ಕನ್ನಡಪ್ರಭ ವಾರ್ತೆ ಹೊಸದುರ್ಗಅರಣ್ಯ ಪ್ರದೇಶದಲ್ಲಿನ ಕಟ್ಟೆ ಹೂಳೆತ್ತಲು ಸರ್ಕಾರದ ಹಣ ಖರ್ಚಾಕುತ್ತೀರಾ ಅದೇ ರೈತರು ತಮ್ಮ ಜಮೀನಿಗೆ ಕಟ್ಟೆಯಲ್ಲಿನ ಮಣ್ಣು ತುಂಬಿದರೆ ಕೇಸು ಹಾಕುತ್ತೀರಾ. ರೈತರಿಗೆ ಮಣ್ಣು ತುಂಬಲು ಬಿಟ್ಟರೆ ಅದೇ ಹಣವನ್ನು ಬೇರೆ ಕೆಲಸಕ್ಕೆ ಬಳಸಲು ಬರುವುದಿಲ್ಲವಾ? ಎಂದು ಶಾಸಕ ಬಿ.ಜಿ.ಗೋವಿಂದಪ್ಪ ವಲಯ ಅರಣ್ಯಾಧಿಕಾರಿ ಸುನಿಲ್ ಅವರನ್ನು ಪ್ರಶ್ನಿಸಿದರು.
ಅದಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಪ್ರತಿಕ್ರಿಯಿಸಿ ಕಾನೂನಿನಲ್ಲಿ 3 ಅಡಿಗಳಷ್ಟು ಮಾತ್ರ ಮಣ್ಣು ತೆಗೆಯಲು ಅವಕಾಶವಿದೆ. ಅದರಂತೆ ರೈತರು ಮಣ್ಣು ತೆಗೆದುಕೊಂಡರೆ ಅವಕಾಶ ನೀಡಿ ಅದಕ್ಕೆ ನಾನು ಅನುಮತಿ ನೀಡುತ್ತೇನೆ ಎಂದು ವಲಯ ಅರಣ್ಯಾಧಿಕಾರಿಗೆ ಸೂಚಿಸಿದರು.
ಗಣಿ ಬಾದಿತ ಪ್ರದೇಶದಲ್ಲಿ ಅರಣ್ಯ ಇಲಾಕೆಯಲ್ಲಿ ಏನು ಕೆಲಸವಾಗುತ್ತಿದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಕೇವಲ ಗಿಡ ನೆಟ್ಟೆವು, ಸಸಿ ಮಾಡಿದೆವು ಎನ್ನುವುದೇ ನಿಮ್ಮ ಕೆಲಸವಲ್ಲ 1,500 ಎಕೆರೆ ಪ್ರದೇಶದಲ್ಲಿ ಸಸಿನೆಟ್ಟಿದ್ದೀರಾ ಎಷ್ಟು ಸಸಿಗಳು ಬೆಳೆದಿದ್ದಾವೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ತಿಳಿಸಿದರು.ಪಶು ಸಂಗೋಪನಾ ಇಲಾಕೆಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿ ಪ್ರಾರಂಭ ಮಾಡದಿರುವ ಬಗ್ಗೆ ಗರಂ ಆದ ಜಿಲ್ಲಾಧಿಕಾರಿಗಳು ಕೇವಲ ಪೂಜೆ ಮಾಡಿಸಿ ಸುಮ್ಮನಾದರೆ ಕೆಲಸ ಮಾಡಿಸುವವರು ಯಾರು ಇನ್ನೊಂದು ತಿಂಗಳೊಳಗೆ ಕೆಲಸ ಪ್ರಾರಂಭಿಸದಿದ್ದರೆ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಬದಲಾಯಿಸಿ ಎಂದು ಪಶು ಸಂಗೋಪನಾ ಇಲಾಖೆ ಎಇಇಗೆ ತಾಕೀತು ಮಾಡಿದರು.
ಗಣಿಬಾಧಿತ ಪ್ರದೇಶಾಬಿವೃದ್ಧಿ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅವಕಾಶವಿದ್ದರೂ ಎಂಜಿನಿಯರ್‌ಗಳ ಬೇಜವಬ್ದಾರಿತನದಿಂದ ಸಾಕಷ್ಟು ಗ್ರಾಮಗಳನ್ನು ಕೈಬಿಡಲಾಗಿದೆ. ಕೇವಲ ಈ ಭಾಗದ ಪಂಚಾಯಿತಿ ವ್ಯಾಪ್ತಿಯ ಮುಖ್ಯ ಗ್ರಾಮಗಳನ್ನು ಮಾತ್ರ ಪರಿಗಣಿಸಲಾಗಿದೆ ಆ ಪಂಚಾಯಿತಿಗೆ ಹೊಂದಿಕೊಂಡಿರುವ ಸಣ್ಣಸಣ್ಣ ಗ್ರಾಮಗಳ ಜನ ಏನು ಪಾಪ ಮಾಡಿದ್ದಾರೆ ಅವುಗಳನ್ನು ಈ ಯೋಜನೆಯಡಿ ಸೇರಿಸಬಹುದಿತ್ತಲ್ಲಾ ಎಂದು ಶಾಸಕರು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತ ಪಡಿಸಿದರು.ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಗ್ರಾಮೀಣ ಭಗದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಡಿಸಿ, ಶಾಸಕರು ಬಂದು ನೋಡುವುದಕ್ಕೆ ಆಗುವುದಿಲ್ಲ ಸ್ಥಳೀಯ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ತೆರಳಿ ಅದರ ಬಗ್ಗೆ ಕ್ರಮ ವಹಿಸಿಬೇಕು ಈಗಲಾದರೂ ಗಣಿ ಬಾಧಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಗ್ರಾಮಗಳಲ್ಲಿನ ಕುಂದು ಕೊರತೆಗಳ ಬಗ್ಗೆ ಗಮನ ಹರಿಸಿ ವರದಿ ನೀಡಿ ಸಾಧ್ಯವಾದರೆ ಹೆಚ್ಚುವರಿಯಾಗಿ ಅನುದಾನ ನೀಡೋಣ ಎಂದು ಲೋಕೋಪಯೋಗಿ ಎಇಇ ಮಂಜುನಾಥ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮೀನುಗಾರಿಗೆ, ಸಣ್ಣ ನೀರಾವರಿ, ಕುಡಿಯುವ ನೀರು ಸೇರದಂತೆ ವಿವಿಧ ಇಲಾಕೆಗಳಲ್ಲಿ ಕೈಗೊಂಡ ಆಬಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ನೆಡಸಲಾಯಿತು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೋಮಶೇಖರ್, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ತಿರುಪತಿ ಪಾಟೀಲ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು