ಬಿಜೆಪಿ ಅಧಿಕಾರಕ್ಕೆ ಬಂದರೇ ಪ್ರಜಾಪ್ರಭುತ್ವ ಉಳಿಯುತ್ತದೆಯೋ? ಇಲ್ಲವೋ?

KannadaprabhaNewsNetwork |  
Published : Mar 29, 2024, 12:46 AM IST
ದದದ | Kannada Prabha

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೇ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೋ? ಇಲ್ಲವೋ? ಎಂಬ ಸಂಶಯ ಬರುವಂತಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಮನಗೂಳಿ ಪಟ್ಟಣದ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆ ಮಾಡುವ ಮೂಲಕ ಬಿಜೆಪಿ ಮುಖಂಡರೇ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. 2018-19ರಲ್ಲಿ ಮೋದಿ ಅವರು ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿದ್ದರು. ಹಲವಾರು ಭರವಸೆ ನೀಡಿದ್ದರು. ಹೀಗೆ 10 ವರ್ಷವಾದರೂ ಯಾವ ಭರವಸೆಯೂ ಈಡೇರಿಲ್ಲ ಎಂದರು.

ಗ್ಯಾರಂಟಿ ಯೋಜನೆ ಮೂಲಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನಮಾನ ನೀಡಿರುವುದು ಕಾಂಗ್ರೆಸ್‌ ಸರ್ಕಾರ. ಪ್ರತಿಯೊಬ್ಬ ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ಜೀವನ ನಡೆಸುವಂತೆ ಮಾಡಿರುವುದು ನಮ್ಮ ಕಾಂಗ್ರೆಸ್‌ ಸರ್ಕಾರ. ನೂರಕ್ಕೆ 80ರಷ್ಟು ಮಹಿಳೆಯರು ಕಾಂಗ್ರೆಸ್‌ಗೆ ಮತ ನೀಡುವ ಭರವಸೆ ಇದೆ. ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಯೋಜನೆಗಳನ್ನು ದೇಶದಲ್ಲಿಯೋ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಬಿಜಿಪಿ ಅಭ್ಯರ್ಥಿಗಳು ಮೋದಿ ನೋಡಿ ಮತ ಹಾಕಿ ಎನ್ನುತ್ತಾರೆ ಆ ತಪ್ಪನ್ನು ಯಾರು ಮಾಡಬೇಡಿ. ನಮ್ಮ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತುವರಿಗೆ ಮತ ನೀಡಿ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಮೂಲಕ ಮತ ಕೇಳುವ ನೈತಿಕತೆ ಹೊಂದಿದೆ. ಕಾಂಗ್ರೆಸ್‌ ಪಕ್ಷದ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಸರಳ ಸಜ್ಜನಿಕೆಯ ವ್ಯಕ್ತಿ ಆಗಿದ್ದಾರೆ. ಜಿಲ್ಲೆಯ ಜನತೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲ ರಾಜು ಆಲಗೂರ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕಿದೆ ಎಂದರು.

ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಇರುವ ನಾಯಕ ರಮೇಶ ಜಿಗಜಿಣಗಿ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗೆಹರಿಸುವಲ್ಲಿ ಜಿಗಜಿಣಗಿ ಅವರು ವಿಫಲರಾಗಿದ್ದಾರೆ. ಜಿಲ್ಲೆಯ ಕಾಂಗ್ರೆಸ್‌ ಮುಖಂಡರಾದ ಶಿವಾನಂದ ಪಾಟೀಲ, ಎಂ.ಬಿ ಪಾಟೀಲ, ಸಿ.ಎಸ್ ನಾಡಗೌಡ ಸೇರಿದಂತೆ ಎಲ್ಲ ನಾಯಕರ ಒಮ್ಮತದಿಂದ ನಾನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ಆರ್.ಎನ್.ಸೂಳಿಬಾವಿ, ರಫೀಕ್‌ ಠಪಾಲ್, ಚಂದ್ರಶೇಖರ ಪಾಟೀಲ, ಶಿವನಗೌಡ ಗುಜಗೊಂಡ, ಬಸವರಾಜ ಸೋಮಪುರ, ಎಂ.ಸಿ.ಮುಲ್ಲಾ, ಬಿ.ಎಲ್.ಪಾಟೀಲ, ಕಲ್ಲು ದೇಸಾಯಿ, ಸಲೀಂ ಅತ್ತಾರ, ಎಸ್.ಬಿ.ಪತಂಗಿ, ಸಿ.ಎಸ್.ಗಿಡ್ಡಪ್ಪಗೋಳ, ಉಸ್ಮಾನಪಟೇಲ ಖಾನ್, ಮುಸ್ಕಾನ್‌ ಶಿರಬೂರ, ಶೇಖರಗೌಡ ಪಾಟೀಲ, ರಫೀಕ್‌ ಪಕಾಲಿ, ಸಂಗಮೇಶ ಹಾರಿವಾಳ, ರಾಜುಗೌಡ ಪಾಟೀಲ, ರವಿ ರಾಠೋಡ, ಭಾಗ್ಯರಾಜ ಸೊನ್ನದ ನಿರೂಪಿಸಿ, ವಂದಿಸಿದರು.

---------

ಮಗಳ ಪರವಾಗಿ ಮತಯಾಚನೆ

ಬಾಗಲಕೋಟೆಯಲ್ಲಿ ನಿಮ್ಮ ಬಂಧು ಬಳಗ ಇದ್ದರೆ ಅವರಿಗೆ ಹೇಳಿ ನನ್ನ ಮಗಳಿಗೆ ಮತ ನೀಡುವಂತೆ ಕೈ ಮುಗಿಯುವ ಮೂಲಕ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಮತಯಾಚನೆ ಮಾಡಿದರು.ಗೋಲಗುಮ್ಮಟದಲ್ಲಿ ನಿಂತು ಓ ಅಂದರೆ ಅದು ಏಳು ಸಾರಿ ಪ್ರತಿಧ್ವನಿಸುತ್ತದೆ. ಆದರೆ ನಮ್ಮ ಸಂಸದರ ಮುಂದೆ 50 ಸಾರಿ ಕೂಗಿದರು ಅವರು ತಿರುಗಿಯು ನೋಡುವುದಿಲ್ಲ.

-ಶಿವಾನಂದ ಪಾಟೀಲ, ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!