ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!

KannadaprabhaNewsNetwork |  
Published : Oct 29, 2025, 01:15 AM IST
28ಕೆಎಂಎನ್ ಡಿ18 | Kannada Prabha

ಸಾರಾಂಶ

ಹಸು ಫಾರ್ಮ್ ನೋಡಿಕೊಳ್ಳಲು ಮೈಸೂರಿಗೆ ತೆರಳಿದ್ದ ದಂಪತಿ ವಾಪಸ್ ಬೆಂಗಳೂರಿಗೆ ತೆರಳುವಾಗ ಗರ್ಭೀಣಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ಸ್ವಲ್ಪ ಸಮಯದಲ್ಲೇ ಬಸ್ಸಿನಲ್ಲಿದ್ದ ಪ್ರಯಾಣಿಕರ ನೆರವಿನಿಂದ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಮನ್ಮುಲ್ ಕಚೇರಿ ಸಮೀಪದ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹಸು ಫಾರ್ಮ್ ನೋಡಿಕೊಳ್ಳಲು ಮೈಸೂರಿಗೆ ತೆರಳಿದ್ದ ದಂಪತಿ ವಾಪಸ್ ಬೆಂಗಳೂರಿಗೆ ತೆರಳುವಾಗ ಗರ್ಭೀಣಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ಸ್ವಲ್ಪ ಸಮಯದಲ್ಲೇ ಬಸ್ಸಿನಲ್ಲಿದ್ದ ಪ್ರಯಾಣಿಕರ ನೆರವಿನಿಂದ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಮನ್ಮುಲ್ ಕಚೇರಿ ಸಮೀಪದ ಮಂಗಳವಾರ ನಡೆದಿದೆ.

ಉತ್ತರ ಪ್ರದೇಶ ರಾಜ್ಯದ ಅಲಹಬಾದ್ ಜಿಲ್ಲೆಯ ಜ್ಯೂಹಿಕೋಟಿ ಊರಿನ ರಾಜಕುಮಾರ್ ಪತ್ನಿ ರಶ್ಮಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ. ಒಂದು ತಿಂಗಳ ಹಿಂದೆ ಇವರು ಹಸು ಫಾರ್ಮ್ ನೋಡಿಕೊಳ್ಳೋದಿಕ್ಕೆ ಮೈಸೂರಿನ ಸಮೀಪದ ಗ್ರಾಮವೊಂದಕ್ಕೆ ತೆರಳಿದ್ದರು.

ಆದರೆ, ಕೆಲಸ ಇವರಿಗೆ ಸರಿ ಹೋಗದ ಕಾರಣ ಪತಿ ರಾಜಕುಮಾರ್‌, ಪತ್ನಿ ರಶ್ಮಿ ಇನ್ನಿಬ್ಬರು ಮಕ್ಕಳು ಹಾಗೂ ಈಕೆಯ ಸಹೋದರಿ ಪ್ರಮೀಳಾ ಮಂಗಳವಾರ ಮೈಸೂರಿನಿಂದ- ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ನಾನ್ ಸ್ಟಾಪ್ ಬಸ್‌ನಲ್ಲಿ ತೆರಳುತ್ತಿದ್ದರು.

ಈ ವೇಳೆ ರಶ್ಮಿ ಅವರಿಗೆ ಗೆಜ್ಜಲಗೆರೆ ಗ್ರಾಮದ ಮನ್ಮುಲ್ ಸಮೀಪ ಇದ್ದಕಿದ್ದಂತೆ ಪ್ರವಸ ವೇದನೆ ಕಾಣಿಸಿಕೊಂಡಿದೆ. ಹತ್ತಿರದಲ್ಲಿ ಆಸ್ಪತ್ರೆಗಳು ಇಲ್ಲದ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣಕ್ಕೆ ತೆರಳುತ್ತಿದ್ದಾಗ ಬಸ್ ನಲ್ಲಿದ್ದ ಪ್ರಯಾಣಿಕರ ನೆರವಿನಿಂದ ಬಸ್‌ನಲ್ಲೇ ಹೆರಿಗೆಯಾಗಿದೆ.

ರಶ್ಮಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಸ್ಸಿನಲ್ಲಿದ್ದವರು ರಾಷ್ಟ್ರೀಯ ಹೆದ್ದಾರಿ ತುರ್ತು ವಾಹನಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತುರ್ತು ವಾಹನ ರಶ್ಮಿ ಹಾಗೂ ಮಗುವನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಸಾರ್ವಜನಿಕರ ಆಸ್ಪತ್ರೆಗೆ ಕರೆತಂದಾಗ ಶುಶ್ರೂಶಕಿ ಶಾರದ ಮತ್ತು ಸಹಾಯಕರಾದ ಸಹನ ಹಾಗೂ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿದ್ದರಿಂದ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ನಂತರ ಆಸ್ಪತ್ರೆ ಸಿಬ್ಬಂದಿ ಆತಂಕದಲ್ಲಿದ್ದ ಈಕೆಯ ಇನ್ನಿಬ್ಬರು ಮಕ್ಕಳಿಗೆ ಸಿಹಿ ಕೊಟ್ಟು ಸಂತೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ
ಬೆಂಗಳೂರು : ನಗರದಲ್ಲಿ ನ್ಯಾಯರಥ-ಸಂಚಾರಿ ಕಾನೂನು ಸೇವಾ ಕ್ಲಿನಿಕ್‌