ಹುಬ್ಬಳ್ಳಿ-ತೊರಣಗಲ್ ವಿಭಾಗದಲ್ಲಿ ವಿಂಡೋ ಟ್ರೈಲಿಂಗ್

KannadaprabhaNewsNetwork |  
Published : Jun 08, 2025, 01:55 AM IST
6ಎಚ್‌ಯುಬಿ26ತೊರಣಗಲ್ಲಿನ ಜೆ‌ಎಸ್‌ಡಬ್ಲ್ಯೂ ಸ್ಟೀಲ್ ಘಟಕಕ್ಕೆ ಮುಕುಲ್ ಸರನ್ ಮಾಥುರ್ ಭೇಟಿ ಯೋಜನೆಗಳ ಕುರಿತು ಮಾಹಿತಿ ಪಡೆದರು. | Kannada Prabha

ಸಾರಾಂಶ

ವ್ಯಾಗನ್ ಇಳಿಕೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುವುದು ಮತ್ತು ಜೆ‌ಎಸ್‌ಡಬ್ಲ್ಯೂ ವ್ಯಾಪ್ತಿಯಲ್ಲಿ ರೈಲು ಪರೀಕ್ಷೆ (ಟಿಎಕ್ಸ್‌ಆರ್‌) ಕೇಂದ್ರಗಳ ಸಂಖ್ಯೆಯನ್ನು ವಿಸ್ತರಿಸುವ ಕುರಿತು ಚರ್ಚಿಸಲಾಯಿತು.

ಹುಬ್ಬಳ್ಳಿ: ಹುಬ್ಬಳ್ಳಿ-ತೊರಣಗಲ್ ವಿಭಾಗದಲ್ಲಿ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಶುಕ್ರವಾರ ವಿಂಡೋ ಟ್ರೈಲಿಂಗ್ ತಪಾಸಣೆ ನಡೆಸಿ ಕಾರ್ಯಾಚರಣೆ ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿದರು.

ಈ ವೇಳೆ ತೊರಣಗಲ್ಲಿನ ಜೆ‌ಎಸ್‌ಡಬ್ಲ್ಯೂ ಸ್ಟೀಲ್ ಘಟಕಕ್ಕೆ ಮುಕುಲ್ ಸರನ್ ಮಾಥುರ್ ಭೇಟಿ ನೀಡಿ ಕಚ್ಚಾ ವಸ್ತುಗಳ ನಿರ್ವಹಣೆ ಪ್ರಕ್ರಿಯೆಗಳ ಕುರಿತು ಚರ್ಚೆ ನಡೆಸಿದರು. ವಸ್ತು ನಿರ್ವಹಣೆಯಲ್ಲಿ ಉನ್ನತ ಮಾನದಂಡಗಳ ದಕ್ಷತೆ ಮತ್ತು ಸುರಕ್ಷತೆ ಕಾಪಾಡುವ ಕುರಿತಂತೆ ತಿಳಿಸಿದರು.

ಜೆ‌ಎಸ್‌ಡಬ್ಲ್ಯೂ ಸ್ಟೀಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುಶೀಲ್ ನೋವಲ್, ಜೆ‌ಎಸ್‌ಡಬ್ಲ್ಯೂ ಸ್ಟೀಲ್‌ನ ಚಾಲ್ತಿಯಲ್ಲಿರುವ ಮತ್ತು ಮುಂಬರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. 25-ಆಕ್ಸಲ್ ಲೋಡ್‌ಗಳನ್ನು ಸರಿಹೊಂದಿಸಲು ಲೋಡಿಂಗ್ ಸಾಮರ್ಥ್ಯ ವೃದ್ಧಿಸುವುದು, ವ್ಯಾಗನ್ ಇಳಿಕೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುವುದು ಮತ್ತು ಜೆ‌ಎಸ್‌ಡಬ್ಲ್ಯೂ ವ್ಯಾಪ್ತಿಯಲ್ಲಿ ರೈಲು ಪರೀಕ್ಷೆ (ಟಿಎಕ್ಸ್‌ಆರ್‌) ಕೇಂದ್ರಗಳ ಸಂಖ್ಯೆಯನ್ನು ವಿಸ್ತರಿಸುವ ಕುರಿತು ಚರ್ಚಿಸಲಾಯಿತು.

ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಪ್ರಶಾಂತ್ ಕುಮಾರ್, ಮುಖ್ಯ ಯಾಂತ್ರಿಕ ಎಂಜಿನಿಯರ್ ಪ್ರವೀಣ್ ಕುಮಾರ್ ತಿವಾರಿ, ಮುಖ್ಯ ರೋಲಿಂಗ್ ಸ್ಟಾಕ್ ಎಂಜಿನಿಯರ್ ವಿ.ಎಂ. ದಾಶಪುತ್ರ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ