗುಪ್ಸೆಯಲ್ಲಿ ಎರಡು ಮಕ್ಕಳನ್ನು ಬಿಟ್ಟು ಮಂಗಳವಾರ ಮನೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ತನ್ನ ಸಂಸಾರದಲ್ಲಿ ಬಂದ ಸ್ನೇಹಿತ ಭರತ್ ತನ್ನ ಪತ್ನಿ ರಂಜಿತಾ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಈಚೆಗೆ ಇಬ್ಬರು ಪರಾರಿಯಾದ ಘಟನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತೇನೆ. ನನ್ನ ಸಾವಿಗೆ ಪತ್ನಿ ರಂಜಿತಾ ಹಾಗೂ ಸ್ನೇಹಿತ ಭರತ್ ಕಾರಣ ಎಂದು ಹೇಳಿ ವಿಡಿಯೋ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿ ನೇಣಿಗೆ ಶರಣಾಗಿದ್ದಾನೆ.ವಿಡಿಯೋ ನೋಡಿದ ಹಲವು ಸ್ನೇಹಿತರು ಮನೆಯತ್ತ ಬರುವ ವೇಳೆಗೆ ನಾಗೇಶ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ಗುಬ್ಬಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
18 ಜಿ ಯು ಬಿ 1ಪ್ರೀತಿಸಿ ಮದುವೆ ಆಗಿದ್ದ ದಂಪತಿಗಳ ಮಧ್ಯೆ ಬಂದ ಸ್ನೇಹಿತ ಪತ್ನಿಯನ್ನು ಮೋಹಿಸಿ ಕರೆದೊಯ್ದ ಪತ್ನಿ ರಂಜಿತಾ ಹಾಗೂ ಭರತ
18 ಜಿ ಯು ಬಿ 2ತನ್ನ ಪತ್ನಿ ಬೇರೆಯವರ ಜೊತೆ ಓಡಿ ಹೋದ ಕಾರಣಕ್ಕೆ ಪತಿ ನಾಗೇಶ್ ನೇಣಿಗೆ ಶರಣಾಗಿದ್ದಾನೆ