ಜಡೇಕುಂಟೆ ಮಂಜುನಾಥ್
ಒಬ್ಬರು ಸತತ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವುದರಿಂದ ಇಡೀ ಜಿಲ್ಲೆಯಲ್ಲಿ ತಾನು ಪ್ರತಿನಿಧಿಸುವ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ ಮತ್ತು 2018ರಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲಿ ಸೋತರೂ ತಾನು ಮಾತ್ರ ಗೆದ್ದು ಕಾಂಗ್ರೆಸ್ ಸ್ಥಾನ ಉಳಿಸಿದ್ದೆ. ಪಕ್ಷಕ್ಕೆ ನಿಷ್ಟನಾಗಿ ಯಾವುದೇ ಆಮಿಷಗಳಿಗೆ ಬಲಿಯಾಗದೇ ಪಕ್ಷದ ಸಿದ್ಧಾಂತದ ವಿರುದ್ಧ ಎಂದಿಗೂ ಹೋದವನಲ್ಲ ಎಂಬ ದೃಷ್ಟಿಕೋನದಲ್ಲಿ ಸಚಿವಗಿರಿಗೆ ಮನವಿ ಮಾಡಿದರೆ, ಇನ್ನೊಬ್ಬರು ಹಿರಿತನದ ಆಧಾರದಲ್ಲಿ ಏಳು ಬಾರಿ ಶಾಸಕರಾಗಿ ಹತ್ತು ಹಲವು ಕಾರ್ಯಗಳನ್ನ ಮಾಡಿದ್ದೇನೆ. ಒಮ್ಮೆ ಪಕ್ಷಾಂತರ ಮಾಡಿದ್ದು ಬಿಟ್ಟರೆ ನನಗೆ ಎಲ್ಲದರಲ್ಲೂ ಹಿರಿತನವಿದೆ. ವರಿಷ್ಟರು ಮಂತ್ರಿ ಮಾಡುವ ವಿಶ್ವಾಸ ಇದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಈ ಬೆಳವಣಿಗೆಗಳನ್ನು ನೋಡಿದರೆ ಇಬ್ಬರೂ ಶಾಸಕರು ತೆರೆಮರೆಯಲ್ಲಿ ಸಚಿವಗಿರಿಗೆ ಭರ್ಜರಿ ವರ್ಕೌಟ್ ಮಾಡ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕೋಟೆನಾಡಿನ ಮಂತ್ರಿಗಿರಿ ಸೆಕೆಂಡ್ ಬಾಂಬೆ ಎನಿಸಿಕೊಂಡಿರುವ ಚಳ್ಳಕೆರೆಗೋ? ಅಥವಾ ರೇಷ್ಮೆ ಸೀರೆ ಮಾರಾಟಕ್ಕೆ ಹೆಸರಾಗಿರುವ ಮೊಳಕಾಲ್ಮೂರಿಗೋ? ಎಂಬ ಕುತೂಹಲ ಜಿಲ್ಲೆಯ ಜನರಿಗಿದೆ.ಸತತ ಮೂರು ಬಾರಿ ಗೆದ್ದಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಚಿವಾಕಾಂಕ್ಷಿಯಾಗಿದ್ದು, ಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಂತ್ರಿಗಿರಿಗೆ ಮನವಿ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅಭಿಮಾನಿಗಳು ಚಳ್ಳಕೆರೆ ಮತ್ತು ಚಿತ್ರದುರ್ಗ ದಲ್ಲಿ ಭರ್ಜರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಸಹಜವಾಗಿಯೇ ರಘುಮೂರ್ತಿ ಅವರ ಹ್ಯಾಟ್ರಿಕ್ ಗೆಲುವು ಸೇರಿದಂತೆ ಪಕ್ಷನಿಷ್ಟೆ, ಅಭಿವೃದ್ದಿ ಕಾರ್ಯಗಳಿಂದ ಮಂತ್ರಿ ಆಗುತ್ತಾರೆ ಎಂದು ಸ್ವಯಂ ಪ್ರೇರಿತವಾಗಿ ಕಾರ್ಯಕರ್ತರು ಅಭಿಮಾನಿಗಳು ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.
ನಾನು ಯಾರಿಗೂ ಕಾಲಿಗೆ ಬಿದ್ದು ಮಂತ್ರಿಗಿರಿ ಕೇಳಲ್ಲ. ಆದರೆ, ನಾನು ಸನ್ಯಾಸಿಯಲ್ಲ. ನನಗೂ ಆಸೆ ಆಕಾಂಕ್ಷೆಗಳಿವೆ ಎನ್ನುವ ಮೂಲಕ ಬಹಿರಂಗವಾಗಿ ಮಂತ್ರಿಗಿರಿಗೆ ಆಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಂತ್ರಿ ಸ್ಥಾನ ಸಿಗದೇ ಹೋದರೆ ಮುಂದಿನ ನಡೆಯ ಕುರಿತು ಬೆಂಬಲಿಗರ ಜೊತೆ ಮತ್ತೆ ಸಭೆ ನಡೆಸಿ ತೀರ್ಮಾನ ಮಾಡುವ ಎಚ್ಚರಿಕೆ ನೀಡಿದ್ದಾರೆ.ಯಾರು ಅಯೋಗ್ಯರು?