ಮಹಿಳೆಯರು ತಮ್ಮಲ್ಲಿನ ಜ್ಞಾನ, ಶಕ್ತಿ ಹಾಗೂ ಸಾಮರ್ಥ್ಯಗಳ ಅರಿವು ಮಾಡಿಕೊಳ್ಳದಿದ್ದರೆ ಹೊರ ಪ್ರಪಂಚದ ಜ್ಞಾನ ಹಾಗೂ ಶಿಸ್ತುಗಳನ್ನು ಅರಿತರೂ ಯಾವುದೇ ಪ್ರಯೋಜನವಿಲ್ಲ ಎಂಬುದು ಅಕ್ಕ ಮಹಾದೇವಿಯ ಅನುಭವವಾಗಿತ್ತು ಎಂದು ಕುಶಾಲನಗರದ ಅಕ್ಕನ ಬಳಗದ ಅಧ್ಯಕ್ಷೆ ಕಮಲ ಉದಯ ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರಮಹಿಳೆಯರು ತಮ್ಮಲ್ಲಿನ ಜ್ಞಾನ, ಶಕ್ತಿ ಹಾಗೂ ಸಾಮರ್ಥ್ಯಗಳ ಅರಿವು ಮಾಡಿಕೊಳ್ಳದಿದ್ದರೆ ಹೊರ ಪ್ರಪಂಚದ ಜ್ಞಾನ ಹಾಗೂ ಶಿಸ್ತುಗಳನ್ನು ಅರಿತರೂ ಯಾವುದೇ ಪ್ರಯೋಜನವಿಲ್ಲ ಎಂಬುದು ಅಕ್ಕ ಮಹಾದೇವಿಯ ಅನುಭವವಾಗಿತ್ತು ಎಂದು ಕುಶಾಲನಗರದ ಅಕ್ಕನ ಬಳಗದ ಅಧ್ಯಕ್ಷೆ ಕಮಲ ಉದಯ ಕುಮಾರ್ ಹೇಳಿದರು.ಕುಶಾಲನಗರ ಬಸವೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು, ನಿಜವಾದ ಅರಿವು ತನ್ನನ್ನು ತಾನು ಅರಿಯುವುದು. ಹಾಗಾಗಿಯೇ ಕೌಶಿಕ ಮಹಾರಾಜನ ಯಾವುದೇ ಮೋಹಕ್ಕೊಳ ಗಾಗದೆ ಎಲ್ಲ ಸುಖ ಭೋಗಗಳನ್ನು ತೊರೆದು ಚನ್ನಮಲ್ಲಿಕಾರ್ಜುನನೇ ಎನ್ನ ಪತಿ ಎಂದು ಆರಾಧಿಸಿ ಅಮರತ್ವ ಪಡೆದ ಅಕ್ಕ ಮಹಾದೇವಿ 12ನೇ ಶತಮಾನದ ಶ್ರೇಷ್ಠ ವಚನಗಾರ್ತಿ ಎಂದು ಬಣ್ಣಿಸಿದರು.
ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, ಅಕ್ಕ ಮಹಾದೇವಿ ಅಂದಿನ ಸಮಾಜದಲ್ಲಿ ಇದ್ದ ಕಂದಾಚಾರಗಳ ವಿರುದ್ಧ ಸೆಟೆದು ನಿಂತು ಅನ್ಯಾಯ, ಅಕ್ರಮ, ಮಹಿಳಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಮಹಿಳೆಯರ ಧೀ ಶಕ್ತಿಯಾಗಿದ್ದ ಅಕ್ಕ ಮಹಾದೇವಿ 12ನೇ ಶತಮಾನದಲ್ಲಿಯೇ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ್ದರು ಎಂದು ಶಿವಪ್ಪ ವಚನಗಳ ಮೂಲಕ ವಿಶ್ಲೇಷಿಸಿದರು.ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ಶಾಂಬ ಶಿವಯ್ಯ ಹಾಗೂ ಅಕ್ಕನ ಬಳಗದ ಪ್ರಧಾನ ಕಾರ್‍ಯದರ್ಶಿ ಮನು ಜಗದೀಶ್ ಅಕ್ಕ ಮಹಾದೇವಿಯ ಜೀವನ ಸಾಧನೆಗಳ ಕುರಿತು ಮಾತನಾಡಿದರು.ಜಯಂತಿ ಅಂಗವಾಗಿ ಅಕ್ಕ ಮಹಾದೇವಿ ಭಾವಚಿತ್ರವನ್ನು ಪುಷ್ಪಗಳಿಂದ ಅಲಂಕೃತಗೊಳಿಸಿ ಪೂಜಿಸಲಾಯಿತು.ನಂತರ ನೆರೆದ ಮಂದಿಗೆ ಪ್ರಸಾದ ಹಾಗೂ ದಾಸೋಹ ನೀಡಲಾಯಿತು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಧಾನ ಕಾರ್‍ಯದರ್ಶಿ ಬಿ. ನಟರಾಜು,
ಬಸವೇಶ್ವರ ದೇವಾಲಯದ ಸ್ಥಾಪಕ ಅಧ್ಯಕ್ಷ ಎಂ.ಬಿ. ಬಸವರಾಜು, ವೀರಶೈವ ಮಹಾಸಭಾ ಉಪಾಧ್ಯಕ್ಷ ಎಚ್.ಪಿ. ಉದಯ ಕುಮಾರ್, ಎಂ.ಎಸ್. ಗಣೇಶ್, ಎಂ.ಎಸ್. ಲೋಕೇಶ್, ಅಜಿತ್, ವಿನಯ್, ಎಚ್.ಪಿ. ಸಂಗಮೇಶ್, ಮುಳ್ಳುಸೋಗೆ ಬಸವರಾಜು, ಅಕ್ಕನ ಬಳಗದ ಗೌರವಾಧ್ಯಕ್ಷೆ ವಿಜಯ ಪಾಲಾಕ್ಷ, ಪುಷ್ಪ ಹೇಮಾಕ್ಷ, ನೇತ್ರಾವತಿ, ಮೋಹಿನಿ, ಮಾಲತಿ ಲೋಕೇಶ್, ವಾಸಂತಿ ಸಂಗಮೇಶ್, ಚಂದ್ರಕಲಾ ಶಾಂಬ ಶಿವಮೂರ್ತಿ, ಗಂಗಮ್ಮ ಶಿವಪ್ಪ, ಪ್ರೇಮಾ ಮಹಾದೇವಪ್ಪ, ಮಮತಾ ಲಿಂಗರಾಜು ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.