ಈ ಭಾಗದಲ್ಲಿ ಕಾಡಾನೆಗಳು ಪದೇ ಪದೇ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಉಪ್ಪಿನಂಗಡಿ: ಕಾಡಾನೆಗಳ ಹಿಂಡು ಶಿರಾಡಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದಂತಿದ್ದು, ಕೃಷಿ ಪ್ರದೇಶಕ್ಕೆ ದಾಳಿ ನಡೆಸಿ ಕೃಷಿ ಬೆಳೆಗಳನ್ನು ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.
ಶಿರಾಡಿ ನಿವಾಸಿ ದಿವಾಕರ ಗೌಡ ಅವರ ತೋಟಕ್ಕೆ ನಾಲ್ಕರಿಂದ ಆರು ಆನೆಗಳು ದಾಳಿ ನಡೆಸಿವೆ ಎಂದು ಅಂದಾಜಿಸಲಾಗಿದ್ದು ಅಡಕೆ, ತೆಂಗು, ಬಾಳೆ ಕೃಷಿಗಳನ್ನು ಹಾನಿಗೊಳಿಸಿವೆ. ಅಲ್ಲದೆ ತೋಟಕ್ಕೆ ಅಳವಡಿಸಿರುವ ಸ್ಪ್ರಿಂಕ್ಲರ್‌ಗಳನ್ನೂ ಕಾಡಾನೆಗಳು ಪುಡಿಗೈದಿವೆ. ಘಟನೆಯಿಂದಾಗಿ ದಿವಾಕರ ಗೌಡ ಅವರಿಗೆ ಸಾವಿರಾರು ರುಪಾಯಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
ಈ ಭಾಗದಲ್ಲಿ ಕಾಡಾನೆಗಳು ಪದೇ ಪದೇ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.