ಮಹಿಳಾ ಆಯೋಗ ಅಧ್ಯಕ್ಷೆಯಿಂದ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಪರಿಶೀಲನೆ

KannadaprabhaNewsNetwork |  
Published : Apr 16, 2025, 12:31 AM IST
15ಕೆಡಿವಿಜಿ14, 15-ದಾವಣಗೆರೆ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಆಸ್ಪತ್ರೆ ಒಳ ರೋಗಿಗಳ ಆರೋಗ್ಯ ವಿಚಾರಿಸಿದರು. ...............15ಕೆಡಿವಿಜಿ16-ದಾವಣಗೆರೆ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಆಸ್ಪತ್ರೆ ಕುಡಿಯುವ ನೀರಿನ ತೊಟ್ಟೆ ವೀಕ್ಷಿಸಿದರು. ...............15ಕೆಡಿವಿಜಿ17-ದಾವಣಗೆರೆ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಆಸ್ಪತ್ರೆ ಒಳ ರೋಗಿಗಳ ಆಹಾರ ತಯಾರಿಕ ವಿಭಾಗ ವೀಕ್ಷಿಸಿದರು. ..............15ಕೆಡಿವಿಜಿ18, 19-ದಾವಣಗೆರೆ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಆಸ್ಪತ್ರೆ ಒಳ ರೋಗಿಗಳಿಗೆ ನೀಡುವ ಆಹಾರ ಸೇವಿಸಿ, ಪರಿಶೀಲಿಸಿದರು. ..................15ಕೆಡಿವಿಜಿ20-ದಾವಣಗೆರೆ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ವೈದ್ಯಾಧಿಕಾರಿಗಳಿಗೆ ಸಲಹೆ, ಸೂಚನೆ ನೀಡುತ್ತಿರುವುದು. ....................15ಕೆಡಿವಿಜಿ21-ದಾವಣಗೆರೆ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಆಸ್ಪತ್ರೆ ಶೌಚಾಲಯ ಸ್ವಚ್ಛತೆ ಇಲ್ಲದ ಬಗ್ಗೆ ಕಿಡಿಕಾರಿದರು. | Kannada Prabha

ಸಾರಾಂಶ

ದಲಿತ ಸಂಘಟನೆ ಸಮಾರಂಭಕ್ಕೆ ಆಗಮಿಸಿದ್ದ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ನಗರದ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ದಿಢೀರ್‌ ಭೇಟಿ ನೀಡಿ, ಆಸ್ಪತ್ರೆ ವ್ಯವಸ್ಥೆ ಮತ್ತು ಅವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಗಾಗೂ ಜಿಲ್ಲಾ ಆಸ್ಪತ್ರೆ ಸರ್ಜನ್‌ರನ್ನು ತರಾಟೆಗೆ ತೆಗೆದುಕೊಂಡರು.

- ಆಸ್ಪತ್ರೆ ಅವ್ಯವಸ್ಥೆ, ಸೌಲಭ್ಯಗಳ ಕೊರತೆಗೆ ಡಾ.ನಾಗಲಕ್ಷ್ಮೀ ಚೌಧರಿ ತರಾಟೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಲಿತ ಸಂಘಟನೆ ಸಮಾರಂಭಕ್ಕೆ ಆಗಮಿಸಿದ್ದ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ನಗರದ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ದಿಢೀರ್‌ ಭೇಟಿ ನೀಡಿ, ಆಸ್ಪತ್ರೆ ವ್ಯವಸ್ಥೆ ಮತ್ತು ಅವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಗಾಗೂ ಜಿಲ್ಲಾ ಆಸ್ಪತ್ರೆ ಸರ್ಜನ್‌ರನ್ನು ತರಾಟೆಗೆ ತೆಗೆದುಕೊಂಡರು.

ತಮ್ಮ ಸಮ್ಮುಖದಲ್ಲೇ ಔಷಧಿ ಇಲ್ಲವೆಂದು ಆಸ್ಪತ್ರೆ ಸಿಬ್ಬಂದಿ ರೋಗಿಗಳನ್ನು ವಾಪಸ್‌ ಕಳಿಸುತ್ತಿದ್ದರು. ಇದನ್ನು ಕಂಡು, ಡಿ.ಎಸ್. ಡಾ.ನಾಗೇಂದ್ರಪ್ಪ, ಡಿಎಚ್‌ಒ ಡಾ.ಷಣ್ಮುಖಪ್ಪ ವಿರುದ್ಧ ಅಧ್ಯಕ್ಷರು ಅಸಮಾಧಾನಗೊಂಡರು.

ಆಸ್ಪತ್ರೆಯ ನೀರಿನ ತೊಟ್ಟಿಗಳು, ಒಳರೋಗಿಗಳಿಗೆ ಉಪಾಹಾರ, ಊಟ ಬಡಿಸುವ ಕೊಠಡಿ, ವಿವಿಧ ವಿಭಾಗಗಳಿಗೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದರು. ರೋಗಿಗಳು, ಒಳರೋಗಿಗಳು, ರೋಗಿಗಳ ಕುಟುಂಬ ವರ್ಗದವರಿಂದ ಆಸ್ಪತ್ರೆ ಬಗ್ಗೆ ಮಾಹಿತಿ ಕಲೆ ಹಾಕಿದರು.

ಜಿಲ್ಲಾಸ್ಪತ್ರೆಯ ಶುದ್ಧ ಕುಡಿಯುವ ನೀರಿನ ಘಟಕದಲ್ಲೇ ಸ್ವಚ್ಛತೆ ಇಲ್ಲದಿರುವುದು, ಶೌಚಾಲಯಗಳು ಗಬ್ಬು ನಾರುತ್ತಿರುವುದು, ಇಡೀ ಆಸ್ಪತ್ರೆಯೇ ಅವ್ಯವಸ್ಥೆಯ ಆಗರವಾಗಿರುವ ಬಗ್ಗೆ, ತಮ್ಮ ಸಮ್ಮುಖದಲ್ಲೇ ರೋಗಿಗಳು, ಒಳ ರೋಗಿಗಳಿಗೆ ಔಷಧಿ ಇಲ್ಲವೆಂದು ಹೊರಗಿನಿಂದ ತರುವಂತೆ ಹೇಳಿದ್ದ ಬಗ್ಗೆ ವೈದ್ಯಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಮುಖಂಡ ಎಸ್.ಎಸ್. ಗಿರೀಶ ಸೇರಿದಂತೆ ಆಸ್ಪತ್ರೆ ವೈದ್ಯಾಧಿಕಾರಿಗಳು, ಶುಶ್ರೂಷಕರು, ಸಿಬ್ಬಂದಿ, ಸಾರ್ವಜನಿಕರು ಇದ್ದರು.

- - -

-15ಕೆಡಿವಿಜಿ14, 15:

ದಾವಣಗೆರೆ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಸ್ಪತ್ರೆ ಒಳರೋಗಿಗಳ ಆರೋಗ್ಯ ವಿಚಾರಿಸಿದರು. -15ಕೆಡಿವಿಜಿ16.ಜೆಪಿಜಿ: ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ತೊಟ್ಟೆ ಸ್ವಚ್ಛತೆ ಪರಿಶೀಲನೆ.

-15ಕೆಡಿವಿಜಿ17.ಜೆಪಿಜಿ: ಅಧ್ಯಕ್ಷರು ಆಸ್ಪತ್ರೆ ಒಳರೋಗಿಗಳ ಆಹಾರ ತಯಾರಿಕೆ ವ್ಯವಸ್ಥೆ ಪರಿಶೀಲಿಸಿದರು.

-15ಕೆಡಿವಿಜಿ18, 19.ಜೆಪಿಜಿ: ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಸ್ಪತ್ರೆ ಒಳರೋಗಿಗಳಿಗೆ ನೀಡುವ ಆಹಾರ ಸೇವಿಸಿ, ಗುಣಮಟ್ಟ ಪರಿಶೀಲಿಸಿದರು.

-15ಕೆಡಿವಿಜಿ21: ಜಿಲ್ಲಾಸ್ಪತ್ರೆ ಶೌಚಾಲಯ ಸ್ವಚ್ಛತೆ ಇಲ್ಲದ ಬಗ್ಗೆ ಅಧ್ಯಕ್ಷರು ಕಿಡಿಕಾರಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...