ನಾಲ್ವಡಿ ಇಲ್ಲದಿದ್ದರೆ ಮಂಡ್ಯ ಜಿಲ್ಲೆ ಬರಡು: ಎಂಎಲ್‌ಸಿ ದಿನೇಶ್‌ ಗೂಳಿಗೌಡ

KannadaprabhaNewsNetwork |  
Published : May 06, 2025, 12:20 AM IST
5ಕೆಎಂಎನ್‌ಡಿ-11ಮಂಡ್ಯ ತಾಲೂಕು ಚಂದಗಾಲು ಗ್ರಾಮದಲ್ಲಿ ಶ್ರೀ ಪಟ್ಟಲದಮ್ಮ ಮತ್ತು ಶ್ರೀ ಕೊಲ್ಲಾಪುರದಮ್ಮ ದೇವಿಯ ಮಹಾದ್ವಾರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಜಂಗಮಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ವಿಧಾನಪರಿಷತ್‌ ಶಾಸಕ ದಿನೇಶ್‌ ಗೂಳಿಗೌಡ ಅಭಿನಂದಿಸಿದರು. ಶಾಸಕ ಪಿ.ರವಿಕುಮಾರ್‌ ಇದ್ದರು. | Kannada Prabha

ಸಾರಾಂಶ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 24ನೇ ರಾಜರಾಗಿ ಸರ್ವಾಂಗೀಣ ಪ್ರಗತಿಗೆ ಕಾರಣರಾದರು. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರಂತೆ ನಾಲ್ವಡಿಯವರ ಪಾತ್ರ ಮಹತ್ವದ್ದು. ಪ್ರಾಜ್ಞರಿಗೆ ಅಧಿಕಾರ ನೀಡುವ ಮನೋಬಲ ಅರಸನಿಗಿರಬೇಕು. ಅಂಥದ್ದೊಂದು ಗುಣ ಇವರಲ್ಲಿದ್ದ ಕಾರಣ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಹಾಯ ಮಾಡಿದವರನ್ನು ಸ್ಮರಿಸುವ ಸದ್ಗುಣ ಜಿಲ್ಲೆಯ ಜನರಿಗೆ ರಕ್ತದಲ್ಲೇ ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ.ವಿಶ್ವೇಶ್ವರಯ್ಯ ಇಲ್ಲದಿದ್ದರೆ ಜಿಲ್ಲೆ ಬರಡು ಭೂಮಿಯಾಗಿರುತ್ತಿತ್ತು. ಮಹನೀಯರು ನೀಡಿದ ಕೊಡುಗೆಗಳನ್ನು ಮುಂದಿನ ದಿನಮಾನಗಳಲ್ಲಿ ಯುವಜನತೆಗೆ ತಿಳಿಸುವ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್‌ ಶಾಸಕ ದಿನೇಶ್‌ ಗೂಳಿಗೌಡ ಹೇಳಿದರು.

ಸೋಮವಾರ ಮಂಡ್ಯ ವಿಧಾನಸಭಾ ಕ್ಷೇತ್ರ ಚಂದಗಾಲು ಗ್ರಾಮದಲ್ಲಿ ಶ್ರೀಪಟ್ಟಲದಮ್ಮ ಮತ್ತು ಶ್ರೀಕೊಲ್ಲಾಪುರದಮ್ಮ ದೇವಿಯ ಮಹಾದ್ವಾರ ಪ್ರತಿಷ್ಠಾಪನೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಈ ಮಹಾನ್‌ ಚೇತನರು ಸೇರಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಾಣ ಮಾಡಿರದಿದ್ದರೆ ಇವತ್ತು ಮಂಡ್ಯ ಜಿಲ್ಲೆ ಬರಪೀಡಿತವಾಗಿರುತ್ತಿತ್ತು. ರಾಜಕಾರಣಿಗಳ ಕೊಡುಗೆಗಿಂತ ಇವರಿಬ್ಬರ ಕೊಡುಗೆ ಮೈಸೂರು ಮಹಾ ಸಂಸ್ಥಾನಕ್ಕೆ ಅಗಾಧವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ 24ನೇ ರಾಜರಾಗಿ ಸರ್ವಾಂಗೀಣ ಪ್ರಗತಿಗೆ ಕಾರಣರಾದರು. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರಂತೆ ನಾಲ್ವಡಿಯವರ ಪಾತ್ರ ಮಹತ್ವದ್ದು. ಪ್ರಾಜ್ಞರಿಗೆ ಅಧಿಕಾರ ನೀಡುವ ಮನೋಬಲ ಅರಸನಿಗಿರಬೇಕು. ಅಂಥದ್ದೊಂದು ಗುಣ ಇವರಲ್ಲಿದ್ದ ಕಾರಣ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ಶಾಸಕ ಪಿ.ರವಿಕುಮಾರ್‌, ಜಂಗಮಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್‌ ನಾಯಕ ಸ್ಟಾರ್‌ ಚಂದ್ರು ಅವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಸರ್‌.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಯುವ ಮುಖಂಡರಾದ ಸಚಿನ್‌ ಚಲುವರಾಯಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಿ.ತ್ಯಾಗರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!