ಮಹಿಳೆಯರು ಸೀಮಿತ ಮನೋಭಾವದಿಂದ ಹೊರಬರಬೇಕು: ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ

KannadaprabhaNewsNetwork |  
Published : Nov 12, 2026, 01:15 AM IST
್ಿ್ಿ್ಿ | Kannada Prabha

ಸಾರಾಂಶ

ಒನಕೆ ಓಬವ್ವ ಕೆಳವರ್ಗದ ಮಹಿಳೆಯೊಬ್ಬರು ತೋರಿದ ಅಪ್ರತಿಮ ಧೈರ್ಯ ಮತ್ತು ಸಾಹಸಕ್ಕೆ ಸಾಕ್ಷಿಯಾಗಿದ್ದಾರೆ. ಕೋಟೆಯನ್ನು ಕಾಯುವುದು ಅಂದಿನ ಕಾಲದಲ್ಲಿ ದೇಶವನ್ನು ಕಾಯುವಷ್ಟೇ ಮಹತ್ವದ ಕೆಲಸವಾಗಿತ್ತು. ಅಂತಹ ಸಂದರ್ಭದಲ್ಲಿ ಕೈಗೆ ಸಿಕ್ಕ ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಶತ್ರುಗಳನ್ನು ಎದುರಿಸಿದ ಓಬವ್ವನ ಧೈರ್ಯ ಎಲ್ಲರಿಗೂ ಪ್ರೇರಣೆಯಾಗಬೇಕು.

ಕನ್ನಡಪ್ರಭ ವಾರ್ತೆ, ತುಮಕೂರು

ವೀರ ವನಿತೆ ಒನಕೆ ಓಬವ್ವ ಅವರು ಧೈರ್ಯ ಮತ್ತು ಸಾಹಸದ ಪ್ರತೀಕವಾಗಿದ್ದು, ಸ್ತ್ರೀಯರ ಧೈರ್ಯದ ಸಂಕೇತ. ಮಹಿಳೆಯರು ಸೀಮಿತ ಮನೋಭಾವದಿಂದ ಹೊರಬಂದು ಧೈರ್ಯದಿಂದ ಮುನ್ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಒನಕೆ ಓಬವ್ವ ಅವರ ಸ್ವಾಮಿ ನಿಷ್ಠೆ, ಸಮಯ ಪ್ರಜ್ಞೆ, ಧೈರ್ಯ ಇಂದಿನ ಮಹಿಳೆಯರಿಗೆ ಮಾದರಿ ಎಂದು ತಿಳಿಸಿದರು.

ಒನಕೆ ಓಬವ್ವ ಕೆಳವರ್ಗದ ಮಹಿಳೆಯೊಬ್ಬರು ತೋರಿದ ಅಪ್ರತಿಮ ಧೈರ್ಯ ಮತ್ತು ಸಾಹಸಕ್ಕೆ ಸಾಕ್ಷಿಯಾಗಿದ್ದಾರೆ. ಕೋಟೆಯನ್ನು ಕಾಯುವುದು ಅಂದಿನ ಕಾಲದಲ್ಲಿ ದೇಶವನ್ನು ಕಾಯುವಷ್ಟೇ ಮಹತ್ವದ ಕೆಲಸವಾಗಿತ್ತು. ಅಂತಹ ಸಂದರ್ಭದಲ್ಲಿ ಕೈಗೆ ಸಿಕ್ಕ ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಶತ್ರುಗಳನ್ನು ಎದುರಿಸಿದ ಓಬವ್ವನ ಧೈರ್ಯ ಎಲ್ಲರಿಗೂ ಪ್ರೇರಣೆಯಾಗಬೇಕು. ಧೈರ್ಯವಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ. ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣವೇ ಮೊದಲ ಆಯುಧವಾಗಿದ್ದು, ಮಕ್ಕಳನ್ನು ಉತ್ತಮವಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಸಾಧನೆ ಮಾಡುವುದು ನಮ್ಮ ಕೈಯಲ್ಲಿಯೇ ಇದೆ. ಪ್ರತಿಯೊಬ್ಬರಲ್ಲೂ ಓಬವ್ವನಂತಹ ಧೈರ್ಯ ಮೂಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹರಿಕಥಾ ವಿದ್ವಾನ್ ಲಕ್ಷ್ಮಣ್‌ದಾಸ್ ಮಾತನಾಡುತ್ತಾ, ‘ಧೈರ್ಯಂ ಸರ್ವತ್ರ ಸಾಧನಂ'''''''' ಎಂಬ ಮಾತಿನಂತೆ ಧೈರ್ಯ ಮತ್ತು ಶೌರ್ಯದ ಪ್ರತಿರೂಪವೇ ಒನಕೆ ಓಬವ್ವ. ಶತ್ರುಗಳ ದಾಳಿಯನ್ನು ಎದುರಿಸಲು ಕೈಗೆ ಸಿಕ್ಕ ಒನಕೆಯನ್ನೇ ಬಳಸಿಕೊಂಡು ಅಸಾಧಾರಣ ಸಾಹಸ ಮೆರೆದವರು. ಓಬವ್ವನ ಸಾಹಸಗಾಥೆಯನ್ನು ಕವಿಗಳು ತಮ್ಮ ಬರಹಗಳ ಮೂಲಕ ಜನರಿಗೆ ಪರಿಚಯಿಸಿದ್ದಾರೆ. ಅವರ ಜೀವನದ ಕುರಿತು ಇನ್ನಷ್ಟು ಐತಿಹಾಸಿಕ ಅಧ್ಯಯನ ನಡೆಯಬೇಕಿದೆ. ಚಿತ್ರಗಳಲ್ಲಿ ತೋರಿಸಿರುವ ಕೆಲವು ಘಟನೆಗಳ ಬಗ್ಗೆ ಐತಿಹಾಸಿಕ ಸತ್ಯಾಸತ್ಯತೆ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿಯನ್ನು ಸನ್ಮಾನಿಸಲಾಯಿತು. ಅಲ್ಲದೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಟೌನ್‌ಹಾಲ್ ವೃತ್ತದಿಂದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಒನಕೆ ಓಬವ್ವನ ಭಾವಚಿತ್ರ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಾ: ಸಿದ್ದರಾಮಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌