ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಪಿಜಿಪಾಳ್ಯ ಗ್ರಾಪಂ ವ್ಯಾಪ್ತಿಯ ಕುಡುವಾಳೆ ಗ್ರಾಮದ ಸರ್ವೇ ನಂ. 251ರಲ್ಲಿ ಸಿದ್ದಶೆಟ್ಟಿ ಎಂಬವರು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದು ವಿವಿಧ ಫಸಲನ್ನು ಬೆಳದಿದ್ದಾರೆ. ಸಮೀಪದ ಅರಣ್ಯ ಪ್ರದೇಶದಿಂದ ಬಂದ ಬೃಹತ್ ಗಾತ್ರದ ಕಾಡಾನೆ ಜಮೀನಿಗೆ ನುಗ್ಗಿ ಬೆಳೆದಿದ್ದ ಮುಸ್ಕಿನ ಜೋಳ ಸೇರಿದಂತೆ ವಿವಿಧ ಫಸಲನ್ನು ತಿಂದು ತುಳಿದು ನಾಶಪಡಿಸಲು ಮುಂದಾಗಿದ್ದನ್ನು ಗಮನಿಸಿದ ಸ್ಥಳೀಯ ರೈತರು ಬ್ಯಾಟರಿ ಲೈಟ್‌ಗಳು ಹಾಗೂ ಪಟಾಕಿಗಳನ್ನು ಬಳಸಿಕೊಂಡು ಕಾಡಾನೆಯನ್ನು ಮರಳಿ ಅರಣ್ಯಕ್ಕೆ ಓಡಿಸಲು ರಾತ್ರಿ ಪೂರ್ತಿ ಹರಸಾಹಸ ಪಟ್ಟರು. ಆನೆಯ ದಾಳಿಯಿಂದ ಬೆಳೆ ಹಾನಿಯಾಗುವ ಭೀತಿಯಿಂದ ರೈತರು ನಿತ್ಯವು ಕಾವಲು ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.