ಸೈದಾಪುರ: ನನ್ನನ್ನು ಅವಿರೋಧ ಆಯ್ಕೆ ಮಾಡುವ ಮೂಲಕ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೇವೆ ಮಾಡುವ ಅವಕಾಶ ಕೊಟ್ಟಿರುವುದು ನನ್ನ ಜವಾಬ್ದಾರಿ ಹೆಚ್ಚಾಗುವಂತೆ ಮಾಡಿದೆ. ಗ್ರಾಮೀಣ ಪತ್ರಕರ್ತರ ಪರವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯ ನೂತನ ಸದಸ್ಯ ಕೆ.ಬಿ.ರಾಘವೇಂದ್ರ ಅಭಿಪ್ರಾಯಪಟ್ಟರು.
ಗ್ರಾಮೀಣ ಭಾಗದ ಪತ್ರಕರ್ತರು ತಮ್ಮದೇಯಾದ ಸೇವಾ ಮನೋಭಾವನೆಯೊಂದಿಗೆ ಕಾರ್ಯನಿರ್ವಹಿತ್ತಿದ್ದಾರೆ. ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಸೈದಾಪುರ ಪತ್ರಕರ್ತರಿಂದ ಸನ್ಮಾನಿತರಾಗುತ್ತಿರುವುದು ನನಗೆ ವಿಶೇಷತೆಯನ್ನುಂಟು ಮಾಡುವಂತಿದೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮೇಲೆ ಇರಲಿ. ನಿಮ್ಮೆಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಕರಬಸಯ್ಯ ದಂಡಿಗಿಮಠ, ನರಸಪ್ಪ ನಾರಾಯಣೋರ, ಭೀಮಣ್ಣ ವಡವಟ್, ಮಲ್ಲಿಕಾರ್ಜುನ ಅರಿಕೇರಿಕರ್, ರಾಜು ದೊರೆ, ಅಲ್ಲಾಭಾಷಾ ಇಚಗೇರಿ, ಭೀಮಣ್ಣ ಮಡಿವಾಳ, ದೇವು ವಡವಟ್, ಅಂಬ್ರೇಶ ನಾಯಕ ಇದ್ದರು.ಕೆ,ಬಿ.ರಾಘವೇಂದ್ರ ಅವರ ಕುಟುಂಬ ವರ್ಗ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಸೇವಾ ಮನೋಭಾನವೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕೆ.ಬಿ.ರಾಘವೇಂದ್ರ ಅವರು ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿರುವುದು ಉತ್ತಮ ಬೆಳವಣಿಗೆ. ಇನ್ನೂ ಹೆಚ್ಚಿನ ಸೇವೆ ಇವರದ್ದಾಗಲಿ.
-ಕರಬಸಯ್ಯ ದಂಡಿಗಿಮಠ, ಹಿರಿಯ ಪತ್ರಕರ್ತರು, ಸೈದಾಪುರ.