ದಿವಾಳಿ ಅಂಚಿನಿಂದ ದೇಶ ರಕ್ಷಿಸಲು ಕಾಂಗ್ರೆಸ್ ಗೆಲ್ಲಿಸಿ: ಪತ್ತಾರ

KannadaprabhaNewsNetwork |  
Published : Apr 04, 2024, 01:05 AM IST
ಸುರಪುರ ನಗರದ ಕಾಂಗ್ರೆಸ್ ಕಚೇರಿಯ ವಸಂತ ಮಹಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಪತ್ತಾರ ಮಾತನಾಡಿದರು.  | Kannada Prabha

ಸಾರಾಂಶ

ಸುರಪುರ ನಗರದ ಕಾಂಗ್ರೆಸ್ ಕಚೇರಿಯ ವಸಂತ ಮಹಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಪತ್ತಾರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ಕಳೆದ 10 ವರ್ಷಗಳಿಂದ ಬಿಜೆಪಿ ಕೇಂದ್ರ ಸರಕಾರ ದೇಶವನ್ನು ದಿವಾಳಿ ಅಂಚಿಗೆ ದೂಡಿದ್ದು, ಜನತೆ ರಕ್ಷಿಸಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಎಐಟಿಯುಸಿ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಪತ್ತಾರ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅನೈತಿಕ ರಾಜಕಾರಣ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ಸನ್ನು ಪ್ರಶ್ನಿಸುವಂತೆ ಮಾಡಿದೆ. ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) ಸುರಪುರ ಶಾಖೆಯು ರಾಷ್ಟ್ರನಾಯಕ ಆದೇಶ ಮತ್ತು ಇಂಡಿಯನ್ ಅಲೆಯನ್ಸ್ ಒಕ್ಕೂಟದ ನಿರ್ಣಯದಂತೆ ಕಾಂಗ್ರೆಸ್ ಪಕ್ಷ ಬೆಂಬಲಿಸಲಿದ್ದೇವೆ ಎಂದರು.

ಕಲ್ಪನಾ ಗುರಸಣಗಿ ಮಾತನಾಡಿದರು. ರಾಜಾ ಸುಶಾಂತ ನಾಯಕ, ರಾಜಾ ವಿಜಯಕುಮಾರ ನಾಯಕ, ಮಲ್ಲಯ್ಯ ಕಮತಗಿ, ರಮೇಶ ದೊರಿ ಆಲ್ದಾಳ, ಅಹಮದ್ ಪಠಾಣ, ವೆಂಕಟೇಶ ಹೊಸಮನಿ, ದಾವೂದ ಪಠಾಣ, ಶ್ರೀದೇವಿ ಕೂಡ್ಲಗಿ, ಬಸಮ್ಮ ತಡಬಿಡಗಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!