- ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಮತಯಾಚನೆ ।
ಡಾ. ವೈ.ಎ.ನಾರಾಯಣಸ್ವಾಮಿ ಅವರನ್ನು ಈ ಬಾರಿ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಅವರನ್ನು ಬೆಂಬಲಿಸಿದರೆ ಮುಂದೆ ಸಚಿವರಾಗಲಿದ್ದಾರೆ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.
ನಗರದ ಅನುಭವ ಮಂಟಪ ಶಾಲಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುಗಳಲ್ಲಿ ಗುರುವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಡಾ. ವೈ.ಎ. ನಾರಾಯಣ ಸ್ವಾಮಿ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.ನಾರಾಯಣಸ್ವಾಮಿ ಈ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದಿದ್ದಾರೆ. ಈ ಬಾರಿ ಸಹಾ ಅವರನ್ನು ಶಿಕ್ಷಕರು ಬೆಂಬಲಿಸಿದರೆ ಮುಂದೆ ಸಚಿವರಾಗುವರು. ಅವರು ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸಾಕಷ್ಟು ಬಾರಿ ಹೋರಾಟ ಮಾಡಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕೂಡ ಕಂಡುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ನಾರಾಯಣಸ್ವಾಮಿ ಒಳ್ಳೆಯ ಬಾಂಧವ್ಯ, ಒಡನಾಟ ಹೊಂದಿದ್ದಾರೆ. ಈ ಬಾರಿ ಸಹಾ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಮಾಜಿ ವಿಪ ಸದಸ್ಯ ಅರುಣ ಶಹಪುರ, ಮಾಜಿ ಎಂಎಲ್‌ಸಿ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಬಸವರಾಜ್ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮುಖಂಡರಾದ ಯಶವಂತ ರಾವ್ ಜಾದವ್, ಧನಂಜಯ್ ಕಡ್ಲೆಬಾಳು, ಎಚ್.ಎನ್. ಶಿವಕುಮಾರ, ಸೋಮೇಶ್ವರ ಶಾಲೆಯ ಕಾರ್ಯದರ್ಶಿ ಕೆ.ಎಂ.ಸುರೇಶ, ಎಲ್.ಎನ್. ಕಲ್ಲೇಶ್, ರಾಮರೆಡ್ಡಿ, ಸಾಂಬಶಿವಯ್ಯ ಇತರರು ಇದ್ದರು.
ದಾವಣಗೆರೆಯ ವಿವಿಧ ಕಾಲೇಜುಗಳಲ್ಲಿ ಡಾ. ವೈ.ಎ. ನಾರಾಯಣ ಸ್ವಾಮಿ ಪರವಾಗಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ ಮತಯಾಚನೆ ಮಾಡಿದರು.