ಮಹಿಳೆಯರು ಸ್ವಾವಲಂಬಿ ಜೀವನದ ಮೂಲಕ ಉನ್ನತ ಸ್ಥಾನ ಪಡೆಯಿರಿ: ಕೆ.ಆರ್.ಶಿವಶಂಕರ್

KannadaprabhaNewsNetwork | Published : Aug 21, 2024 12:32 AM

ಸಾರಾಂಶ

ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ರೈತ ಸಮುದಾಯ ಭವನದಲ್ಲಿ ನಡೆದ ವಿಶ್ವೇಶ್ವರಯ್ಯ ಮಹಿಳಾ ಕಳಂಜಯ ಸ್ವತಂತ್ರ ಒಕ್ಕೂಟದ 19ನೇ ವರ್ಷದ ಹಾಗೂ ವಿಶ್ವೇಶ್ವರಯ್ಯ ಮಹಿಳಾ ಕ್ಷೇಮಾಭಿವೃದ್ಧಿ ಸಂಸ್ಥೆ 5ನೇ ವರ್ಷದ ಸರ್ವ ಸದಸ್ಯರ ಸಭೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಹಿಳೆಯರು ಆರ್ಥಿಕ ಅಭಿವೃದ್ಧಿ ಸಾಧಿಸಿದರೆ ಸ್ವಾವಲಂಬಿ ಜೀವನದ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ಒಕ್ಕೂಟದ ವ್ಯವಸ್ಥಾಪಕ ಕೆ.ಆರ್.ಶಿವಶಂಕರ್ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಮುದಾಯ ಭವನದಲ್ಲಿ ನಡೆದ ವಿಶ್ವೇಶ್ವರಯ್ಯ ಮಹಿಳಾ ಕಳಂಜಯ ಸ್ವತಂತ್ರ ಒಕ್ಕೂಟದ 19ನೇ ವರ್ಷದ ಹಾಗೂ ವಿಶ್ವೇಶ್ವರಯ್ಯ ಮಹಿಳಾ ಕ್ಷೇಮಾಭಿವೃದ್ಧಿ ಸಂಸ್ಥೆ 5ನೇ ವರ್ಷದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಒಕ್ಕೂಟದಲ್ಲಿ ಸುಮಾರು 9.26 ಕೋಟಿ ರು ಉಳಿತಾಯವಿದೆ ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ಒಕ್ಕೂಟದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಲೆಕ್ಕ ಪರಿಶೋಧಕ ಎಂ.ಕೆ.ಶ್ರೀಧರ್, ಮಣ್ಣಿನ ಆಭರಣ ತಯಾರಕಿ ನೀಲಿಮೋಹಿತ್, ಎಂ.ಎಂ.ಕೆ.ಫೌಂಡೇಶನ್ ನ ಡಿ.ಎಂ.ಮಹದೇವು, ನಿರ್ದೇಶಕಿಯರು, ಸಿಬ್ಬಂದಿ ಹಾಗೂ ಸದಸ್ಯರು ಇದ್ದರು.

ಭತ್ತದ ಇಳುವರಿ ಹೆಚ್ಚಿಸಲು ಅಗತ್ಯ ಕ್ರಮ ಅನುಸರಿಸಿ: ಸಂತೋಷ್ ಕುಮಾರ್ಕೆ.ಆರ್.ಪೇಟೆ:ಮಂಡ್ಯ ಜಿಲ್ಲೆಯಲ್ಲಿ ಭತ್ತದ ಇಳುವರಿ ಗಣನೀಯವಾಗಿ ಇಳಿಕೆಯಾಗಿದೆ. ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ರೈತರು ಅವುಗಳನ್ನು ಅನುಪಾಲನೆ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಜೆ.ಸಂತೋಷ್ ಕುಮಾರ್ ಮನವಿ ಮಾಡಿದ್ದಾರೆ.

ತಾಲೂಕಿನಲ್ಲಿ ಹೇಮಾವತಿ ನಾಲೆ ಅಚ್ಚುಕಟ್ಟು ಪ್ರದೇಶ ಮತ್ತು ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ನಾಟಿ ಕಾರ್ಯಭರದಿಂದ ಸಾಗುತ್ತಿದೆ. ರೈತರು ನಾಟಿ ಸಮಯದಲ್ಲಿ ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಆ ಮೂಲಕ ಹೆಚ್ಚಿ ಇಳುವರಿ ಪಡೆಯಬಹುದು.18 ರಿಂದ 21 ದಿನಗಳ ಸಸಿಗಳನ್ನು ನಾಟಿ ಮಾಡುವುದು. ಹೆಚ್ಚು ಆಳದಲ್ಲಿ ನಾಟಿ ಮಾಡಬಾರದು, 1-2 ಇಂಚಿನಲ್ಲಿ ತೇಲಿಸಿದ ಹಾಗೆ ನಾಟಿ ಮಾಡಬೇಕು. 2-3 ಪೈರುಗಳನ್ನು ಮಾತ್ರ ಒಂದು ಗುಣಿಯಲ್ಲಿ ನಾಟಿ ಮಾಡಬೇಕು. ಒಂದು ಚದರ ಮೀಟರ್‌ಗೆ 50-55 ಗುಣಿಗಳು ಬರುವ ರೀತಿ ನಾಟಿ ಮಾಡಬೇಕು. ರೈತರು ನಾಟಿ ವೇಳೆ ಅಗತ್ಯ ಕ್ರಮಗಳನ್ನು ಅನುಸರಿಸಿದರೆ ಗಣನೀಯವಾಗಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತಿಳಿಸಿದ್ದಾರೆ.

Share this article