ಕಾಕ್ರೋಚ್‌ ಹಿಟ್‌ ಸ್ಪ್ರೇ ಮಾಡಿ ಕಳ್ಳರ ಓಡಿಸಿದ ಮಹಿಳೆ!

KannadaprabhaNewsNetwork |  
Published : Jul 19, 2025, 02:00 AM IST
ಜಮಖಂಡಿಯ ಗೌತಮ ಬುದ್ಧ ಕಾಲೊನಿಯ ನವಣಿ ಎಂಬುವರಿಗೆ ಸೇರಿದ ಮನೆ | Kannada Prabha

ಸಾರಾಂಶ

ಮನೆಯೊಂದರಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ಕಳ್ಳರ ಗುಂಪೊಂದು ಹೊಂಚುಹಾಕಿ ಕಳ್ಳತನಕ್ಕೆ ಯತ್ನ ನಡೆಸಿ ವಿಫಲರಾದ ಘಟನೆ ನಗರದ ಗೌತಮಬುದ್ಧ ಕಾಲೊನಿಯಲ್ಲಿ ಗುರುವಾರ ನಡೆದಿದೆ.

ಜಮಖಂಡಿ: ಮನೆಯೊಂದರಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ಕಳ್ಳರ ಗುಂಪೊಂದು ಹೊಂಚುಹಾಕಿ ಕಳ್ಳತನಕ್ಕೆ ಯತ್ನ ನಡೆಸಿ ವಿಫಲರಾದ ಘಟನೆ ನಗರದ ಗೌತಮಬುದ್ಧ ಕಾಲೊನಿಯಲ್ಲಿ ಗುರುವಾರ ನಡೆದಿದೆ.

ನಗರದ ನಿವಾಸಿ ಪೃಥ್ವಿ ಪ್ರದೀಪ ನವಣಿ ಎಂಬುವರು ಮನೆಯಲ್ಲಿ ಈ ಘಟನೆ ನಡೆದಿದೆ. ಇವರು ಒಂಟಿಯಾಗಿದ್ದಾರೆ ಎಂಬುದನ್ನು ಗಮನಿಸಿದ ದುಷ್ಕರ್ಮಿಗಳು ಮಧ್ಯಾಹ್ನ 12ರ ಸುಮಾರಿಗೆ ಮನೆಗೆ ಬಂದು ಬಾಗಿಲು ಬಾರಿಸಿ ಮಹಿಳೆಯನ್ನು ಹೊರಗೆ ಕರೆದಿದ್ದಾರೆ ಎನ್ನಲಾಗಿದೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತ ಮಹಿಳೆಯ ಚಿತ್ತವನ್ನು ಬೇರೆಡೆ ಸೆಳೆದು ಸರ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದ ಮಹಿಳೆ ದಿಟ್ಟತನ ಪ್ರದರ್ಶಿಸಿದ್ದು ಪಕ್ಕದಲ್ಲಿದ್ದ ಕಾಕ್ರೋಚ್‌ ಹಿಟ್‌ನ ಬಾಟಲಿಯಿಂದ ಕಳ್ಳರ ಮುಖಕ್ಕೆ ಸ್ಪ್ರೇ ಮಾಡಿದ್ದಾರೆ. ಇದರಿಂದ ವಿಚಲಿತರಾದ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಹಿಳೆಯ ದಿಟ್ಟತನದ ಪ್ರದರ್ಶನದಿಂದ ಸಂಭವಿಸಬಹುದಾಗಿದ್ದ ಕಳ್ಳತನ ವಿಫಲವಾಗಿದೆ. ಘಟನಾ ಸ್ಥಳಕ್ಕೆ ನಗರದ ಪಿಎಸ್‌ಐ ಅನೀಲ ಕುಂಬಾರ, ಕ್ರೈಂ ವಿಭಾಗದ ಪಿಎಸ್‌ಐ ಎಚ್.ಎಚ್.ಹೊಸಮನಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ. ಮಹಿಳೆಯರು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ