ಭಾರತದಲ್ಲಿ ಮಹಿಳೆಯರಿಗಿದೆ ಗೌರವಯುತ ಸ್ಥಾನ: ಅಭಿನವ ಬಸವಣ್ಣಜ್ಜನವರು

KannadaprabhaNewsNetwork |  
Published : Mar 11, 2026, 02:30 AM IST
ಕಾರ್ಯಕ್ರಮದಲ್ಲಿ ಡಾ. ವೇದಾರಾಣಿ ದಾಸನೂರ ಅವರಿಗೆ ಸುಕೃತಿಮಾ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಭಾರತೀಯ ಸಮಾಜವು ಮಹಿಳೆಯರನ್ನು ಸದಾ ಗೌರವಿಸುತ್ತಿದ್ದು, ಮಹಿಳೆ ದೇವತೆ ಸ್ವರೂಪ, ತಾಳ್ಮೆ, ಸ್ಮರಣ ಶಕ್ತಿ, ಎಲ್ಲವನ್ನು ನಿಭಾಯಿಸುವ ಶಕ್ತಿ ಹೊಂದಿರುವುದು ಹೆಣ್ಣು ಮಾತ್ರ.

ಲಕ್ಷ್ಮೇಶ್ವರ: ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಪಡೆದಿದ್ದಾಳೆ. ಅದಕ್ಕಾಗಿ ಮಹಿಳೆಗೆ ಭಾರತದಲ್ಲಿ ಶ್ರೇಷ್ಠ ಸ್ಥಾನ ನೀಡಿ ಗೌರವಿಸಲಾಗುತ್ತಿದೆ ಎಂದು ಕುಂದಗೋಳ ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು ತಿಳಿಸಿದರು.

ಭಾನುವಾರ ಪಟ್ಟಣದ ಕೆಂಚಲಪುರ ಓಣಿಯಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಾರತೀಯ ಸಮಾಜವು ಮಹಿಳೆಯರನ್ನು ಸದಾ ಗೌರವಿಸುತ್ತಿದ್ದು, ಮಹಿಳೆ ದೇವತೆ ಸ್ವರೂಪ, ತಾಳ್ಮೆ, ಸ್ಮರಣ ಶಕ್ತಿ, ಎಲ್ಲವನ್ನು ನಿಭಾಯಿಸುವ ಶಕ್ತಿ ಹೊಂದಿರುವುದು ಹೆಣ್ಣು ಮಾತ್ರ. ಮಹಿಳೆ ತನ್ನ ಕುಟುಂಬದ ಪ್ರಗತಿಯ ಜತೆಗೆ ಸುಭದ್ರ, ಸುಸಂಸ್ಕೃತ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರು.ಡಾ. ವೇದಾರಾಣಿ ದಾಸನೂರ ಮಾತನಾಡಿ, ಮಹಿಳೆ ಸಮಾಜದ ಬಹುಮುಖ್ಯ ಅಂಗವಾಗಿದ್ದು, ಮಹಿಳೆ ಸುಶಿಕ್ಷಿತಳಾಗಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಆ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಎಲ್ಲ ರಂಗಗಳಲ್ಲಿ ಮಹಿಳೆಯರ ಸಾಧನೆ ಸಮಾನತೆ ತೋರಿಸುತ್ತಿದೆ ಎಂದರು.

ಡಾ. ವೇದಾರಾಣಿ ದಾಸನೂರ ಅವರಿಗೆ ಸುಕೃತಿಮಾ ಪ್ರಶಸ್ತಿಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಸಂತಾ ಹುಲ್ಲತ್ತಿ ಅವರು ಪ್ರದಾನ ಮಾಡಿದರು.ಕಾರ್ಯಕ್ರಮವನ್ನು ಡಾವಣಗೆರೆಯ ಗಿರಿಜಾ ಉಮಾಪತಿ ಅವರು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಸುನೀತಾ ಮಂಜುನಾಥ ಮಾಗಡಿ ವಹಿಸಿದ್ದರು. ತಾಯಿ ಮಗಳ ಬಾಂಧವ್ಯದ ಸಂಕೇತವಾಗಿ ಏರ್ಪಡಿಸಿದ್ದ ನನ್ನ ಅಮ್ಮ ನನ್ನ ಪ್ರಪಂಚ ಸ್ಪರ್ಧೆಯನ್ನು ಜಯಲಕ್ಷ್ಮೀ ಗಡ್ಡದೇವರಮಠ ಉದ್ಘಾಟಿಸಿ ಶುಭ ಕೋರಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತೆ ಲಲಿತಾ ಕೆರಿಮನಿ, ಸಂಘದ ತಾಲೂಕು ಅಧ್ಯಕ್ಷೆ ಶಾರದಾ ಮಹಾಂತಶೆಟ್ಟರ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಮಾಲಾದೇವಿ ದಂದರಗಿ, ರಶ್ಮಿ ಕುಂಕೋದ, ಜಯಲಕ್ಷ್ಮೀ ಮಹಾಂತಶೆಟ್ಟರ, ನಿರ್ಮಲಾ ಅರಳಿ, ಮಮತಾ ಪೂಜಾರ, ಪರಮೇಶ್ವರಿ ಪುರಾಣಿಕಮಠ, ಕೃತಿಕಾ ಮಾಗಡಿ, ಶೈಲಾ ಆದಿ, ರತ್ನಾ ಕರ್ಕಿ, ಜ್ಯೋತಿ ರಾಜೊಳ್ಳಿ, ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಸೇರಿದಂತೆ ಅನೇಕರಿದ್ದರು. ರತ್ನಾ ಕುಂಬಾರ, ಎಚ್.ಡಿ. ನಿಂಗರಡ್ಡಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಂಪನ್ನ
ಸ್ತ್ರೀಯರ ಸಾಧನೆಗೆ ಪ್ರೋತ್ಸಾಹಿಸಿ: ಅರುಣಾ ಗುಜ್ಜರಿ