ಗೋಹತ್ಯೆ ನಿಷೇಧ ಕಾಯ್ದೆ ಸಡಿಲಿಸಿದರೆ ಹೋರಾಟ: ಸುನಿಲ್‌ ಕೆ.ಆರ್‌.

KannadaprabhaNewsNetwork |  
Published : Dec 10, 2025, 02:00 AM IST
08ವಿಎಚ್‌ಪಿಉಡುಪಿ ಜಟ್ಕಾ ಸ್ಟ್ಯಾಂಡ್ ನಲ್ಲಿ ವಿಎಚ್‌ಪಿ ಪ್ರತಿಭಟನೆ ನಡೆಯಿತು | Kannada Prabha

ಸಾರಾಂಶ

ರಾಜ್ಯ ಸರ್ಕಾರ ಪ್ರಸ್ತುತ ಜಾರಿಯಲ್ಲಿರುವ ಜಾನುವಾರು ಹತ್ಯೆ ಹಾಗೂ ಅಕ್ರಮ ಸಾಗಾಟ ಪ್ರತಿಬಂಧಕ ಕಾಯ್ದೆಗೆ ತಿದ್ದು ಪಡಿ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಸೋಮವಾರ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು.

ಉಡುಪಿ: ರಾಜ್ಯ ಸರ್ಕಾರ ಪ್ರಸ್ತುತ ಜಾರಿಯಲ್ಲಿರುವ ಜಾನುವಾರು ಹತ್ಯೆ ಹಾಗೂ ಅಕ್ರಮ ಸಾಗಾಟ ಪ್ರತಿಬಂಧಕ ಕಾಯ್ದೆಗೆ ತಿದ್ದು ಪಡಿ ತಂದು, ಆ ಮೂಲಕ ಪರೋಕ್ಷವಾಗಿ ಜಿಹಾದಿಗಳಿಗೆ ಬೆಂಬಲ ನೀಡಲು ಹೊರಟಿದೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಸುನೀಲ್ ಕೆ.ಆರ್. ಆರೋಪಿಸಿದ್ದಾರೆ.

ನಗರದ ಜಟ್ಕಾ ಸ್ಟಾಂಡ್ ಬಳಿ ಈ ಕಾಯ್ದೆಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರದ ಸಂಪುಟದಲ್ಲಿ ತೆಗೆದುಕೊಳ್ಳಲಾಗಿರುವ ನಿರ್ಣಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧದ ಕುರಿತು ರಾಜ್ಯದಲ್ಲಿ ಕಠಿಣ ಕಾಯ್ದೆ ಇದೆ. ಇದರಿಂದಾಗಿ ಪೊಲೀಸರಿಗೂ ಗೋಹತ್ಯೆ ತಡೆಯಲು ಸುಲಭವಾಗಿದೆ. ಗೋಹತ್ಯೆ - ಅಕ್ರಮ ಸಾಗಾಟ ನಿಯಂತ್ರಣವಾಗಿದ್ದು ಕಾನೂನು ಸುವ್ಯವಸ್ಥೆಯಾಗಿದೆ. ಆದರೆ ಸರ್ಕಾರ ಈಗ ಜಿಹಾದಿಗಳ ಮಾತು ಕೇಳಿ ತಿದ್ದುಪಡಿ ತಂದು, ಅಕ್ರಮ ಗೋಸಾಗಾಟ ಮಾಡುವ ವಾಹನಗಳನ್ನು ಪೊಲೀಸರಿಂದ ಸುಲಭವಾಗಿ ಬಿಡಿಸಲು ಸಾಧ್ಯವಾಗುವಂತೆ ಮಾಡಲಾಗುತ್ತಿದೆ. ಸರ್ಕಾರ ಗೋಕಳ್ಳರಿಗೆ ಆಫರ್ ಕೊಡುತ್ತಿದೆ ಎಂದವರು ಹೇಳಿದರು.

ಸರ್ಕಾರದ ಈ ನಿರ್ಣಯದಿಂದ ಗೋಹತ್ಯೆ ಹೆಚ್ಚಲಿದೆ, ಹಿಂದುಗಳ ಭಾವನೆಗೆ ಧಕ್ಕೆಯಾಗಲಿದೆ. ಇದರಿಂದಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಒಂದೆಡೆ ಸರ್ಕಾರವೇ ಶಾಂತಿ ಕದಡಬಾರದು ಎಂದು ಕಠಿಣ ಕ್ರಮ ಕೈಗೊಂಡಿದೆ. ಮತ್ತೊಂದೆಡೆ ಸರ್ಕಾರವೇ ಕಠಿಣ ನೀತಿ ಸಡೀಲಿಕರಿಸಿ ತುಷ್ಠೀಕರಣ ಮಾಡುತ್ತಿದೆ. ಹಿಂದು ಮುಖಂಡರು ಹಿಂದು ಭಾವನೆ ಬಗ್ಗೆ ಧ್ವನಿ ಎತ್ತಿದರೆ ಶಾಂತಿ ಕದಡುವಿಕೆ ಎಂದು ಕೇಸ್ ಹಾಕಲಾಗುತ್ತದೆ. ಗೋರಕ್ಷಣೆ, ಹೆಣ್ಣುಮಕ್ಕಳ ರಕ್ಷಣೆಗಾಗಿ ನಾವು ಧ್ವನಿ ಎತ್ತಿದರೆ ಅದು ಹೇಗೆ ಅಶಾಂತಿ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಪ್ರಶ್ನಿಸಿದರು.

ಹಿಂದು ಮುಖಂಡ ವಿಖ್ಯಾತ್ ಭಟ್ ಮಾತನಾಡಿದರು.ಎಂದರು. ಈ ಸಂದರ್ಭದಲ್ಲಿ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರಾದ ದಿನೇಶ್ ಮೆಂಡನ್, ಸುಧೀರ್ ನಿಟ್ಟೆ, ಸುರೇಂದ್ರ ಬಾರ್ಕೂರ್, ಮಹೇಶ್ ಬೈಲೂರು, ರೇಷ್ಮಾ ಉದಯ ಶೆಟ್ಟಿ ಶ್ರೀಕಾಂತ್ ನಾಯಕ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌