ಮಹಿಳೆಯರು, ಮಕ್ಕಳಿಗೆ ಕರಾಟೆ ಕಲಿಕೆ ಅಗತ್ಯ: ಕೆ.ಪಿ.ವಸಂತ್ ಪೂವಯ್ಯ

KannadaprabhaNewsNetwork |  
Published : Dec 29, 2025, 02:15 AM IST
27ಕೆಎಂಎನ್ ಡಿ12 | Kannada Prabha

ಸಾರಾಂಶ

ಕರಾಟೆ ಕಲಿಕೆಯಿಂದ ಒಬ್ಬ ಮಹಿಳೆ ನಿರ್ಭಿತಿಯಾಗಿ ಓಡಾಡಲು ಸಹಕಾರಿಯಾಗಿದೆ. ಕರಾಟೆ ತರಗತಿಗಳಲ್ಲಿ ಪ್ರಗತಿ ಸಾಧಿಸಲು ಏಕೈಕ ಮಾರ್ಗವೆಂದರೆ ಸರಿಯಾದ ತಂತ್ರ ಬಳಸಿ ಪಂಚ್ ಹಾಗೂ ಕಿಕ್ ಮಾಡುವುದು. ಈ ರೀತಿಯ ಸಾಹಸಗಳನ್ನು ಸ್ವಯಂ-ಶಿಸ್ತಿನ ಅಭ್ಯಾಸದ ಮೂಲಕ ಮಾತ್ರ ಕಲಿಯಬಹುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಹಿಳೆಯರು, ಮಕ್ಕಳಲ್ಲಿ ಧೈರ್ಯ ಹಾಗೂ ಸಾಹಸ ಮನೋಭಾವನೆ ಬೆಳೆಸಲು ಕರಾಟೆ ಕಲಿಕೆ ಅಗತ್ಯವಾಗಿದೆ ಎಂದು ಬ್ಲಾಕ್ ಕ್ಯಾಟ್ ಕಮಾಂಡೋ ನಿವೃತ್ತ ಯೋಧ ಕೆ.ಪಿ.ವಸಂತ್ ಪೂವಯ್ಯ ತಿಳಿಸಿದರು.

ಸಮೀಪದ ಗುಡಿಗೆರೆ ಬಳಿಯ ವಿದ್ಯಾವಿಹಾರ್ ಇಂಟರ್ ನ್ಯಾಷನಲ್ ಶಾಲೆ ಹಾಗೂ ನಿಹಾನ್ ಗೋಜುರಿಯು ಕರಾಟೆ ಅಕಾಡೆಮಿ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ನಡೆದ ಕರಾಟೆ ಅಕಾಡೆಮಿಕ್ ಬೆಲ್ಟ್ ಗ್ರೇಡಿಂಗ್ ಎಕ್ಸಾಮೀನೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರಾಟೆ ಕಲಿಕೆಯಿಂದ ಒಬ್ಬ ಮಹಿಳೆ ನಿರ್ಭಿತಿಯಾಗಿ ಓಡಾಡಲು ಸಹಕಾರಿಯಾಗಿದೆ. ಕರಾಟೆ ತರಗತಿಗಳಲ್ಲಿ ಪ್ರಗತಿ ಸಾಧಿಸಲು ಏಕೈಕ ಮಾರ್ಗವೆಂದರೆ ಸರಿಯಾದ ತಂತ್ರ ಬಳಸಿ ಪಂಚ್ ಹಾಗೂ ಕಿಕ್ ಮಾಡುವುದು. ಈ ರೀತಿಯ ಸಾಹಸಗಳನ್ನು ಸ್ವಯಂ-ಶಿಸ್ತಿನ ಅಭ್ಯಾಸದ ಮೂಲಕ ಮಾತ್ರ ಕಲಿಯಬಹುದು ಎಂದರು.

ಕರಾಟೆ ತರಗತಿಗಳು ಶಾಲಾ ಕ್ರೀಡೆಗಳಿಗಿಂತ ಭಿನ್ನವಾಗಿ ವರ್ಷವಿಡೀ ಲಭ್ಯವಿರುವುದರಿಂದ ಮಕ್ಕಳು ವರ್ಷಪೂರ್ತಿ ಸ್ವಯಂ-ಶಿಸ್ತಿನ ತರಬೇತಿ ಮೂಲಕ ತಮ್ಮ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಬಹುದು. ಕರಾಟೆ ಪಾಠಗಳ ಸ್ಥಿರತೆಯೊಂದಿಗೆ ಹೆಚ್ಚು ಹೆಚ್ಚು ಶಿಸ್ತು ಬದ್ಧರಾಗಿ ಕಲಿಯುವ ಮಕ್ಕಳು ತಮ್ಮ ತಂತ್ರವನ್ನು ವೇಗವಾಗಿ ಪರಿಪೂರ್ಣಗೊಳಿಸುತ್ತಾರೆ ಎಂದರು.

ಕರಾಟೆ ಒಂದು ಕ್ರೀಡೆಯಲ್ಲ ಬದಲಾಗಿ, ದೈಹಿಕ ಮತ್ತು ಮಾನಸಿಕ ಸವಾಲಿನ ಜೀವನಶೈಲಿಯಾಗಿದೆ. ಇದಕ್ಕೆ ಹೋರಾಟಗಾರನ ಮನಸ್ಸು ಮತ್ತು ದೇಹದ ಸಂಪೂರ್ಣ ಬದ್ಧತೆಯ ಅಗತ್ಯವಿದೆ. ಸ್ವಯಂಶಿಸ್ತು ಮಗುವಿನ ಜೀವನದ ಇತರೆ ಕ್ಷೇತ್ರಗಳಿಗೂ ವಿಸ್ತರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳು ನೂರಕ್ಕೂ ಹೆಚ್ಚು‌ ಮಕ್ಕಳು ಪಾಲ್ಗೊಂಡಿದ್ದರು. ಕರಾಟೆ ತರಬೇತುದಾರರಾದ ಎ.ಬಿ.ಭರತ್ ಕುಮಾರ್, ಕೆ.ಬಿ.ಮನು, ಪಿ.ದೀನ ಸತೀಶ್, ಡಿ.ಕೆ.ಪ್ರೇಮ್ ಕುಮಾರ್, ಅಧ್ಯಕ್ಷ ಪುಟ್ಟಸ್ವಾಮಿ, ಸಂಸ್ಥಾಪಕ ಅಧ್ಯಕ್ಷ ಮಹೇಶ್, ಮುಖ್ಯಶಿಕ್ಷಕಿ ಎಂ.ಆರ್. ಪ್ರತಿಭಾ, ಶಿಕ್ಷಕಿಯರಾದ ಶೋಭಾ, ಮಮತ, ಎಚ್.ಕೆ.ಲಲಿತಾ ಸೇರಿದಂತೆ ಹಲವರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌: ಸಿದ್ದರಾಮಯ್ಯ
ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ