ಕುಷ್ಟಗಿ: ಮನುಕುಲದ ಉದ್ಧಾರಕ್ಕಾಗಿ, ಜಗತ್ತಿನಲ್ಲಿರುವ ಅಶಾಂತಿ ಹೋಗಲಾಡಿಸಲು ಹಿಂದುತ್ವ ಒಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗ ಕಾರ್ಯವಾಹ ಕೇಶವಜಿ ಹೇಳಿದರು.
ಸಾಮಾಜಿಕ ಸಾಮರಸ್ಯ, ಸ್ವದೇಶಿ ಆಚರಣೆ, ಮಾತೃಭಾಷೆ ಬಳಕೆ, ಪರಿಸರ ರಕ್ಷಣೆ, ಮತದಾನ, ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯ ಪಾಲನೆ, ದೇಶಾಭಿಮಾನ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಾನ್ನಿಧ್ಯ ವಹಿಸಿದ್ದ ನಿಡಶೇಸಿಯ ಅಭಿನವ ಕರಿಬಸವಶಿವಾಚಾರ್ಯರು ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಕಿರೀಟವಾಗಿದೆ. ಇದು ದೇಶದ ಸುಭದ್ರತೆಯ ಸಲುವಾಗಿ ಕೆಲಸ ಮಾಡುತ್ತಿದ್ದು, ಯುವಕರು ಸಂಘಟನೆ ಸೇರುವ ಮೂಲಕ ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.ಸ್ವಯಂ ಸೇವಕರಾದ ನಿತೀನ್ ಗೌಡ ಪಾಟೀಲ ಪ್ರಾರ್ಥಿಸಿದರು. ವೀರೇಶ ತೊಂಡಿಹಾಳ ಧ್ವಜಾರೋಹಣ ನೆರವೇರಿಸಿದರು. ಬಸವರಾಜ ಹೊಸೂರು ಹಾಗೂ ಆದೇಶ ಕಂಚಿ ವೈಯಕ್ತಿಕ ಗೀತೆ ಪ್ರಸ್ತುತಪಡಿಸಿದರು. ದೊಡ್ಡಬಸವ ಸುಂಕದ ಸ್ವಾಗತಿಸಿದರು. ಚಂದ್ರಶೇಖರ ಪಾಟೀಲ ವಚನಾಮೃತ ಹೇಳಿದರು. ಬಸನಗೌಡ ಪಾಟೀಲ ವಂದಿಸಿದರು. ಮುತ್ತಣ್ಣ ಗೋತಗಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.