ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಕೆಪಿಸಿಸಿಗೆ ವರದಿ ಸಲ್ಲಿಸುವೆ: ಹಾಲೇಶ

KannadaprabhaNewsNetwork |  
Published : Oct 19, 2025, 01:02 AM IST
ಹರಪನಹಳ್ಳಿಯ ಟಿಎಪಿಸಿಎಂಎಸ್‌ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಇನ್ನೊಂದು ಗುಂಪು ತಮ್ಮ ಅಭ್ಯರ್ಥಿಗಳ ಉಮೇದುವಾರಿಕೆ ಸಲ್ಲಿಸಿದರು. | Kannada Prabha

ಸಾರಾಂಶ

ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಕೆಪಿಸಿಸಿಗೆ ಸಲ್ಲಿಸುತ್ತೇವೆ

ಹರಪನಹಳ್ಳಿ: ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಕೆಪಿಸಿಸಿಗೆ ಸಲ್ಲಿಸುತ್ತೇವೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ ತಿಳಿಸಿದ್ದಾರೆ.

ಅವರು ಪಟ್ಟಣದ ಟಿಎಪಿಸಿಎಂಎಸ್‌ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಶನಿವಾರ ಕಾಂಗ್ರೆಸ್‌ ಪಕ್ಷದ ಇನ್ನೊಂದು ಗುಂಪಿನ ಸದಸ್ಯರು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

2023 ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎನ್.ಕೊಟ್ರೇಶ ಹಾಗೂ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ನಾವು ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.

ನಾವೇ ನಿಷ್ಟಾವಂತ ಕಾಂಗ್ರೆಸ್‌ ಕಾರ್ಯಕರ್ತರು, ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರು ಶಾಸಕರ ಗುಂಪಿನವರು, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ದ 2023ರ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಈ ಹಿಂದೆ ಹಡಗಲಿಯಲ್ಲಿ ಬಿಜೆಪಿ ಇಲ್ಲಿ ಪಕ್ಷೇತರ ಮಾಡಿದ್ದಾರೆ, ಶಾಸಕರ ನಿವಾಸದಲ್ಲಿ ನಡೆದ ಸಭೆಗೆ ನಮಗೆ ಯಾರು ಕರೆದಿಲ್ಲ, ಅವರ ಹಿಂಬಾಲಕರನ್ನಷ್ಟೇ ಅಭ್ಯರ್ಥಿಗಳನ್ನ ಮಾಡಿದ್ದಾರೆ. ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮೂಲಕ ಶಾಸಕರ ಜೊತೆ ಟಿಎಪಿಸಿಎಂಎಸ್‌ ಚುನಾವಣೆಗೆ ಸಂಧಾನ ನಡೆಸಿದರೆ ಅವರು ನಮ್ಮ ಬೇಡಿಕೆಗೆ ಒಪ್ಪಲಿಲ್ಲ ಎಂದು ಅವರು ನುಡಿದರು.

ಹಡಗಲಿಯಲ್ಲಿ ಬಿಜೆಪಿ ಶಾಸಕ ಕೃಷ್ಣನಾಯ್ಕ ನಿವಾಸಕ್ಕೆ ಊಟಕ್ಕೆ ಹೋಗುತ್ತಾರೆ, ಪಕ್ಷ ವಿರೋಧಿ ಚಟುವಟಿಕೆ ಅವರು ಮಾಡುತ್ತಾರೆ ಎಂದು ಹೇಳಿದರು.

ಅರಸೀಕೆರೆ ಬಿಜೆಪಿ ಮುಖಂಡ ವೈ.ಡಿ.ಅಣ್ಣಪ್ಪ ನವರ ಜೊತೆ ನಾಯಕ ಸಮಾಜದ ಸಂಘಟನೆ ವಿಚಾರದಲ್ಲಿ ಮಾತ್ರ ಹೋಗುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಆದ್ದರಿಂದ ಶಾಸಕರ ಕಡೆಯವರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಕುರಿತು ದಾಖಲೆ ಸಮೇತ ಕೆಪಿಸಿಸಿ ಗಮನಕ್ಕೆ ತರುತ್ತೇವೆ ಎಂದು ಅವರು ತಿಳಿಸಿದರು.

ಪಟ್ಟಣದ ಹಳೆ ಬಸ್‌ ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನದಿಂದ ಟಿಎಪಿಸಿಎಂಎಸ್‌ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಕಾಂಗ್ರೆಸ್‌ ಪಕ್ಷದ ಇನ್ನೊಂದು ಗುಂಪು ತಮ್ಮ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ತೀವ್ರ ಗೊಂಡಿದ್ದು, ಬಿಜೆಪಿ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಗೊಡವೆಯೇ ಬೇಡ ಎಂಬಂತ ಇದೆ. ಈ ಸಂದರ್ಭದಲ್ಲಿ ಮುತ್ತಿಗೆ ಜಂಬಣ್ಣ, ಎ.ಮೂಸಾಸಾಹೇಬ್, ಅಲಮರಸಿಕೇರಿ ಪರಶುರಾಮ, ಎಲ್.ಬಿ.ಹಾಲೇಶನಾಯ್ಕ, ವಕೀಲ ಆನಂದ, ಸೋಗಿ ಇಬ್ರಾಹಿಂ, ಅಭ್ದುಲ್‌ ಶುಕುರ ಸಾಹೇಬ್, ಪೂಜಾರ ಅರುಣ, ಎಂ.ಜಾಫರಸಾಹೇಬ್, ಎ.ಸತ್ತಾರ ಸಾಹೇಬ್, ಗುಂಡಿ ಮಂಜಪ್ಪ, ಅಯ್ಯನಹಳ್ಳಿ ಸಲಾಂ, ಕಮ್ಮಾರ ದೊಡ್ಡ ಹಾಲಪ್ಪ, ಟಿ.ಕೆಂಚಪ್ಪ, ಪಿ.ಪರಶುರಾಮಪ್ಪ, ಟಿ.ಕೆಂಚಪ್ಪ, ನಸುರುಲ್ಲಾ , ನೂರುದ್ದೀನ್ ಇತರರು ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ