
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ರೈತರ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಸರ್ಕಾರ ರೈತರ ಬೇಡಿಕೆಗಳಿಗೆ ಮನ್ನಣೆ ನೀಡಬೇಕು, ನುಡಿದಂತೆ ರೈತರ ಆಶೋತ್ತರಗಳಿಗೆ ಸ್ಪಂದಿಸಿ ಎಪಿಎಂಸಿ ಕಾಯ್ದೆ ಗಟ್ಟಿಗೊಳಿಸಬೇಕು, ಭೂಸುಧಾರಣೆ ಕಾಯ್ದೆ ಹಿಂಪಡೆದು ಅನ್ನದಾತರ ಪರವಾಗಿ ನಿಲ್ಲಬೇಕು ಎಂದರು.
ಸರ್ಕಾರ ಚನ್ನರಾಯಪಟ್ಟಣದ 1777 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದ್ದು ಸರಿಯಲ್ಲ, ಕೂಡಲೇ ಇದನ್ನು ಗೆಜೆಟ್ ನಲ್ಲಿ ಸೇರಿಸಿ ರೈತರಿಗೆ ಮನ್ನಣೆ ನೀಡಬೇಕು. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ರೈತಪರ ಕಾಳಜಿ ತೋರಬೇಕು. ಕೇಂದ್ರ ನ್ಯಾಷನಲ್ ಕೃಷಿ ಮಾರುಕಟ್ಟೆ ಪ್ರೇಮ್ ವರ್ಕ್ ನೀತಿಯನ್ನು ತಿರಸ್ಕರಿಸಬೇಕು. ವಿದ್ಯುತ್ ಖಾಸಗೀಕರಣವನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕಾರ್ಮಿಕ ತಿದ್ದುಪಡಿ ಕೋಡ್ ಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ರಸಗೊಬ್ಬರ ಕೊರತೆಯನ್ನು ಸರಿದೂಗಿಸಬೇಕು, ರೈತರಿಗೆ ಟಿಸಿ ವಿಚಾರದಲ್ಲಿ ತೊಂದರೆಯಾಗದಂತೆ ಸರ್ಕಾರ ಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಮಲ್ಲೇಗೌಡ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಖಾಯಂ ಸದಸ್ಯ ರವಿನಾಯ್ಡು, ನಾಗರಾಜು, ಜಯರಾಜು, ರಾಜಣ್ಣ, ಮಾದೇವ, ಪುಟ್ಡೇಗೌಡ, ನಿಕೋಲಿಸ್, ಚಾರ್ಲಿ, ಮಹೇಶ್, ಅಶೋಕ ಕುಮಾರ್ ಇನ್ನಿತರಿದ್ದರು.