ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗುವಂತೆ ಹಾರೈಸಿ ತಾಲೂಕಿನ ಕಮ್ಮರಡಿಯ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಅರ್ಚಕರಾದ ಕಮ್ಮರಡಿ ಶ್ರೀಕಾಂತ ಭಟ್ಟರ ನೇತೃತ್ವದಲ್ಲಿ ಗುರುವಾರ ನಡೆಸಿದ ಮಹಾರುದ್ರ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ದೇವಸ್ಥಾನದ ಗೌರವ ಸ್ವೀಕರಿಸಿ ಮಾತನಾಡಿದರು. ಹತ್ತು ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ಪ್ರಧಾನಿಯಾಗಿ ಸಮರ್ಥ ಆಡಳಿತ ನಡೆಸಿರುವ ನರೇಂದ್ರ ಮೋದಿಯವರು ಜಗತ್ತು ಭಾರತದ ಕಡೆಗೆ ಗಮನ ಹರಿಸುವಂತೆ ಮಾಡಿದ್ದಾರೆ. ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು. ದೇಶ ಸಮೃದ್ಧಿಯಾಗುವ ಜೊತೆಯಲ್ಲಿ ಲೋಕಕಲ್ಯಾಣವನ್ನೂ ಬಯಸಿ ಇಂದಿಲ್ಲಿ ನಡೆಸಿರುವ ಮಹಾರುದ್ರಯಾಗದ ಆಶಯ ಸಮಷ್ಟಿಯ ಹಿತವನ್ನೂ ಬಯಸಿದೆ. ಸಜ್ಜನರ ಹಾರೈಕೆ ಸಾಕಾರಗೊಳ್ಳುವ ನಂಬಿಕೆಯೂ ಇದೆ ಎಂದು ಹೇಳಿದರು.ಲೋಕ ಕಲ್ಯಾಣಾರ್ಥ ಯಾಗ:
ಕಾರ್ಯಕ್ರಮದ ಆಯೋಜಕ ಶ್ರೀಕಾಂತ ಭಟ್ಟರು ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಮಾಡಿರುವ ಈ ಯಾಗದ ಬಹು ಮುಖ್ಯ ಉದ್ದೇಶ ದೇಶದಲ್ಲಿ ಮಳೆ ಬೆಳೆ ಸಮೃದ್ಧಿಯಾಗುವ ಜೊತೆಗೆ ಭಯೋತ್ಪಾದನೆ ನಾಶವಾಗಬೇಕಿದೆ. ಭಾರತ ಲೋಕ ಗುರುವಾಗುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಸದುದ್ದೇಶದಿಂದ ಈ ಧಾರ್ಮಿಕ ಕಾರ್ಯ ನಡೆಸಲಾಗಿದೆ. ಸಕಲರಿಗೂ ಸನ್ಮಂಗಳವಾಗಲಿ ಎಂದರು.