ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಕಡರನಾಯ್ಕನಹಳ್ಳಿಯಲ್ಲಿ ಆಯೋಜಿಸಿದ್ದ ಬಾಗಿನ ಅರ್ಪಣೆ, ವಿವಿಧ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಲೋಕದ ಉಪಕಾರಕ್ಕಾಗಿ ಸ್ತ್ರೀ ಜನನವಾಗಿದೆ. ಅವಳು ಒಲಿದರೆ ಬಡವನೂ ಬಲ್ಲಿದನಾಗುತ್ತಾನೆ ಎಂದರು.
ಮಹಾತಪಸ್ವಿ ಸೇವಾ ಪ್ರತಿಷ್ಟಾನವು ಮಹಿಳೆಯರಿಗೆ ಆತ್ಮಬಲ, ಮನೋಬಲ, ಧೈರ್ಯ ನೀಡಲು ಸಂಕಲ್ಪ ಮಾಡಿದೆ. ರಾಷ್ಟ್ರವು ಮಹಿಳೆಯರ ಮೇಲೆ ಅವಲಂಬನೆಯಾಗಿದೆ. ದೇಶಕ್ಕೇ ಅನ್ನ ನೀಡುವ ರೈತರ ಮಕ್ಕಳಿಗೆ ಕನ್ಯೆ ದೊರಕದಿರುವುದು ವಿಷಾದನೀಯ ಎಂದ ಶ್ರೀಗಳು, ಜನರಲ್ಲಿ ಸ್ವಾರ್ಥಪರ ಚಿಂತನೆಗಳ ಬದಲು, ಸಮಷ್ಠಿಪ್ರಜ್ಞೆ ಮೂಡಬೇಕಿದೆ ಎಂದರು.ಪ್ರತಿಷ್ಠಾನ ಸಂಸ್ಥಾಪಕ ಕವಿ ಗುರುರಾಜ್ ಗುರೂಜಿ ಮಾತನಾಡಿ, ಮಹಾತಪಸ್ವಿ ಸೇವಾ ಪ್ರತಿಷ್ಟಾನ ಆರಂಭವಾಗಿ 8 ವರ್ಷಗಳಾಗಿವೆ. ರಾಜ್ಯ ಮತ್ತು ತಮಿಳುನಾಡಲ್ಲಿ ಒಟ್ಟು ೨೭ ಉಪ ಶಾಖೆಗಳನ್ನು ತೆರೆಯಲಾಗಿದೆ. ಒಂದೂವರೆ ತಿಂಗಳಿಂದ ವಿವಿಧ ಭಾಗದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಬಡ ಮಹಿಳೆಯರಿಗೆ ಮಾಸಿಕ ಆಹಾರ ಸಾಮಗ್ರಿ, ಗರ್ಭಿಣಿಯರಿಗೆ ಬಯಕೆಯ ಬುತ್ತಿ ಹಾಗೂ ಗಡಿ ಕಾಯುವ ಗರ್ಭಗುಡಿಗೆ ನಮನ ಎಂಬ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು. ಉತ್ತಮ ಸ್ಪಂದನೆ ದೊರಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸಾಧಕ ಮಹಿಳೆಯರಾದ ಸುರೇಖಾ ರಾಯ್ಕರ್, ನಾಗಮ್ಮ, ಕಲಾವಿದೆ ರಂಗಮ್ಮ, ಶಶಿಕಲಾ, ಅನಸೂಯ ಅವರನ್ನು ಗೌರವಿಸಲಾಯಿತು.
ಕಡರನಾಯ್ಕನಹಳ್ಳಿಯಲ್ಲಿ ವಿವಿಧ ಸಾಧಕ ಮಹಿಳೆಯರನ್ನು ಶ್ರೀಗಳು ಗೌರವಿಸಿದರು.