ಗೌತಮಪುರ, ತ್ಯಾಗರ್ತಿ ಸುತ್ತ ಕಾಡಾನೆ ಓಡಾಟ: ಜನರಾತಂಕ

KannadaprabhaNewsNetwork |  
Published : Oct 30, 2026, 01:45 AM IST
ಫೋಟೋ 29 ಎ, ಎನ್, ಪಿ 1 ಆನಂದಪುರ ಸಮೀಪ ಗೌತಮಪುರ ಹಾಗೂ ತ್ಯಾಗರ್ತಿ ಪಂಚಾಯತ್ ವ್ಯಾಪ್ತಿಯಲ್ಲಿನ ಭತ್ತದ ಗದ್ದೆಗಳಲ್ಲಿ  ಕಾಡಾನೆಗಳ ಸಂಚಾರ. | Kannada Prabha

ಸಾರಾಂಶ

Wild elephant movement around Gautamapura and Tyagarti: Public concern

ಕನ್ನಡಪ್ರಭ ವಾರ್ತೆ ಆನಂದಪುರ

ಇಲ್ಲಿಗೆ ಸಮೀಪದ ಗೌತಮಪುರ ಹಾಗೂ ತ್ಯಾಗರ್ತಿ ಸುತ್ತಮುತ್ತಲಿನ ಗ್ರಾಮಗಳ ಪ್ರದೇಶದಲ್ಲಿ ಕಾಡಾನೆಗಳು ಸಂಚಾರ ಕಂಡುಬಂದಿದ್ದು, ಗ್ರಾಮಸ್ಥರು ಮತ್ತು ರೈತರಲ್ಲಿ ಆತಂಕ ಉಂಟಾಗಿದೆ.

ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಬೆಳಂದೂರು ರಾಜ್ಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗೌತಮಪುರ, ಚನ್ನಾಪುರ ಹಾಗೂ ನಾಡವಳ್ಳಿ ಭಾಗಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಅಂಬ್ಲಿಗೋಳ ಅರಣ್ಯ ವಲಯದ ಅಧಿಕಾರಿಗಳು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಕಾಡು ಆನೆಗಳು ಪೀರನಕಣಿವೆ ದಾಟಿ ಬೆಳ್ಳಂದೂರು ಕಾಡಿನತ್ತ ಹೊರಟಿದ್ದು, ಸಿಬ್ಬಂದಿ ಪಹರೆ ನಡೆಸಿದ್ದಾರೆ. ಪ್ರತೀ ವರ್ಷದಂತೆ ಈ ಸಲವೂ ಯಾವುದೇ ಅಹಿತ ಘಟನೆಗಳಾಗದಂತೆ ಹಿಮ್ಮೆಟ್ಟಿಸಲು ಸಹಕಾರಕ್ಕೆ ಇಲಾಖೆ ಮನವಿ ಮಾಡಿದೆ. ಇನ್ನಷ್ಟು ಭದ್ರಾ ಅಭಯಾರಣ್ಯಗಳಿಂದ ಇನ್ನೂ ಹೆಚ್ಚಿನ ಆನೆಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಕಾಡಾನೆಗಳು ಮುಂದಿನ ದಿನಗಳಲ್ಲಿ ನಾಡವಳ್ಳಿ, ಚನ್ನಾಪುರ, ಕುಡಿಗೇರಿ, ಬೆಳ್ಳಂದೂರು ಮಾರ್ಗವಾಗಿ ಲಾವಿಗೇರಿ ಹಾಗೂ ಹುಲಿಯಪ್ಪನ ಕಣಿವೆಯವೆ ಮತ್ತು ಅಂಬ್ಲಿಗೋಳ ಡ್ಯಾಮ್ ಮೂಲಕ ಬೈರಾಪುರ, ಕಣ್ಣೂರು ಮಾರ್ಗದಲ್ಲಿ ಸಾಗುವ ಸಾಧ್ಯತೆಯಿದೆ. ಹೀಗಾಗಿ ಈ ಮಾರ್ಗಗಳ ಸುತ್ತಮುತ್ತ ವಾಸಿಸುವ ಗ್ರಾಮಸ್ಥರು ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ಜಾಗರೂಕರಾಗಿರಬೇಕು ಎಂದು ತಿಳಿಸಲಾಗಿದೆ.

ಬಾಕ್ಸ್...

ಅರಣ್ಯ ಸಿಬ್ಬಂದಿಯಿಂದ ನಿರಂತರ ಪಹರೆ

ಕಾಡಾನೆಯ ಚಲನವಲನದ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ನಿರಂತರ ಪಹರೆ ನಡೆಸುತ್ತಿದ್ದು ಆನೆಗಳು ಬಂದ ದಾರಿಯಲ್ಲಿ ವಾಪಸ್ ಹೋಗುವಂತೆ ಅರಣ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ರೈತರು ಸಹಕರಿಸಬೇಕು. ಸಾರ್ವಜನಿಕರು ಆನೆಗಳ ಚಲನವಲನ ಅಥವಾ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ತಕ್ಷಣವೇ ಸಂಬಂಧಪಟ್ಟ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಕಡ್ಡಾಯವಾಗಿ ರೈತರು ಸಾರ್ವಜನಿಕರು ಸಂಜೆ ವೇಳೆ ಯಾರು ಕಾಡುದಾರಿಗಳಲ್ಲಿ ಸಂಚರಿಸಬಾರದು. ಆನೆಗಳು ಕಂಡುಬಂದಲ್ಲಿ ಅವುಗಳ ಸಮೀಪಕ್ಕೆ ಹೋಗದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ.

---------------

ಫೋಟೋ 29 ಎ, ಎನ್, ಪಿ 1

ಆನಂದಪುರ ಸಮೀಪ ಗೌತಮಪುರ ಹಾಗೂ ತ್ಯಾಗರ್ತಿ ಪಂಚಾಯತ್ ವ್ಯಾಪ್ತಿಯಲ್ಲಿನ ಭತ್ತದ ಗದ್ದೆಗಳಲ್ಲಿ ಕಾಡಾನೆಗಳ ಸಂಚಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು