ದುಬೈನಿಂದ ಪತಿ ಪಾರ್ಸೆಲ್‌ ಕಳುಹಿಸಿದ್ದಾರೆ ಎಂದು ನಂಬಿಸಿ ಮಹಿಳೆಗೆ ವಂಚನೆ

KannadaprabhaNewsNetwork |  
Published : May 03, 2026, 02:30 AM IST
ಚಳ್ಳಕೆರೆಸುದ್ದಿ ಕಡ್ಡಾಯ | Kannada Prabha

ಸಾರಾಂಶ

ಪತಿ ದುಬೈನಿಂದ ಪಾರ್ಸೆಲ್‌ ಕಳುಹಿಸಿದ್ದಾರೆಂಬ ವಂಚಕರ ಮಾತನ್ನು ನಂಬಿದ ಮಹಿಳೆ ಹಂತಹಂತವಾಗಿ ವಂಚಕರ ಬ್ಯಾಂಕ್‌ ಖಾತೆಗೆ 6.50 ಲಕ್ಷ ರು. ವರ್ಗಾಯಿಸಿ ವಂಚನೆಗೊಳಗಾಗಿದ್ದು, ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಪತಿ ದುಬೈನಿಂದ ಪಾರ್ಸೆಲ್‌ ಕಳುಹಿಸಿದ್ದಾರೆಂಬ ವಂಚಕರ ಮಾತನ್ನು ನಂಬಿದ ಮಹಿಳೆ ಹಂತಹಂತವಾಗಿ ವಂಚಕರ ಬ್ಯಾಂಕ್‌ ಖಾತೆಗೆ 6.50 ಲಕ್ಷ ರು. ವರ್ಗಾಯಿಸಿ ವಂಚನೆಗೊಳಗಾಗಿದ್ದು, ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 44 ವರ್ಷದ ಮಹಿಳೆಯೊಬ್ಬರು ಮಂಗಳೂರಿನಲ್ಲಿ ವಾಸವಾಗಿದ್ದು, ಅವರ ಪತಿ ದುಬೈನಲ್ಲಿ ಕೆಲಸದಲ್ಲಿದ್ದಾರೆ. ಅಲ್ಲಿಂದ ಪಿರ್ಯಾದಿದಾರರಿಗೆ ಹಾಗೂ ಮನೆಗೆ ಬೇಕಾಗುವ ವಸ್ತುಗಳನ್ನು ಪಾರ್ಸೆಲ್‌ ಮೂಲಕ ಕಳುಹಿಸುತ್ತಿದ್ದರು. ಏ.21ರಂದು ಸಂಜೆ ಸಮಯ ಮನೆಯಲ್ಲಿರುವಾಗ ಲಂಡನ್‌ನಿಂದ ಪಿರ್ಯಾದಿದಾರರ ನಂಬರಿಗೆ ವಾಟ್ಸಪ್‌ ಕರೆ ಮಾಡಿದ ವ್ಯಕ್ತಿಯೊಬ್ಬರು, ನಿಮ್ಮ ಪತಿ ಪಾರ್ಸೆಲ್‌ ಕಳುಹಿಸಿದ್ದು, ಅದನ್ನು ಫೆಡ್‌ ಎಕ್ಸ್‌ ಕಾರ್ಗೋ ಪಾರ್ಸಲ್‌ಗೆ ಹಾಕುವಂತೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಏ.27ರಂದು ಸಂಜೆ ಪುನಃ ಕರೆ ಮಾಡಿ, ನಿಮಗೆ ನಿಮ್ಮ ಪತಿ ಗೋಲ್ಡ್‌, ಲಂಡನ್‌ ಫೌಂಡ್ಸ್‌, ಡೈಮಂಡ್‌ ವಾಚ್‌ ಮತ್ತು ಬ್ಯಾಗ್‌ ಹೀಗೆ ಒಟ್ಟು ಸುಮಾರು 5.5 ಕೋಟಿ ರು. ಮೌಲ್ಯದ ವಸ್ತುಗಳನ್ನು ಫೆಡ್‌ ಎಕ್ಸ್‌ ಏರ್‌ ಕಾರ್ಗೊದಲ್ಲಿ ಪಾರ್ಸೆಲ್‌ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ನಂಬರ್‌ವೊಂದನ್ನು ನೀಡಿ ಅದಕ್ಕೆ ಕರೆ ಮಾಡುವಂತೆ ತಿಳಿಸಿದ್ದಾರೆ. ಪಿರ್ಯಾದಿದಾರರು ಕರೆ ಮಾಡಿ ಮಾತನಾಡಿದಾಗ ಪಾರ್ಸಲ್‌ ವಸ್ತುಗಳು ಡೆಲಿವರಿ ಮಾಡಲು ಕಸ್ಟಮ್ಸ್‌ ಚಾರ್ಜ್‌ ಮೊತ್ತ 1,10,500 ರು.ವನ್ನು ಪಿರ್ಯಾದಿದಾರರಿಂದ ಪಡೆದುಕೊಂಡಿದ್ದಾರೆ. ಇದೇ ರೀತಿ ಜಿಎಸ್‌ಟಿ, ಕಾರ್ಗೊ ಶುಲ್ಕ, ಕರೆನ್ಸಿ ಬದಲಾವಣೆ ಶುಲ್ಕ ಸೇರಿದಂತೆ ನಾನಾ ಕಾರಣಗಳನ್ನು ನೀಡಿ 6,84,500 ರು. ಪೀಕಿಸಿದ್ದಾರೆ. ಆದರೆ ಮಹಿಳೆಗೆ ಯಾವುದೇ ಪಾರ್ಸೆಲ್‌ ಬಾರದ ಕಾರಣ ವಂಚನೆಯಾಗಿರುವುದು ಗೊತ್ತಾಗಿದೆ.ಈ ಬಗ್ಗೆ ಮಂಗಳೂರು ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಯಣದ ಭಕ್ತಿರಸದಲ್ಲಿ ಮಿಂದೆದ್ದ ಗೋಕುಲಂ ಗೋಶಾಲೆ
ತುಂಬೆ ಡ್ಯಾಂಗೆ ಎಎಂಆರ್‌ ಡ್ಯಾಂ ನೀರು ಕೂಡಲೇ ಹರಿಸಿ: ವೇದವ್ಯಾಸ್‌ ಕಾಮತ್‌