ಕನ್ನಡಪ್ರಭ ವಾರ್ತೆ ಹಲಗೂರು
ಗೊಲ್ಲರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಲಗೂರಿನ ಅನಿಕೇತನ ಲಯನ್ಸ್ ಕ್ಲಬ್, ದಳವಾಯಿ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಐ ದೃಷ್ಟಿ ಕಣ್ಣಿನ ಆಸ್ಪತ್ರೆ ಚನ್ನಪಟ್ಟಣ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಔಷಧ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವು ಸಾಂಕ್ರಾಮಿಕ ರೋಗಗಳ ಗುಣಲಕ್ಷಣಗಳನ್ನು ಆಧರಿಸಿ ಪ್ರಾಥಮಿಕ ಹಂತದಲ್ಲೇ ತಿಳಿದು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಬಹುದು. ಆದರೆ, ಬಿಪಿ, ಮಧುಮೇಹ ಸಾಂಕ್ರಾಮಿಕ ರೋಗಗಳಲ್ಲ. ಪ್ರಾಥಮಿಕ ಹಂತದಲ್ಲಿ ಕಂಡು ಹಿಡಿಯದಿದ್ದರೆ ಮರಣಾಂತಿಕವಾಗಿ ಆಗುವ ಸಂಭವವಿದೆ ಎಂದು ಎಚ್ಚರಿಸಿದರು.ಕಣ್ಣಿನ ಉಚಿತ ಪರೀಕ್ಷೆ ಜೊತೆ ಬಿಪಿ, ಶುಗರ್ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಮಾನವನ ದೇಹದಲ್ಲಿ ಕಣ್ಣು ಪ್ರಮುಖವಾದದ್ದು. ಅದರ ಆರೋಗ್ಯ ಸರಿ ಇಲ್ಲದಿದ್ದರೆ ಮನುಷ್ಯನ ಜೀವನವೇ ಅಂಧಕಾರ. ದೃಷ್ಟಿ ದೋಷ, ಸಮೀಪ ದೃಷ್ಟಿ ದೋಷ, ಕಣ್ಣು ಸಂಪೂರ್ಣ ಕಾಣದೆ ಇರುವುದನ್ನು ಪರೀಕ್ಷಿಸಲಾಗುತ್ತಿದೆ. ಇದರ ಪ್ರಯೋಜನ ಪಡೆಯಬೇಕು ಎಂದರು.
ವೈದಾಧಿಕಾರಿ ಡಾ.ಅನಿಲ್ ಮಾತನಾಡಿ, ಮನುಷ್ಯನ ಬೇರೆ ಅಂಗಗಳಿಗಿಂತ ಕಣ್ಣು ವಿಭಿನ್ನವಾದದು. ಇದು ಯಾವಾಗಲೂ ಕೆಲಸ ಮಾಡುತ್ತಿರುತ್ತದೆ. ವಯಸ್ಸಾದಂತೆ ದೃಷ್ಟಿ ಕುಂದುತ್ತದೆ. ಪೂರ್ಣವಾಗಿ ದೃಷ್ಟಿ ಹೋಗುವವರೆಗೆ ತಡೆಯದೆ ಮೊದಲೇ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕು ಎಂದರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ನಡೆಸಿ ಇದರಲ್ಲಿ 15 ಮಂದಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದು ಅವರನ್ನು ಆಸ್ಪತ್ರೆಗೆ ಬರುವುದಂತೆ ತಿಳಿಸಲಾಯಿತು. ತಪಾಸಣೆಯಲ್ಲಿ 25 ಜನರಿಗೆ ಬಿಪಿ ಶುಗರ್ ಕಂಡುಬಂದಿದ್ದು ಅವರಿಗೆ ಉಚಿತವಾಗಿ ಮಾತ್ರೆ ಔಷಧಗಳನ್ನು ನೀಡಲಾಯಿತು.