ಕನ್ನಡಪ್ರಭ ವಾರ್ತೆ ಹಾಸನ
ಮೊದಲು ಮಹಿಳೆಯರು ಜಾಗೃತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕಲಿಸಬೇಕೆಂದು ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠದ ಲಾಳನಹಳ್ಳಿ ಮಠಾಧೀಶೆ, ಶರಣೆ ಜಯದೇವಿ ತಾಯಿ ತಿಳಿಸಿದರು.ನಗರದ ಶ್ರೀ ಜವನಹಳ್ಳಿ ಮಠದಲ್ಲಿ ಹುಣ್ಣಿಮೆ ಕಾರ್ಯಕ್ರಮ,ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಹಿಳೆಯರು ಜಾಗೃತರಾಗಿ ಪರಿಪೂರ್ಣರಾಗಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು. ಶ್ರದ್ಧೆ, ಭಕ್ತಿ , ಭಾವ, ನಂಬಿಕೆಯೊಂದಿಗೆ ನಾವು ಬದುಕುತ್ತಿದ್ದೇವೆ, ವಿಶ್ವಾಸ ಗಳಿಸುವ ಬದುಕು ಆದರ್ಶಪ್ರಾಯವಾದುದು, ನಾವೆಲ್ಲರೂ ಕಾಯಕ ಮಾಡಿ ಜೀವನ ನಡೆಸುತ್ತಾ ಉತ್ತಮ ಬದುಕು ಕಾಣುತ್ತಿದ್ದೇವೆ. ತಂದೆ ತಾಯಿಯವರ ನಡೆ- ನುಡಿ, ಆಚಾರ - ವಿಚಾರಗಳಿಂದ ಜೀವನದಲ್ಲಿ ನಾವು ಉನ್ನತ ಮಟ್ಟಕ್ಕೇರಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಹಾಸನ ಜವನಹಳ್ಳಿ ಮಠದ ಮಠಾಧೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ, ಜವೇನಹಳ್ಳಿ ಮಠದಲ್ಲಿ ಜ್ಯಾತ್ಯಾತೀತವಾಗಿ ಎಲ್ಲಾ ಸಮಾಜದವರನ್ನೊಳಗೊಂಡು ಈ ಹುಣ್ಣಿಮೆ ಕಾರ್ಯಕ್ರಮ ಹಾಗೂ ಪ್ರತಿ ತಿಂಗಳಲ್ಲಿ ಬರುವ ದಾರ್ಶನಿಕರ ಸ್ಮರಣೆ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಉತ್ತಮ ಬೆಳವಣಿಗೆ, ಧ್ಯಾನ, ಪ್ರವಚನಗಳು, ಬೆಳದಿಂಗಳ ಊಟ, ಪ್ರಸಾದ ನೀಡಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಪ್ರತಿ ತಿಂಗಳು ಏರ್ಪಡಿಸಲಾಗಿದೆ. ಇದರಿಂದ ಸಮಾಜದ ಹಲವು ದಾರ್ಶನಿಕರ ವಿಚಾರಗಳನ್ನು ಭಕ್ತರಿಗೆ ಅಶೀರ್ವಚನ ಮೂಲಕ ತಿಳಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಲ್ಯಾಣಪುರ ಬಸವೇಶ್ವರ ಮಠದ ಮಠಾಧೀಶೆ, ಶರಣೆ ಚಿನ್ನಮ್ಮಯಿ ಮಾತಾಜಿ, ಶ್ರೀ ಜವನಹಳ್ಳಿ ಮಠದ ಭಕ್ತರಾದ ಕಟ್ಟಾಯ ಶಿವಕುಮಾರ್, ಮಹಾಂತೇಶ್, ಎಚ್. ವಿಜಯಕುಮಾರ್, ಅವಿನಾಶ್, ಹೇಮಂತ್ ಕುಮಾರ್, ಬಟ್ಟೆಗೋಪಾಲ್, ವಿಜಯಲಕ್ಷ್ಮೀ, ಕುಮಾರ್, ನಿಶಾ ಕೊಥಾರಿ ಮೊದಲಾದವರು ಉಪಸ್ಥಿತರಿದ್ದರು.