ಸಭೆಗೆ ಹೋಗದೆ ರಾಜ್ಯದಲ್ಲೇ ಕುಳಿತರೆ ಅನುದಾನ ಸಿಗುತ್ತದೆಯೇ

KannadaprabhaNewsNetwork |  
Published : Jun 13, 2025, 02:19 AM IST
12ಎಚ್ಎಸ್ಎನ್6 : ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥನಾರಾಯಣ್‌. | Kannada Prabha

ಸಾರಾಂಶ

ಕರ್ನಾಟಕಕ್ಕೆ ಹಲವು ಅಭಿವೃದ್ಧಿ ಯೋಜನೆಯನ್ನು ಕೊಡಲಾಗಿದ್ದು, ನರೇಂದ್ರ ಮೋದಿ ಸಾಧನೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆಗಿರುವುದೇ ಜನರು ಅಂಕವನ್ನು ಕೊಟ್ಟಿದ್ದಾರೆ. ಇದು ಸಾಮಾನ್ಯವಾದ ವಿಚಾರವಲ್ಲ. ಹಿಂದಿನ ಅಂಕಿಅಂಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾದ ಅಂಕಿ ಅಂಶ ನೀಡಿದರೇ ತಿಳಿಯುತ್ತದೆ. ೨೦೦೯ರಿಂದ ೨೦೧೪ರವರೆಗೂ ಟ್ಯಾಕ್ಸ್ ಪಾಲು ರಾಜ್ಯಕ್ಕೆ ೯ ಸಾವಿರ ಕೋಟಿ ಇತ್ತು. ಈಗ ೨೦೨೪ ಮಾರ್ಚ್‌ಗೆ ೧ ಲಕ್ಷ ಕೋಟಿ ನೀಡಲಾಗಿದೆ. ಜಲ್ ಜೀವನ್ ಯೋಜನೆಗೆ ಕೇಂದ್ರ ೨೬ ಸಾವಿರ ಕೋಟಿ ನೀಡಿದೆ, ಭದ್ರ ಮೇಲ್ದಂಡೆಗೆ ಯೋಜನೆಗೆ ೫೩೦೦ ಕೋಟಿ ಘೋಷಣೆ ಮಾಡಿದ್ರೂ ಕೊಡ್ಲಿಲ ಅಂತಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್‌ ನಾರಾಯಣ್ ಟಾಂಗ್ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಈ ಹಿಂದೆ ೨೦೦೯ರಿಂದ ೨೦೧೪ರಲ್ಲಿ ತೆರಿಗೆ ಪಾಲು ರಾಜ್ಯಕ್ಕೆ 9 ಸಾವಿರ ಕೋಟಿ ಬರುತಿತ್ತು. ಈಗ ೨೦೨೪ ಮಾರ್ಚ್‌ಗೆ ೧ ಲಕ್ಷ ಕೋಟಿ ನೀಡಲಾಗಿದೆ. ಆದರೂ ತೆರಿಗೆ ಹಣ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರದ ಮೇಲೆ ಆರೋಪ ಮಾಡುವ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಸಭೆಗಳಿಗೆ ಹಾಜರಾಗದೆ ರಾಜ್ಯದಲ್ಲಿ ಕುಳಿತು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್‌ ನಾರಾಯಣ್ ಟಾಂಗ್ ನೀಡಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ಸರ್ಕಾರದ ೧೧ ವರ್ಷಗಳು ಸಾಧನೆಗಳ ಬಗ್ಗೆ ಹೇಳಿಕೆ ನಂತರ ರಾಜಕೀಯವಾಗಿ ಮಾತನಾಡಿದ ಅವರು, ಕರ್ನಾಟಕಕ್ಕೆ ಹಲವು ಅಭಿವೃದ್ಧಿ ಯೋಜನೆಯನ್ನು ಕೊಡಲಾಗಿದ್ದು, ನರೇಂದ್ರ ಮೋದಿ ಸಾಧನೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆಗಿರುವುದೇ ಜನರು ಅಂಕವನ್ನು ಕೊಟ್ಟಿದ್ದಾರೆ. ಇದು ಸಾಮಾನ್ಯವಾದ ವಿಚಾರವಲ್ಲ. ಹಿಂದಿನ ಅಂಕಿಅಂಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾದ ಅಂಕಿ ಅಂಶ ನೀಡಿದರೇ ತಿಳಿಯುತ್ತದೆ. ೨೦೦೯ರಿಂದ ೨೦೧೪ರವರೆಗೂ ಟ್ಯಾಕ್ಸ್ ಪಾಲು ರಾಜ್ಯಕ್ಕೆ ೯ ಸಾವಿರ ಕೋಟಿ ಇತ್ತು. ಈಗ ೨೦೨೪ ಮಾರ್ಚ್‌ಗೆ ೧ ಲಕ್ಷ ಕೋಟಿ ನೀಡಲಾಗಿದೆ. ಮೂರು ಪಟ್ಟು ಹೆಚ್ಚು ಪಾಲು ನೀಡಲಾಗಿದೆ. ಸಿದ್ದರಾಮಯ್ಯ ಅವರು ಫೈನಾನ್ಸ್ ಕೂಡ ಅವರ ಜೊತೆ ಇರುವುದರಿಂದ ಅವರು ಜಿ.ಎಸ್.ಟಿ. ಸಭೆಗೆ ಹೋಗಿ ಭಾಗವಹಿಸಬೇಕು. ಆದರೇ ಒಂದೇ ಒಂದು ಜಿ.ಎಸ್.ಟಿ. ಮೀಟಿಂಗ್‌ಗೆ ಹೋಗಲಿಲ್ಲ, ಪೈನಾನ್ಸ್ ಮೀಟಿಂಗ್‌ಗೆ ಹೋಗಲಿಲ್ಲ. ಸಿದ್ದರಾಮಯ್ಯ ಸಿಂ ಜೊತೆ ಹಣಕಾಸು ಸಚಿವರು ಆಗಿರುವುದರಿಂದ ಆ ಮೀಟಿಂಗ್ ಗೆ ಹೋಗಬೇಕು. ಆಗ ಪೈನಾನ್ಸ್ ಮೀಟಿಂಗ್‌ನಲ್ಲಿ ತೀರ್ಮಾನ ಆಗುವುದು ತಿಳಿಯುತ್ತದೆ ಎಂದು ಸಲಹೆ ನೀಡಿದರು. ವಿಮಾ ರಾಜ್ಯಗಳು ಅಂತನೂ ಇರ್ತಾವೆ. ಇದನ್ನ ಈಗ ಮಾಡಿದ್ದಲ್ಲ ಹಿಂದೆ ಆಗಿರೋದು. ಉತ್ತರ ಪ್ರದೇಶ ಕೂಡ ತಾವು ನೀಡೋ ತೆರಿಗೆ ಸರಿಯಾದ ಅನುಧಾನ ಸಿಕ್ಕಿಲ್ಲ ಅನ್ನೊ ಆರೋಪ ಇದೆ. ಆದರೆ ಜಲ್ ಜೀವನ್ ಯೋಜನೆಗೆ ಕೇಂದ್ರ ೨೬ ಸಾವಿರ ಕೋಟಿ ನೀಡಿದೆ, ಭದ್ರ ಮೇಲ್ದಂಡೆಗೆ ಯೋಜನೆಗೆ ೫೩೦೦ ಕೋಟಿ ಘೋಷಣೆ ಮಾಡಿದ್ರೂ ಕೊಡ್ಲಿಲ ಅಂತಾರೆ. ಆದರೆ ಇವ್ರು ಅದಕ್ಕೆ ಸಂಬಂಧಿಸಿದ ರಿಪೋರ್ಟ್ ಕೂಡ ರಾಜ್ಯಸರ್ಕಾರ ನೀಡಿಲ್ಲ ಮತ್ತೆ ಹೇಗೆ ಹಣ ಬಿಡುಗಡೆ ಆಗುತ್ತದೆ. ಕೇಂದ್ರ ಇಲ್ಲಿಯ ತನಕ ನೀಡಿದ ಹಣದ ಬಗ್ಗೆ ಏಕೆ ಸಿದ್ದರಾಮಯ್ಯ ಹೇಳುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ