ಕಾಡು ಹಂದಿ, ಆಮೆ ಬೇಟೆ: ಮೂವರ ಬಂಧನ

KannadaprabhaNewsNetwork |  
Published : Oct 12, 2025, 01:01 AM IST
ಪೊಟೋ11ಎಸ್.ಆರ್.ಎಸ್‌4 ( ಕಾಡು ಹಂದಿ ಹಾಗೂ ಆಮೆ ಭೇಟೆಯಾಡಿದ ಮೂವರನ್ನು ಬನವಾಸಿ ವಲಯಾರಣ್ಯಾಧಿಗಳು ಬಂಧಿಸಿದ್ದಾರೆ.) | Kannada Prabha

ಸಾರಾಂಶ

ತಾಲೂಕಿನ ಬಿಸಲಕೊಪ್ಪ ಸಮೀಪದ ಮುಡೇಬೈಲನಲ್ಲಿ ಕಾಡು ಹಂದಿ ಹಾಗೂ ಆಮೆ ಬೇಟೆಯಾಡಿ ಮನೆಯಲ್ಲಿ ಮಾಂಸ ತಯಾರಿಸಿಟ್ಟ ಖಚಿತ ಮಾಹಿತಿ ಮೇರೆಗೆ ಬನವಾಸಿ ವಲಯಾರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ಇಬ್ಬರು ಪರಾರಿ । ಅರೆ ಬೇಯಿಸಿದ 6 ಕೆಜಿ ಕಾಡುಹಂದಿ ಮಾಂಸ, ಪೂರ್ತಿ ಬೇಯಿಸಿದ 6 ಕೆಜಿ ಕಾಡುಹಂದಿ ಮಾಂಸ ಮತ್ತು 0.550 ಕೆಜಿ ಆಮೆಯ ಮಾಂಸ ವಶ

ಶಿರಸಿ:

ತಾಲೂಕಿನ ಬಿಸಲಕೊಪ್ಪ ಸಮೀಪದ ಮುಡೇಬೈಲನಲ್ಲಿ ಕಾಡು ಹಂದಿ ಹಾಗೂ ಆಮೆ ಬೇಟೆಯಾಡಿ ಮನೆಯಲ್ಲಿ ಮಾಂಸ ತಯಾರಿಸಿಟ್ಟ ಖಚಿತ ಮಾಹಿತಿ ಮೇರೆಗೆ ಬನವಾಸಿ ವಲಯಾರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ತಾಲೂಕಿನ ಮುಡೇಬೈಲ್‌ನ ಶಂಕರ ಲಕ್ಷ್ಮಣ ನಾಯ್ಕ, ಗಂಗಾಧರ ಗಣಪತಿ ಗೌಡ, ಶಂಕರ ಬೊಮ್ಮ ಗೌಡ ಬಂಧಿತರು. ರವಿ ಮಾದೇವ ಗೌಡ ಹಾಗೂ ಗಣಪತಿ ಬೊಮ್ಮು ಗೌಡ ಪರಾರಿಯಾದ ಆರೋಪಿಗಳು. ಐವರು ಸೇರಿಕೊಂಡು ಬನವಾಸಿ ವಲಯದ ಎಕ್ಕಂಬಿ ಶಾಖೆಯ ಬಿಸಲಕೊಪ್ಪ ಸಮೀಪದ ಮುಡೇಬೈಲ ಮಾಲ್ಕಿ ಸರ್ವೇನಂಬರ್‌ನಲ್ಲಿ ಕಾಡು ಹಂದಿ ಬೇಟೆಯಾಡಿದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಮುಡೇಬೈಲ್‌ನ ಆರೋಪಿ ಶಂಕರ ನಾಯ್ಕ ಮನೆಗೆ ತೆರಳಿ ಶೋಧಿಸಿದಾಗ ಮನೆಯಲ್ಲಿ ಅರೆ ಬೇಯಿಸಿದ 6 ಕೆಜಿ ಕಾಡುಹಂದಿ ಮಾಂಸ, ಪೂರ್ತಿ ಬೇಯಿಸಿದ 6 ಕೆಜಿ ಕಾಡುಹಂದಿ ಮಾಂಸ ಮತ್ತು 0.550 ಕೆಜಿ ಆಮೆಯ ಮಾಂಸ ವಶಪಡಿಸಿಕೊಂಡಿದ್ದಾರೆ. ಮೂವರನ್ನು ಬಂಧಿಸಲಾಗಿದ್ದು, ದಾಳಿ ಸಂದರ್ಭದಲ್ಲಿ ಇಬ್ಬರು ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಹಿಂದೂರಾವ್ ಸೂರ್ಯವಂಶಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ನಿಂಗಾಣಿ ಮಾರ್ಗದರ್ಶನದಲ್ಲಿ ಭವ್ಯಾ ನಾಯ್ಕ, ಬನವಾಸಿ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಗಜೇಂದ್ರ ಮೊಗೇರ, ಬಾಲರಾಜ ಡಿ, ಯಶೋಧಾ ನಾಯ್ಕ, ಮಂಜುನಾಥ ಗಂಗಮತ ಗಸ್ತು ಅರಣ್ಯ ಪಾಲಕರಾದ ಭೋಜು ಚೌಹಾಣ್, ಅಮೃತ್ ಅರಿಬೆಂಚಿ, ಕನಕಪ್ಪ ತಳವಾರ, ಮಲ್ಲಿಕಾರ್ಜುನ ಗುದಗಿ, ರಮೇಶ ಎಚ್.ಸಿ., ಅರಣ್ಯ ವೀಕ್ಷಕರಾದ ಈಶ್ವರಪ್ಪ ಎಚ್‌.ಎಸ್‌. ಹಾಗೂ ಮಂಜುನಾಥ ನಾಯ್ಕ ಭಾಗವಹಿಸಿದ್ದರು.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ