ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ: ಶಾಸಕ ಎನ್.ಶ್ರೀನಿವಾಸ್

KannadaprabhaNewsNetwork |  
Published : Aug 20, 2025, 01:30 AM IST
ಪೋಟೋ 5 : ಟಿ.ಬೇಗೂರು ಗ್ರಾಮದಲ್ಲಿ ಭೀಮಕೇಸರಿ ಕಬ್ಬಡಿ ಕ್ಲಬ್ ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದ ಕ್ರೀಡಾಪಟುಗಳಿಗೆ ಶಾಸಕ ಎನ್.ಶ್ರೀನಿವಾಸ್ ಶುಭಕೋರಿದರು.ಪೋಟೋ 5 : ಟಿ.ಬೇಗೂರು ಗ್ರಾಮದಲ್ಲಿ ಭೀಮಕೇಸರಿ ಕಬ್ಬಡಿ ಕ್ಲಬ್ ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದ ಕ್ರೀಡಾಪಟುಗಳಿಗೆ ಶಾಸಕ ಎನ್.ಶ್ರೀನಿವಾಸ್ ಶುಭಕೋರಿದರು. | Kannada Prabha

ಸಾರಾಂಶ

ಕಬ್ಬಡಿ ದೇಶಿಯ ಕ್ರೀಡೆಯಾಗಿದ್ದು, ಯುವಜನತೆಯನ್ನು ಕ್ರೀಡೆಯಲ್ಲಿ ತೊಡಗಿಸುವ ಉದ್ದೇಶದಿಂದ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿರುವ ಈ ಮುಖಂಡರ ಕಾರ್ಯ ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಕ್ರೀಡೆಗಳು ಮಹತ್ತರ ಪಾತ್ರವಹಿಸಲಿವೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಟಿ. ಬೇಗೂರು ಗ್ರಾಮದಲ್ಲಿ ಭೀಮಕೇಸರಿ ಕಬ್ಬಡಿ ಕ್ಲಬ್‌ನಿಂದ ಆಯೋಜಿಸಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದ ಕ್ರೀಡಾಪಟುಗಳಿಗೆ ಶುಭಕೋರಿ ಮಾತನಾಡಿದರು.

ಕಬ್ಬಡಿ ದೇಶಿಯ ಕ್ರೀಡೆಯಾಗಿದ್ದು, ಯುವಜನತೆಯನ್ನು ಕ್ರೀಡೆಯಲ್ಲಿ ತೊಡಗಿಸುವ ಉದ್ದೇಶದಿಂದ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿರುವ ಈ ಮುಖಂಡರ ಕಾರ್ಯ ಶ್ಲಾಘನೀಯ. ಸದಾ ಕ್ರೀಯಾಶೀಲರಾಗಿರುವ ತಾ.ಪಂ. ಮಾಜಿ ಸದಸ್ಯ ಮುನಿಯಪ್ಪ ಪಕ್ಷ ಸೇರ್ಪಡೆ ಆಗುತ್ತಿದ್ದಂತೆ ಸ್ವಗ್ರಾಮ ಅಭಿವೃದ್ಧಿ ವಿಚಾರ ಪ್ರಸ್ಥಾಪಿಸಿದ್ದು 2.5 ಕೋಟಿ ಅನುದಾನ, ಮುಖ್ಯಮಂತ್ರಿ ವಿಶೇಷ ಅನುದಾನ ಗ್ರಾಮಕ್ಕೆ ಬಿಡುಗಡೆ ಮಾಡಿದ್ದು ಕೆಲವೇ ದಿನಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುತ್ತೇನೆ ಎಂದರು.

ಎನ್‌ಡಿಎ ಅಧ್ಯಕ್ಷ ಎಂ.ನಾರಾಯಣಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಕೇವಲ ಟಿವಿ, ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗುತ್ತಿರುವುದರಿಂದ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಬ್ಬಡಿ ಕ್ಲಬ್‍ನ ತರಬೇತುದಾರ ಶರತ್ ಮಾತನಾಡಿ, ಎರಡು ದಿನಗಳ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಿದ್ದು ಶಿವಮೊಗ್ಗ, ಬಳ್ಳಾರಿ, ಹೊಸೂರು, ಅತ್ತಿಬೆಲೆ, ಕೆ.ಆರ್.ಪುರಂ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸೇರಿದಂತೆ ವಿವಿಧೆಡೆಗಳಿಂದ ಸುಮಾರು 34 ತಂಡಗಳು ಭಾಗವಹಿಸಿದ್ದವು ಎಂದು ಕಬ್ಬಡಿ ಕ್ಲಬ್‍ನ ತರಬೇತುದಾರ ಶರತ್ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಎನ್‌ಡಿಎ ಅಧ್ಯಕ್ಷ ಎಂ.ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಸದಸ್ಯ ಸಿ.ಪ್ರದೀಪ್, ತಾ.ಪಂ. ಮಾಜಿ ಸದಸ್ಯ ಬಿ.ಕೆ.ಮುನಿರಾಜು, ಬೂದಿಹಾಳ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜು, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾರಾಯಣಗೌಡ, ಮತ್ತಿತರರಿದ್ದರು

ಪೋಟೋ 5 : ಟಿ.ಬೇಗೂರು ಗ್ರಾಮದಲ್ಲಿ ಭೀಮಕೇಸರಿ ಕಬ್ಬಡಿ ಕ್ಲಬ್‌ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದ ಕ್ರೀಡಾಪಟುಗಳಿಗೆ ಶಾಸಕ ಎನ್. ಶ್ರೀನಿವಾಸ್ ಶುಭಕೋರಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ