ಮಹಿಳೆಯರು ಮಾನವ ಜನಾಂಗದ ಅಸ್ಮಿತೆ: ಸಾಹಿತಿ ಪುಣ್ಯವತಿ

KannadaprabhaNewsNetwork |  
Published : Mar 28, 2024, 12:48 AM IST
ಚಿತ್ರ 27ಬಿಡಿಆರ್3ಬೀದರ್‌ನ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ ಏರ್ಪಡಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಪನ್ಯಾಸ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಮಾತನಾಡಿದರು. | Kannada Prabha

ಸಾರಾಂಶ

ಅಗೌರವ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ. ಸಮಾಜ ಸೇವಾ ಸಮಿತಿ ಬೀದರ್‌ ಶಾಖೆಯ ವತಿಯಿಂದ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ಮಹಿಳೆಯರು ಮಾನವ ಜನಾಂಗದ ಅಸ್ಮಿತೆಯಾಗಿದ್ದಾರೆ, ಅವರಿಗೆ ಯಾವುದೇ ತೊಂದರೆ ಹಾಗೂ ಅಗೌರವ ಆಗುವಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ತಿಳಿಸಿದರು.

ಅವರು ಸಮಾಜ ಸೇವಾ ಸಮಿತಿ ಬೀದರ್‌ ಶಾಖೆಯ ವತಿಯಿಂದ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಪನ್ಯಾಸ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮಾನವೀಯ ಹಾಗೂ ನೈತಿಕ ನೆಲೆಗಟ್ಟಿನ ಮೇಲೆ ಜೀವನ ಸಾಗಿಸುತ್ತ ಸುಂದರ ಸದೃಢ ಸಮಾಜ ನಿರ್ಮಿಸುವಂತಾಗಬೇಕು ಎಂದು ತಿಳಿಸಿದರು.

ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಧನಲಕ್ಷ್ಮಿ ಪಾಟೀಲ್‌ ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ಹೆಣ್ಣಿಗೆ ಹಿಂದಿನಿಂದಲೂ ಅನೇಕ ಸಂಕಷ್ಟಗಳು ಎದುರಾಗುತ್ತಲೆ ಇವೆ. ಅವೆಲ್ಲವನ್ನೂ ಸಹಿಸಿಕೊಂಡು ಕುಟುಂಬವನ್ನು, ಸಮಾಜವನ್ನು ಉತ್ತಮವಾಗಿ ಮುನ್ನಡಿಸಿಕೊಂಡು ಬರುತ್ತಿರುವುದು ಅವಳ ತಾಳ್ಮೆಗೆ ಸಾಕ್ಷಿಯಾಗಿದೆ ಎಂದರು.

ಅನೇಕ ಮಹಾಪುರುಷರ, ಹೋರಾಟಗಾರರ ಫಲವಾಗಿ ಇಂದು ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತ ಸ್ಥಾನ ಮಾನಗಳು ದೊರಕುತ್ತಿವೆ. ಪ್ರಸ್ತುತ ಅವಳ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕುವಂತಾಗಬೇಕು ಎಂದು ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಪುಂಡಲೀಕರಾವ್‌ ಇಟಕಂಪಳ್ಳಿ ಮಾತನಾಡಿ, ಇಂದು ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕ ಅದಃ ಪತನದಿಂದಾಗಿ ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಹೆಣ್ಣು ಮಕ್ಕಳಿಗೆ ಎಲ್ಲಾ ರೀತಿಯ ರಕ್ಷಣೆ ಸಿಗುವಂತಾಗಬೇಕು ಎಂದು ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ಗಡಿಭಾಗದಲ್ಲಿ ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯು ನಲಗುತ್ತಿದೆ. ಅನೇಕ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಹಾಗೂ ಮೂಲಸೌಲಭ್ಯಗಳನ್ನ ಒದಗಿಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಈ ಭಾಗದಲ್ಲಿ ಉಳಿಸಿ ಬೆಳೆಸುವಲ್ಲಿ ಪ್ರಮಾಣಿಕ ಸೇವೆ ಸಲ್ಲಿಸುತ್ತೇನೆ. ಎಲ್ಲಾ ಕನ್ನಡಿಗರ ಸಹಕಾರ ಇರಲಿ ಎಂದು ಕೋರಿದರು.

ಸಮಾಜ ಸೇವಾ ಸಮಿತಿ, ಬೀದರ್‌ ಸಂಚಾಲಕಿ ಮಹಾದೇವಿ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಸೇವಾ ಸಮಿತಿ, ಬೆಂಗಳೂರು ಕಾರ್ಯದರ್ಶಿ ಬಿ.ಎಂ. ಶಶಿಕಲಾ ಮಾತನಾಡಿದರು.

ಆದರ್ಶ ದಂಪತಿ ಪ್ರಶಸ್ತಿ ಪುರಸ್ಕೃತರಾದ ಡಾ. ಜಯದೇವಿ ಶರಣಪ್ಪ ಗೌರಾ ಔರಾದ, ಭೂಮಿಕಾ ಬಸವರಾಜ ಘೂಳೆ ಯನಗುಂದಾ, ರೇಣುಕಾ ರಾಜಶೇಖರ ಮಂಗಲಗಿ, ಕವಿತಾ ಶಿವದಾಸ ಸ್ವಾಮಿ, ಅನ್ನಪೂರ್ಣ ರಘುನಾಥ ಮೇತ್ರೆ, ಸುನಿತಾ ಎಮ್.ಆರ್. ಗೋಡಬೋಲೆ, ಲಲಿತಾ ದಿಗಂಬರರಾವ ಪಾಟೀಲ ಹಾಗೂ ಸಮಾಜ ರತ್ನ ಪ್ರಶಸ್ತಿ ಪುರಸ್ಕೃತರಾದ – ರೇಣುಕಾ ಎನ್‌ಬಿ, ಸುನಿತಾ ಬಿರಾದಾರ, ರಾಜೇಶ್ವರಿ ಹೂಗಾರ, ರಾಜೇಶ್ವರಿ ಕಲ್ಮನಿ, ಡಾ. ಮಹೇಂದ್ರ ಬಿರಾದಾರ, ಸಂತೋಷ ಎಲ್‌ಟಿ ಇವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ. ಭಾಗೀರತಿ ಕೊಂಡಾ ಸ್ವಾಗತಿಸಿದರೆ, ಶ್ರೀಲತಾ ಅತಿವಾಳೆ ನಿರೂಪಿಸಿದರು. ಅನ್ನಪೂರ್ಣ ಮೇತ್ರೆ ವಂದಿಸಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?