ಕಾಡುಹಂದಿ ಬೇಟೆ, ಆರೋಪಿ ಬಂಧನ

KannadaprabhaNewsNetwork |  
Published : Nov 13, 2026, 02:15 AM IST
ಹಾವೇರಿಯ ನಾಗೇಂದ್ರನಮಟ್ಟಿ ವ್ಯಾಪ್ತಿಯಲ್ಲಿ ಕಾಡುಹಂದಿ ಬೇಟೆಯಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯವರು ವಶಕ್ಕೆ ಪಡೆದಿರುವುದು. | Kannada Prabha

ಸಾರಾಂಶ

ಹಾವೇರಿಯ ನಾಗೇಂದ್ರನಮಟ್ಟಿ ವ್ಯಾಪ್ತಿಯಲ್ಲಿ ಕಾಡುಹಂದಿ ಬೇಟೆಯಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯವರು ವಶಕ್ಕೆ ಪಡೆದಿರುವುದು.

ಹಾವೇರಿ:ಸ್ಥಳೀಯ ನಾಗೇಂದ್ರನಮಟ್ಟಿ ವ್ಯಾಪ್ತಿಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಸುಟ್ಟು ಮಾಂಸ ಮಾರಾಟ ಮಾಡಲು ಯತ್ನಿಸಿದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಒಬ್ಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನ.11ರಂದು ಬೆಳಗ್ಗೆ 10.30ರ ಸುಮಾರಿಗೆ ಹಾವೇರಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳು ನೆಡುತೋಪು ತಪಾಸಣೆಗಾಗಿ ನಾಗೇಂದ್ರನಮಟ್ಟಿಯಿಂದ ಕರ್ಜಗಿ ಕಡೆಗೆ ತೆರಳುತ್ತಿದ್ದಾಗ, ರಸ್ತೆಯ ಬಲಭಾಗದ ಖಾಲಿ ಜಾಗದಲ್ಲಿದ್ದ ಜಾಲಿ ಗಿಡಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಪರಿಶೀಲಿಸಿದಾಗ ಅಲ್ಲಿ ಕಾಡುಹಂದಿಯನ್ನು ಸುಡುತ್ತಿರುವುದು ಪತ್ತೆಯಾಗಿದೆ.

ಸ್ಥಳೀಯರನ್ನು ವಿಚಾರಿಸಿದಾಗ ಕಾಡುಹಂದಿಯನ್ನು ಬೇಟೆಯಾಡಿ ಸುಟ್ಟು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿರುವುದು ತಿಳಿದುಬಂದಿದೆ. ಬಳಿಕ ಸುತ್ತಮುತ್ತ ಪರಿಶೀಲಿಸಿದಾಗ ಮತ್ತೊಂದು ಜೀವಂತ ಕಾಡುಹಂದಿಯನ್ನು ಸೆರೆಹಿಡಿದು ಕಾಲುಗಳನ್ನು ಕಟ್ಟಿ ಇಟ್ಟಿರುವುದು ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ನಾಗೇಂದ್ರನಮಟ್ಟಿಯ ಅಜ್ಜಪ್ಪ ಪರಸಪ್ಪ ಕುಂಚಿಕೊರವರ (29) ಎಂಬ ಆರೋಪಿತನನ್ನು ಸ್ಥಳದಲ್ಲಿಯೇ ಬಂಧಿಸಿದ್ದಾರೆ. ಸ್ಥಳದಿಂದ ಒಂದು ಸುಟ್ಟ ಕಾಡುಹಂದಿ, ಒಂದು ಜೀವಂತ ಕಾಡುಹಂದಿ ಹಾಗೂ ಬೇಟೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯಾಯಾಲಯದ ಅನುಮತಿಯಂತೆ ಸುಟ್ಟ ಕಾಡುಹಂದಿಯನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ. ಜೀವಂತ ಕಾಡುಹಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಕ್ಷಯ್ ಪ್ರಕಾಶಕರ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನುಷಾ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸಿದ್ದಮ್ಮ ಕರಿಗಾರ, ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಹಂಡೇರ, ಫಕ್ಕಿರೇಶ ಮಾಗಡಿ, ಎ.ಎಂ. ನದಾಫ್, ರೇಹಮತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌