ನೀರಿಗಾಗಿ ಖಾಲಿ ಕೊಡ ಹಿಡಿದು ಮಹಿಳೆಯರ ಪ್ರತಿಭಟನೆ

KannadaprabhaNewsNetwork |  
Published : May 08, 2026, 03:00 AM IST
ತೇರದಾಳ ಪುರಸಭೆ ಕಚೇರಿಗೆ ಮುತ್ತಿಗೆ ಹಾಲಿ ಪ್ರತಿಭಟಿಸುತ್ತಿರುವ ವನಿತೆಯರು. | Kannada Prabha

ಸಾರಾಂಶ

ತೇರದಾಳ ಪಟ್ಟಣದ ಕಲ್ಲಟ್ಟಿ ಗಲ್ಲಿಯ ಜನನಿಬಿಡ ಪ್ರದೇಶವಾದ ಕಾಮನಕಟ್ಟೆ ಹಿಂಭಾಗದ ವಸತಿ ಜನತೆ ಹಿಂದಿನ ಜನಪ್ರತಿನಿಧಿಗಳನ್ನು ನೀರು ಪೂರೈಸಲು ಹಲವಾರು ಬಾರಿ ಮನವಿ ಮಾಡಿದ್ದರೂ ತಮ್ಮ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಆಕ್ರೋಶಗೊಂಡ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪುರಸಭೆಗೆ ಮುತ್ತಿಗೆ ಹಾಕಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ತೇರದಾಳ ಪಟ್ಟಣದ ಕಲ್ಲಟ್ಟಿ ಗಲ್ಲಿಯ ಜನನಿಬಿಡ ಪ್ರದೇಶವಾದ ಕಾಮನಕಟ್ಟೆ ಹಿಂಭಾಗದ ವಸತಿ ಜನತೆ ಹಿಂದಿನ ಜನಪ್ರತಿನಿಧಿಗಳನ್ನು ನೀರು ಪೂರೈಸಲು ಹಲವಾರು ಬಾರಿ ಮನವಿ ಮಾಡಿದ್ದರೂ ತಮ್ಮ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಆಕ್ರೋಶಗೊಂಡ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪುರಸಭೆಗೆ ಮುತ್ತಿಗೆ ಹಾಕಿದರು.

ಕೃಷ್ಣಾ ನದಿಯಲ್ಲಿ ಬೇಸಿಗೆ ಬವಣೆ ತಪ್ಪಿಸುವಷ್ಟು ಪ್ರಮಾಣದಲ್ಲಿ ನೀರು ಇದೆಯೆಂದು ಮಾಧ್ಯಮಗಳಲ್ಲಿ ಶಾಸಕ ಸಿದ್ದು ಸವದಿ ಹೇಳಿಕೆ ನೀಡಿದ್ದರೂ ನಮ್ಮ ಪ್ರದೇಶದಲ್ಲಿ ಪುರಸಭೆ ನೀರು ಪೂರೈಕೆ ಮಾಡುತ್ತಿಲ್ಲವೆಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ಅರುಣಕುಮಾರ ನೀರು ಶುದ್ಧೀಕರಣ ಘಟಕದ ಬಳಿಯ ನದಿ ಪ್ರದೇಶದಲ್ಲಿ ಡಗ್ಗಿಂಗ್ ನಡೆಸಿದ್ದರ ಕಾರಣ ಕೃಷ್ಣೆಯ ಒಡಲು ಸಂಪೂರ್ಣ ಖಾಲಿಯಾಗಿ ರಬಕವಿ-ಬನಹಟ್ಟಿ ಅವಳಿ ನಗರಗಳಿಗೆ ನೀರು ಪೂರೈಕೆಗೆ ವ್ಯತ್ಯಯವಾದರೂ ಪಟ್ಟಣಕ್ಕೆ ೧೫ ದಿನಕ್ಕೂ ಹೆಚ್ಚು ಕಾಲ ಅಬಾಧಿತವಾಗಿ ನೀರು ಪೂರೈಕೆಯಾಗುತ್ತಿತ್ತು. ಸಮಸ್ಯೆ ಕಡೆಗೆ ಗಮನ ಹಿರಿಸದ ಅಧಿಕಾರಿಗಳಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ವಾರ್ಡನಲ್ಲಿ ನಾಲ್ಕು ಕೊಳವೆಬಾವಿಗಳಿದ್ದು, ಮೂರು ಬಂದ್ ಆಗಿವೆ. ಒಂದರಲ್ಲಿ ಕೆಲವೇ ಸಮಯ ಮಾತ್ರ ನೀರು ಬರುತ್ತಿದ್ದು, ಜನತೆ 15 ದಿನಗಳಿಂದ ನೀರಿಗಾಗಿ ಪರಿತಪಿಸುವಂತಾಗಿದೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನದ ಅಧಿಕಾರಿಗಳ ನಡೆ ಖಂಡಿಸಿ ಪ್ರಯಿಭಟನೆ, ಮುತ್ತಿಗೆ ಹಾಕುವುದು ಅನಿವಾರ್ಯವಾಗಿದ್ದು, ಹನಿ ನೀರಿಗೂ ನಾವು ಪರದಾಡುತ್ತಿದ್ದೇವೆಂದು ಅಧಿಕಾರಿಗಳೆದುರು ಅಲವತ್ತುಕೊಂಡರು.

ಸುಂದ್ರವ್ವ ಮಾಲಗಾವಿ, ಶೇಖವ್ವ ಮೂಡಲಗಿ, ಪ್ರಭು ಮಾಲಗಾಂವಿ, ಶಂಕರ ತೊದಲಬಾಗಿ, ಈಶ್ವರ ಅಥಣಿ, ಮೈಬೂಬ ಗಂಜಿ, ಮಹಾಂತೇಶ ರಾವಳ ಸೇರಿದಂತೆ ಅನೇಕರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಿದರು. ಕಲ್ಲಟ್ಟಿ ಗಲ್ಲಿಯ ಕಾಮನಕಟ್ಟೆ ಬಳಿಯ (ಮೂಲಿಗೆ)ರುವ ಕೊಳವೆಭಾವಿ ಸಂಪರ್ಕವನ್ನು ಶುಕ್ರವಾರದಂದು ವಾಟರ್‌ಮ್ಯಾನ್‌ಗಳೊಡನೆ ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು. ವಾರ್ಡಗ್ ಹೊಸ ಕೊಳವೆಭಾವಿ ಕೊರೆಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಸದ್ಯ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವುದರಿಂದ ಸಮಸ್ಯೆ ತಲೆದೋರಿದೆ.

- ಎಫ್.ಬಿ.ಗಿಡ್ಡಿ ಮುಖ್ಯಾಧಿಕಾರಿಗಳು ಪುರಸಭೆ, ತೇರದಾಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರಕ್ಕೆ ನಾಳೆ ಪ್ರಧಾನಿ ಮೋದಿ : ವಾಹನ ಸಂಚಾರದಲ್ಲಿ ಬದಲಾವಣೆ
ಕಬ್ಬನ್‌ ಉದ್ಯಾನದಲ್ಲಿ ಮಾವು, ಹಲಸು ಮೇಳಕ್ಕೆ ಚಾಲನೆ