ಆತ್ಮ ವಿಶ್ವಾಸದಿಂದ ಅಸಾಧ್ಯವಾದದ್ದು ಸಾಧಿಸಲು ಸಾಧ್ಯ: ಖಂಡ್ರೆ

KannadaprabhaNewsNetwork | Published : Jan 24, 2025 12:45 AM

ಸಾರಾಂಶ

ಕೋಳಾರ (ಕೆ) ಗ್ರಾಮದ ಹೊರವಲಯದಲ್ಲಿರುವ ಸಂಸ್ಕಾರ ಪಿಯು ಕಾಲೇಜ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಬನ್ಸಲ್ ಕ್ಲಾಸೆಸ್ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲೆಯ 10 ನೇ ತರಗತಿ ಫಲಿತಾಂಶ ಸುಧಾರಣೆ ಕಾರ್ಯಗಾರ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್ವಿದ್ಯಾರ್ಥಿಗಳು ಆತ್ಮ ವಿಶ್ವಾದಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.ಕೋಳಾರ (ಕೆ) ಗ್ರಾಮದ ಹೊರವಲಯದಲ್ಲಿರುವ ಸಂಸ್ಕಾರ ಪಿಯು ಕಾಲೇಜು ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಬನ್ಸಲ್ ಕ್ಲಾಸೆಸ್ ಸಂಯುಕ್ತಾ ಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿರುವ 2024- 25 ಸಾಲಿನ ಜಿಲ್ಲೆಯ 10ನೇ ತರಗತಿ ಫಲಿತಾಂಶ ಸುಧಾರಣೆ ಕಾರ್ಯಗಾರ ಉದ್ಘಾಟಿಸಿ ಹಾಗೂ ಶತಾಯುಷಿ ಭೀಮಣ್ಣಾ ಖಂಡ್ರೆ ಹಾಗೂ ಲಿಂಗೈಕ್ಯ ಬಸವರಾಜ ಪಾಟೀಲ್ ಹುಮನಬಾದ್‌ ಅವರ ಸ್ಮರಣಾರ್ಥವಾಗಿ ಸುರಭಿ ಎನ್‌ಜಿಒದಿಂದ ಘೋಷಣೆ ಮಾಡಿರುವ ಗೋಲ್ಡನ್ ಕಾರ್ಡ ಬಿಡುಗಡೆ ಮಾಡಿ ಮಾತನಾಡಿದರು.ವಿದ್ಯಾರ್ಥಿಗಳು ಜಿವನದಲ್ಲಿ ದೊಡ್ಡ ಗುರಿಯಿಟುಕೊಂಡು ಕಠಿಣ ಪರಿಶ್ರಮದೊಂದಿಗೆ ತಾವು ಕಂಡಿರುವ ಕನಸು ನನಸಾಗಿಸಿಕೊಳ್ಳಲು ಸಾಧ್ಯವಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಅಗತ್ಯವಿದೆ, ಕೇವಲ ವಿದ್ಯಾವಂತನಾದರೆ ಸಾಲದು, ಜೊತೆಯಲ್ಲಿ ಉತ್ತಮ ಚರಿತ್ರೆ ಹೊಂದಿರಬೇಕು ಎಂದರು.ನಮ್ಮಲ್ಲಿ ಪ್ರತಿಭಾವಂತರ ಕೊರತೆಯಿಲ್ಲ. ಇವತ್ತು ನಮ್ಮಲ್ಲಿ ಉನ್ನತ ವ್ಯಾಸಾಂಗ ಮಾಡಿ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಒಂದು ವೇಳೆ ಮರಳಿ ಭಾರತಕ್ಕೆ ಬಂದರೆ ಆ ದೇಶಗಳ ಆಡಳಿತ ವ್ಯವಸ್ಥೆ ಕುಸಿಯುತ್ತದೆ ಎಂದರು.ಸುರಭಿ ಎನ್ ಜಿ.ಓದಿಂದ ಘೋಷಿಸಿರುವ ಗೊಲ್ಡ್ ಕಾರ್ಡ್‌ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಂದ ಯಾರು 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುತ್ತಾರೆ ಅಂಥವರು ಇದರ ಸದುಪಯೊಗ ಪಡೆದುಕೊಳ್ಳಲು ಅತ್ಯುತ್ತಮ ಅವಕಾಶವಿದೆ ಎಂದು ಹೆಳಿದರು.ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, 10ನೇ ತರಗತಿಯ ಫಲಿತಾಂಶ ಸುಧಾರಣೆ ಕುರಿತು ಹಮ್ಮಿಕೊಂಡಿರುವ ಕಾರ್ಯಾಗಾರ ಸಂತಸ ತಂದಿದೆ ಎಂದರು.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅಮರ ಏರೋಳಕರ್ ಗೊಲ್ಡ್ ಕಾರ್ಡ್‌ ಪ್ರಯೋಜನ, ಸೌಲಭ್ಯ ಪಡೆಯಬೇಕಾದ ಅರ್ಹತೆ ಕುರಿತು ಸವಿಸ್ತಾರವಾಗಿ ತಿಳಿಸಿದರು.ಸಂಸ್ಥೆಯ ಅಧ್ಯಕ್ಷರಾದ ಅನುಪಮ ಏರೋಳಕರ್, ನಿರ್ದೇಶಕರಾದ ಪ್ರಕಾಶ ಟೊಣ್ಣೆ, ಕು.ಕ್ಷಿತಿಜಾ ಏರೋಳಕರ್, ಆಡಳಿತಾಧಿಕಾರಿ ಸರೋಜಾ ಅರಳಿ, ಅವಿನಾಶ ಏರೋಳಕರ್, ಬೀದರ್ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ದೊಡ್ಡಿ, ಪ್ರಾಂಶುಪಾಲ ಮಲ್ಲಿನಾಥ ಮಠಪತಿ ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕರು, ಮತ್ತಿತರರು ಇದ್ದರು.

Share this article