-ಚಿತ್ರದುರ್ಗದಲ್ಲಿ ಸಚಿವ ಎಂ.ಬಿ ಪಾಟೀಲ್ ಪ್ರಶ್ನೆ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಸಿದ್ದರಾಮಯ್ಯ ಅವರ ವಿಚಾರ ಬಿಡಿ, ಆದ್ರೆ ವಿಜಯೇಂದ್ರ ಪೂರ್ಣಾವಧಿ ಅಧ್ಯಕ್ಷರಾಗಿ ಇರ್ತಾರಾ ಎಂಬುದ ಮೊದಲು ಹೇಳಲಿ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಯಾವಾಗ ಬೇಕಾದ್ರು ರಾಜೀನಾಮೆ ಕೊಡಬಹುದು ಎಂಬ ವಿಜಯೇಂದ್ರ ಹೇಳಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ವಿಜಯೇಂದ್ರ ಅವರ ಕುರ್ಚಿಯ ನಾಲ್ಕು ಕಾಲುಗಳಲ್ಲಿ ಮೂರು ಹೋಗಿವೆ. ಒಂದೇ ಕಾಲಲ್ಲಿ ವಿಜಯೇಂದ್ರ ಕುರ್ಚಿ ನಿಂತಿದೆ. ನೀವು ಎಷ್ಟು ದಿನ ರಾಜ್ಯಾಧ್ಯಕ್ಷರಾಗಿ ಇರ್ತೀರಿ ಮೊದಲು ಹೇಳಿ, ನಂತರ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡೋಣ ಎಂದರು.
ಇಡಿ, ಸಿಬಿಐ, ಐಟಿ ಮೋದಿ, ಶಾ ನಿರ್ದೇಶನಕ್ಕೆ ಒಳಪಡುವ ಸಂಸ್ಥೆಗಳು. ಕಾನೂನಾತ್ಮಕ ಹೋರಾಟ ನಡೆದಿದೆ, ಅದರ ಬಗ್ಗೆ ಜಾಸ್ತಿ ಮಾಡನಾಡಲ್ಲ. ಸಿಎಂ ಅವರು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ, ನಮ್ಮ ಸಿಎಂ ಎಲ್ಲಾವನ್ನು ಎದುರಿಸಲು ಗಟ್ಟಿಯಾಗಿ ಇದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ಕಾಂಗ್ರೆಸ್ ಶಾಸಕರಿಂದ ಸರ್ಕಾರ ಬೀಳಿಸುವ ಕೆಲಸ ಎಂಬ ಯತ್ನಾಳ್ ಹೇಳಿಕೆಗೆ ಉತ್ತರ ಕೊಡಲು ಹೋಗುವುದಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಒಮ್ಮೆ ಏನೇನೋ ಯತ್ನಾಳ್ ಹೇಳ್ತಾರೆ. ನಿಮ್ಮ ಪಕ್ಷದಲ್ಲಿ ಇರುವ ಹೊಲಸು ಮೊದಲು ಶುದ್ದ ಮಾಡಿಕೊಳ್ಳಿ ಎಂದರು.