ಕಾಡಾನೆ ದಾಳಿ ಕಾರು ಜಖಂ

KannadaprabhaNewsNetwork |  
Published : Feb 21, 2026, 03:00 AM IST
Car

ಸಾರಾಂಶ

ಕಾಡಾನೆ ದಾಳಿಗೆ ಕಾರೊಂದು ಜಖಂಗೊಂಡಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಕೆಸನಳ್ಳ ತೋಟದ ಸಮೀಪ ನಡೆದಿದೆ. ಕೆಸನಳ್ಳ ತೋಟದ ಸಮೀಪದ ಮುಖ್ಯ ರಸ್ತೆಯಲ್ಲಿ ಕಾಡಾನೆ ಹಿಂಡು ಕಾರಿನ ಮೇಲೆ ದಾಳಿ

  ಸಿದ್ದಾಪುರ :  ಕಾಡಾನೆ ದಾಳಿಗೆ ಕಾರೊಂದು ಜಖಂಗೊಂಡಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಕೆಸನಳ್ಳ ತೋಟದ ಸಮೀಪ ನಡೆದಿದೆ.

ಕೆಸನಳ್ಳ ತೋಟದ ಸಮೀಪ ದಾಳಿ

ಅಮ್ಮತ್ತಿ ಪುಲಿಯೇರಿ ಗ್ರಾಮದ ನಿವಾಸಿ‌ ಪ್ರಜಿತ್‌ ಎಂಬವವರು ಮೈಸೂರು ರಸ್ತೆಯಿಂದ ಬುಧವಾರ ರಾತ್ರಿ ತಮ್ಮ ಮಾರುತಿ ಡಿಸೈರ್ ಕಾರಿನಲ್ಲಿ ಸಿದ್ದಾಪುರಕ್ಕೆ ಬರುತಿರುವ ಸಂದರ್ಭ ಕೆಸನಳ್ಳ ತೋಟದ ಸಮೀಪದ ಮುಖ್ಯ ರಸ್ತೆಯಲ್ಲಿ ಕಾಡಾನೆ ಹಿಂಡು ಕಾರಿನ ಮೇಲೆ ದಾಳಿ ನಡೆಸಿ ಕಾರಿಗೆ ಕಾಲಿನಿಂದ ತುಳಿದು ದಂತದಿಂದ ತಿವಿದು ಕಾರನ್ನು ಜಖಂಗೊಳಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಜಿತ್ ಯಾವುದೇ ಹಾನಿಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆ ಹಾವಳಿ

ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಭಯಭೀತರಾಗಿರುವ ಗ್ರಾಮಸ್ಥರು ಕಾಡಾನೆ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು