ರಾಮನಗರ: ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆಗಳ ನೇತೃತ್ವದಲ್ಲಿ ಕರ್ನಾಟಕ ಸಾಹಸ ಕಲಾ ಅಕಾಡೆಮಿಯಲ್ಲಿರುವ ಖೇಲೋ ಇಂಡಿಯಾದ ಮಲ್ಲಕಂಬ ಕೇಂದ್ರದಲ್ಲಿ ನಡೆದ ಮಲ್ಲಕಂಬ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಮಲ್ಲಕಂಬ ಸ್ಪರ್ಧೆ 14 ವರ್ಷದ ಒಳಗಿನ ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗಾಗಿ ಹೀಗೆ ನಾಲ್ಕು ವಿಭಾಗಗಳಲ್ಲಿ ನಡೆಯಿತು. ನಾಲ್ಕೂ ವಿಭಾಗಗಳಲ್ಲಿ ಒಟ್ಟು 15 ಬಾಲಕ, ಬಾಲಕಿಯರು ವಿಜೇತರಾಗಿದ್ದಾರೆ.14 ವರ್ಷದ ಒಳಗಿನ ಬಾಲಕರ ವಿಭಾಗ: ಪ್ರಥಮ ಸ್ಥಾನ- ಜಯಂತ್ ಆಚಾರ್ ಆರ್, ದ್ವಿತೀಯ ಸ್ಥಾನ -ಪೂಜಿತ್ ಸಿ, ತೃತೀಯ ಸ್ಥಾನ-ವಿನೋದ್ ಗೋಂದಿ ಹಾಗೂ ಜಗದೀಶ್ ಆಯ್ಕೆಯಾಗಿದ್ದಾರೆ. 14 ವರ್ಷದ ಒಳಗಿನ ಬಾಲಕಿಯರ ವಿಭಾಗ: ಪ್ರಥಮ ಸ್ಥಾನ-ಸಿಂಚನಾ, ದ್ವಿತೀಯ ಸ್ಥಾನ-ದೀಕ್ಷಾ ಐ, ತೃತೀಯ ಸ್ಥಾನ-ದಕ್ಷತಾ ಗೆಲುವು ಸಾಧಿಸಿದ್ದಾರೆ.
17 ವರ್ಷದ ಒಳಗಿನ ಬಾಲಕರ ವಿಭಾಗ: ಪ್ರಥಮ ಸ್ಥಾನ- ಗೋಪಾಲಕೃಷ್ಣ ಗೋಂದಿ, ದ್ವಿತೀಯ ಸ್ಥಾನ-ಎ.ಲೋಹಿತ್ ಕುಮಾರ್, ತೃತೀಯ ಸ್ಥಾನ ಅನೂಜ್ ಮತ್ತು ಒ. ಯೋಗೇಶ್ .17 ವರ್ಷದೊಳಗಿನ ಬಾಲಕಿಯರ ವಿಭಾಗ: ಪ್ರಥಮ ಸ್ಥಾನ- ಎಸ್. ಚೈತನ್ಯ , ದ್ವಿತೀಯ ಸ್ಥಾನ-ಮೋಹನ್ ಕುಮಾರಿ, ತೃತೀಯ ಸ್ಥಾನ-ಮನೋಜ್ಞಾ ಮತ್ತು ಎಸ್. ಭವ್ಯಾ .
ಮಲ್ಲಕಂಬ ಸ್ಪರ್ಧೆಗೆ ಖೇಲೋ ಇಂಡಿಯಾ ಮಲ್ಲಕಂಬ ವಿಭಾಗದ ಅಧ್ಯಕ್ಷ ರಾಜಶೇಖರ್ ಚಾಲನೆ ನೀಡಿದರು. ಕರ್ನಾಟಕ ಸಾಹಸ ಕಲಾ ಅಕಾಡೆಮಿಯ ಅಧ್ಯಕ್ಷ ಹಾಸನ ರಘು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ್ರೀಡಾಪರಿವಿಕ್ಷಕ ಸುಂದರ್ ಗೌಡ, ತಾಲೂಕು ಪರಿವೀಕ್ಷಕ ನೀಲಕಂಠ ಸ್ವಾಮಿ, ಖೇಲೋ ಇಂಡಿಯಾ ಕೇಂದ್ರದ ಪ್ರಧಾನ ಶಿಕ್ಷಕ ಶ್ರೀಶೈಲ ಹೂಗಾರ ಹಾಜರಿದ್ದರು.ಸ್ಪರ್ಧೆ ಗಳ ತೀರ್ಪುಗಾರರಾಗಿ ಎಂ.ಎಸ್. ಪುಣ್ಯಶ್ರೀ, ಪವಿತ್ರ ಹೂಗಾರ ಹಾಗೂ ಜ್ಞಾನ ವಿಕಾಸ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಶಾಂತಲಾ ದೇವಿ ಕಾಂತಪ್ಪ ಕರ್ತವ್ಯ ನಿರ್ವಹಿಸಿದರು.
ಮಲ್ಲಕಂಬ ರಾಜ್ಯ ಮಟ್ಟದ ಸ್ಪರ್ಧೆ ಬಾಗಲಕೋಟೆ ಜಿಲ್ಲೆ ತುಳಸಿಗೇರಿ ಗ್ರಾಮದಲ್ಲಿ ನ.18 ರಿಂದ 20ರವರೆಗೆ ನಡೆಯಲಿದೆ. ಎಲ್ಲಾ ವಿಜೇತರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.