ನೀರಿಗಾಗಿ ಖಾಲಿ ಕೊಡಗಳೊಂದಿಗೆ ಮಹಿಳೆಯರ ಪ್ರತಿಭಟನೆ

KannadaprabhaNewsNetwork |  
Published : Jun 20, 2026, 03:00 AM IST
ಪ್ರತಿಭಟನೆ | Kannada Prabha

ಸಾರಾಂಶ

ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ತಾಲೂಕಿನ ತೆಗ್ಗೆಳ್ಳಿಯ ಹೊಸ ಗ್ರಾಮದ ನೂರಾರು ಮಹಿಳೆಯರು ಶುಕ್ರವಾರ ಖಾಲಿ ಕೊಡಗಳೊಂದಿಗೆ ವಿನಿವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ತಾಲೂಕಿನ ತೆಗ್ಗೆಳ್ಳಿಯ ಹೊಸ ಗ್ರಾಮದ ನೂರಾರು ಮಹಿಳೆಯರು ಶುಕ್ರವಾರ ಖಾಲಿ ಕೊಡಗಳೊಂದಿಗೆ ವಿನಿವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ಹೊಸ ಗ್ರಾಮದಲ್ಲಿ ಸುಮಾರು 300 ಮನೆಗಳಿದ್ದು, ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗ್ರಾಮದಲ್ಲಿ ಕೇವಲ ಒಂದು ಬಾವಿ ಇದ್ದು, ಕೇವಲ 15 ನಿಮಿಷ ಮಾತ್ರ ನೀರು ಬರುತ್ತದೆ. ನೀರು ಸಿಗದಿದ್ದರೆ ಸುತ್ತಮುತ್ತಲಿನ ತೋಟಗಳಿಗೆ ಅಲೆದಾಡಿ ನೀರು ತರಬೇಕಾದ ಪರಿಸ್ಥಿತಿ ಉಂಟಾಗಿದೆ. ಮಹಿಳೆಯರಿಗೆ, ವೃದ್ಧರಿಗೆ ತೀವ್ರ ತೊಂದರೆ ಆಗಿದೆ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡರಾದ ಅಯೂಬ ನಾಟೀಕರ, ಬಾಬು ಕಾಂಬಳೆ ಮಾತನಾಡಿದರು. ಜೆಡಿಎಸ್ ಮುಖಂಡರಾದ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಡಾ.ರಮೇಶ ರಾಠೋಡ, ಬಾಳು ರಾಠೋಡ, ಬಾಬು ಕಾಂಬಳೆ, ಶರಣು ಕಾಂಬಳೆ, ಶಿವಾನಂದ ಹೊಸಮನಿ, ಉಮರ ಮುಜಾವರ, ಅಸಾದುಲ್ಲಾ ಮುಜಾವರ, ಗಂಗಾಧರ ಬೀರನಹಳ್ಳಿ, ಸಾಜನ ದೇಗಿನಾಳ, ಸಾಹೇಬಗೌಡ ಬೀರನಹಳ್ಳಿ, ಸಿದ್ದಪ್ಪ ಬೀರನಹಳ್ಳಿ, ದುಂಡಾಬಾಯಿ ಬೀರನಹಳ್ಳಿ, ಕಸ್ತೂರಿ ಬೀರನಹಳ್ಳಿ, ರಾಜಶ್ರೀ ಕೋರೆ, ನಿಂಗವ್ವ ಬೀರನಹಳ್ಳಿ, ದೇವಕಿ ಕೋರೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಜೆ.ಟಿ.ಪಾಟೀಲರನ್ನ ಸಂಪುಟದಲ್ಲಿ ಸೇರಿಸಿಕೊಳ್ಳಿ
ನಾಡಗೌಡರಿಗೆ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಂದ್‌