ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯಸ್ಥಾನ

KannadaprabhaNewsNetwork | Published : Mar 28, 2025 1:15 AM

ಸಾರಾಂಶ

ಹೊಸಕೋಟೆ: ಹಿಂದೂ ಸಂಸ್ಕೃತಿಯಲ್ಲಿ ದೇವಾನುದೇವತೆಗಳ ಹೆಸರುಗಳಲ್ಲಿ ಮೊದಲಿಗೆ ಮಹಿಳೆಯರ ಹೆಸರಿನೊಟ್ಟಿಗೆ ಪುರುಷ ದೇವರ ಹೆಸರು ಬಳಸಲಾಗುತ್ತಿತ್ತು, ಆ ಸಂಸ್ಕೃತಿ ಅಲ್ಲಿಗೇ ನಿಂತಿದ್ದು ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಆ ಸಂಸ್ಕೃತಿಯನ್ನು ಮುಂದುವರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ: ಹಿಂದೂ ಸಂಸ್ಕೃತಿಯಲ್ಲಿ ದೇವಾನುದೇವತೆಗಳ ಹೆಸರುಗಳಲ್ಲಿ ಮೊದಲಿಗೆ ಮಹಿಳೆಯರ ಹೆಸರಿನೊಟ್ಟಿಗೆ ಪುರುಷ ದೇವರ ಹೆಸರು ಬಳಸಲಾಗುತ್ತಿತ್ತು, ಆ ಸಂಸ್ಕೃತಿ ಅಲ್ಲಿಗೇ ನಿಂತಿದ್ದು ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಆ ಸಂಸ್ಕೃತಿಯನ್ನು ಮುಂದುವರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಕುಲವನ್ನು ಮುನ್ನಡೆಸುವ ಶಕ್ತಿಯನ್ನು ದೇವರು ಕೇವಲ ಹೆಣ್ಣು ಮಕ್ಕಳಿಗೆ ನೀಡಿದ್ದಾರೆ. ಸಮಾಜದಲ್ಲಿ ಮಹಿಳೆಯರು ತುಳಿತಕ್ಕೆ ಒಳಗಾಗುತಿದ್ದ ಸಂದರ್ಭದಲ್ಲಿ ಸಾವಿತ್ರಿ ಬಾಯಿ ಫುಲೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ದೇಶಕ್ಕೆ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಸಾವಿರ ಹಾಗೂ ಸಹಾಯಕಿಯರಿಗೆ ೭೫೦ ರು. ಭತ್ಯೆ ಹೆಚ್ಚಿಸುವ ಮೂಲಕ ನಮ್ಮ ಸರ್ಕಾರ ನಿಮ್ಮ ಕ್ಷೇಮಕ್ಕೆ ಮುಂದಾಗಿದೆ. ಇದನ್ನು ಇನ್ನೂ ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು. ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಉಡುಗೊರೆ ಜೊತೆ ಸೀರೆಯನ್ನು ಹಬ್ಬಕ್ಕೂ ಮುನ್ನ ನಿಮಗೆ ತಲುಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಮ್ಮ, ತಹಸೀಲ್ದಾರ್ ಸೋಮಶೇಖರ್, ನಗರಸಭೆ ಆಯುಕ್ತ ನೀಲಲೋಚನ ಪ್ರಭು, ತಾಪಂ ಇಒ ಡಾ.ನಾರಾಯಣಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಮುನಿಯಪ್ಪ, ಮುಖಂಡರಾದ ಎಚ್ ಎಸ್ ಗೋಪಾಲ್, ವಿಜಯ್ ಕುಮಾರ್, ರಮಾ, ಪಾರ್ವತಮ್ಮ, ಸರೋಜಮ್ಮ, ಶೋಭಾ, ಸವಿತಾ, ರಾಣಿ ರಾಮಚಂದ್ರ, ಮಮತಾಗೌಡ, ಕರೀಮ್ ಅಬ್ದುಲ್ಲಾ ಇತರರು ಹಾಜರಿದ್ದರು.ಫೋಟೋ: 27 ಹೆಚ್‌ಎಸ್‌ಕೆ 2

ಹೊಸಕೋಟೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

Share this article