ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗ್ಯದ್ಲಘಟ್ಟದ ಮಹಿಳೆ ಬೋರಮ್ಮ (೪೦) ಮೃತ ದುರ್ದೈವಿ. ಭಾನುವಾರ ಎಂದಿನಂತೆ ಬೆಳಿಗ್ಗೆ ನಾಗೇಶ್ ಗೌಡ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರನೆ ಕಾಡಾನೆಯೊಂದು ಮಹಿಳೆಯನ್ನು ತುಳಿದು ಸಾಯಿಸಿದ್ದು, ಸಹ ಕಾರ್ಮಿಕ ಮೇಸ್ತ್ರಿ ನಾಗರಾಜ್ ಸಣ್ಣಪುಟ್ಟ ಗಾಯಗಳಿಂದ ಪವಾಡ ಸದೃಶ ಪಾರಾಗಿದ್ದಾರೆ.
ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ:ಮಹಿಳೆಯ ಶವವನ್ನು ಘಟನಾ ಸ್ಥಳದಿಂದ ತರುವ ಮಾರ್ಗದ ಕಡಬಗೆರೆಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಕರ್ತರುಅಡ್ದಗಟ್ಟಿದರು. ಬಳಿಕ ಶವವನ್ನು ರಸ್ತೆ ಮಧ್ಯ ಇಟ್ಟು ತಡೆ ಮಾಡಲಾಯಿತು. ಆರಂಭದಲ್ಲಿ ಕಡಿಮೆ ಇದ್ದ ಜನಸಂಖ್ಯೆ ಸಂಜೆ ಏರಿಕೆಯಾಯಿತು.
ಸಾವಿಗೆ ಅರಣ್ಯ ಇಲಾಖೆ ಹೊಣೆ:
ಸಾವಾದ ತಕ್ಷಣ ಕಾಡಾನೆ ಸೆರೆ!:
ಪುತ್ರನಿಗೆ ಸರ್ಕಾರಿ ಕೆಲಸ ಕೊಡಿಸಿ:
ಸಂಚಾರಕ್ಕೆ ಸಂಚಕಾರ
ಆಶಿಕ್ ಬಂಧನ, ಬಿಡುಗಡೆ?:
ಸೂತಕದ ಮನೆಯಲ್ಲಿ ಸಂಭ್ರಮಾಚರಣೆ?:
ಒಂದೆಡೆ ಮಹಿಳೆಯ ಶವವಿಟ್ಟು ಸೂತಕದ ವಾತಾವರಣದಲ್ಲಿಜನ ಕಡಬಗೆರೆಯಲ್ಲಿ ಪ್ರತಿಭಟಿಸುತ್ತಿದ್ದರೆ ಪುರ, ಹ್ಯಾರಂಬಿಯಲ್ಲಿ ಹಿಡಿದ ಕಾಡಾನೆ ಹಾಗೂ ಸಿಬ್ಬಂದಿ, ಅಧಿಕಾರಿಗಳ ಜತೆಗೆ ಶಾಸಕರು ಸಂಭ್ರಮಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.ಅನುಮಾನ ಮೂಡಿಸಿದ ಮುರಿದ ದಂತ:
ವ್ಯಕ್ತಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಕಾಡಾನೆ ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡು ತಪ್ಪಿಸಿಕೊಂಡಿತ್ತು. ಅದಕ್ಕೆ ಎರಡೂ ಉದ್ದದ ದಂತಗಳಿದ್ದವು ಎನ್ನಲಾಗುತ್ತಿದ್ದು, ಭಾನುವಾರ ಸೆರೆ ಹಿಡಿದ ಕಾಡಾನೆಯ ದಂತಗಳನ್ನು ತುದಿ ತುಂಡರಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಯಿತು.ಲಾಟಿ ಚಾರ್ಜ್, ಪ್ರತಿಭಟನಾಕಾರರ ಬಂಧನ:
ಸಂಜೆ ಹೊತ್ತಿಗೆ ಎಸ್ಪಿ, ಡಿಸಿ, ಡಿಎಫ್‌ಒ ಬಂದು ಪ್ರಕರಣಕ್ಕೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದು, ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕು, ಮಹಿಳೆಗೆ 50 ಲಕ್ಷ ರು. ಪರಿಹಾರ, ಸರ್ಕಾರಿ ಉಧ್ಯೋಗ ನೀಡಬೇಕು. ಇದು ಈಡೇರದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು. ಯಾವ ಕಾರಣಕ್ಕೂ ಶವ ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.ಮೃತ ಮಹಿಳೆಯ ಊರಾದ ಕೂಡ್ಲಿಗಿ ತಾಲೂಕಿನ ಅನೇಕರು ಆಗಮಿಸಿದ್ದು, ಶವ ಬಿಟ್ಟು ಕೊಡುವಂತೆ ಒತ್ತಾಯಿಸಿದರು. ಆ ಸಮಯದಲ್ಲಿ ತೀವ್ರ ಗೊಂದಲಗಳಾದವು. ಜಿಲ್ಲಾಧಿಕಾರಿ ನಾಗರಾಜ್ ಮಾತನಾಡಿ, ಚುನಾವಣೆ ಒತ್ತಡಗಳಿಂದ ಸ್ಥಳಕ್ಕೆ ಬರುವುದು ವಿಳಂಬವಾಗಿದೆ. ಮಹಿಳೆ ಮೃತಪಟ್ಟಿರುವುದು ವಿಷಾದದ ಸಂಗತಿ. ಸಮಸ್ಯೆ ಬಗೆಹರಿಸುವಂತೆ ಸರ್ಕಾರದೊಂದಿಗೆ ಚರ್ಚಿಸುವೆ. ಮಹಿಳೆಯ ಕುಟುಂಬಕ್ಕೆ ಪ್ರತಿ ತಿಂಗಳಿಗೆ ಐದು ಸಾವಿರ ರೂ ಮಾಸಾಶನ ನೀಡಲಾಗುವುದು. ಪರಿಹಾರ ಕಾರ್ಯಗಳ ಬಗ್ಗೆ ಆಯಾ ಜನ ಪ್ರತಿನಿಧಿಗಳಿಗೆ ಅರಿವಿದ್ದು, ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು. ಇದಕ್ಕೊಪ್ಪದ ಪ್ರತಿಭಟನಾಕಾರರು ಪ್ರತಿಭಟನೆ ತೀವ್ರಗೊಳಿಸಿದರು.
ಕೊನೆಗೆ ಪೊಲೀಸರು ಜನರನ್ನು ಚದುರಿಸಿ ಶವವೆತ್ತಲು ಮುಂದಾದರು. ಆ ಸಮಯದಲ್ಲಿ ಹೋರಾಟಗಾರರು ಪೊಲೀಸ್ ವಾಹನ ತಡೆಯಲು ಮುಂದಾದಾಗ, ಲಾಟಿ ಚಾರ್ಜ್ ಮಾಡಿದರು. ಆ ಸಮಯದಲ್ಲಿ ಕೆಲವರು ಕಟ್ಟಡದಿಂದ ಕಲ್ಲು ತೂರಿದ ಘಟನೆಯೂ ನಡೆಯಿತು. ಮಹಿಳೆ ಸೇರಿದಂತೆ ಇಬ್ಬರಿಗೆ ಗಾಯಗಳಾದವು. ಪೊಲೀಸರು ಪ್ರತಿಭಟನಾಕಾರರನ್ನು ಹುಡುಕಿ ಹುಡುಕಿ ಎಳೆದು ತಂದು ಜೀಪಿನೊಳಗೆ ತುಂಬಿಸಿದರು. ಡಿ.ಎನ್.ಜೀವರಾಜ್, ಸುಧಾಕರ ಶೆಟ್ಟಿ, ಕೊಪ್ಪ ತಾಲೂಕು ಯುವ ರೈತ ಮೋರ್ಚಾ ಅಧ್ಯಕ್ಷ ಎ.ಸಿ.ಸಂತೋಷ್ ಅರನೂರು ಸೇರಿ 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಾಳೆಹೊನ್ನೂರು ಠಾಣೆಗೆ ಕರೆದೊಯ್ದರು.ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ, ರಂಜಿತ್ ಶೃಂಗೇರಿ, ಹೊಸಳ್ಳಿ ಅಭಿಷೇಕ್, ಸಂದೀಪ್, ಚಂದ್ರಶೇಖರ ರೈ, ಬಿಜೆಪಿ ನ.ರಾ.ಪುರ ಮಾಜಿ ಅಧ್ಯಕ್ಷ ಅರುಣ್ ಮತ್ತಿತರರು ಪಾಲ್ಗೊಂಡಿದ್ದರು.
ಇಂದು ಶೃಂಗೇರಿ ಕ್ಷೇತ್ರ ಬಂದ್ಆನೆ ದಾಳಿಯಿಂದ ಸಾವನ್ನಪ್ಪಿರುವ ವ್ಯಕ್ತಿಯ ಹಾಗೂ ಮಲೆನಾಡಿನ ಪರವಾಗಿ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಿರುವ ರೈತರು ಹಾಗೂ ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಹಾಗೂ ಹೋರಾಟಗಾರರನ್ನು ಬಂಧಿಸಿರುವ ಕ್ರಮ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿ ಸೋಮವಾರ ಶೃಂಗೇರಿ ಕ್ಷೇತ್ರ ಬಂದ್‌ಗೆ ಕರೆ ನೀಡಿದೆ. ಕ್ಷೇತ್ರದ ಎಲ್ಲಾ ರೈತರು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲಿಸಿ, ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಜನಪರ, ರೈತಪರವಾಗಿ ನಿಲ್ಲಬೇಕು ಎಂದು ಸಮಿತಿ ಕೋರಿದೆ. ಸೋಮವಾರ ಬಾಳೆಹೊನ್ನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಿದೆ.