ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರ: ಪೂರ್ಣಿಮಾ ಸಿದ್ದಪ್ಪ

KannadaprabhaNewsNetwork |  
Published : Mar 14, 2025, 12:30 AM IST
ೇ್‌ | Kannada Prabha

ಸಾರಾಂಶ

ಶೃಂಗೇರಿ, ಮಹಿಳೆಯರು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೇ ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ತಮ್ಮದೇ ಆದ ಛಾಪು ಮೂಡಿಸಿ ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಇನ್ನರ್ ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಪೂರ್ಣಿಮಾ ಸಿದ್ದಪ್ಪ ಹೇಳಿದರು.

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಹಿಳೆಯರು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೇ ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ತಮ್ಮದೇ ಆದ ಛಾಪು ಮೂಡಿಸಿ ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಇನ್ನರ್ ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಪೂರ್ಣಿಮಾ ಸಿದ್ದಪ್ಪ ಹೇಳಿದರು.

ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಹಿಳಾ ವೇದಿಕೆ ಹಾಗೂ ಐಕ್ಯೂಎಸಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು. ನದಿಯಾಗಿ, ನೀರಾಗಿ, ಹೂವಾಗಿ, ಭೂಮಿಯಾಗಿ, ಪ್ರಕೃತಿಯಾಗಿ ಸರ್ವರನ್ನು ಸಲುಹಿ, ಹೆತ್ತು ಹೊತ್ತು ಸಾಕಿದಳು, ಮಗಳಾಗಿ, ತಾಯಿಯಾಗಿ, ಸೊಸೆಯಾಗಿ, ಸಹೋದರಿ ಯಾಗಿ ಪ್ರೀತಿ ವಾತ್ಸಲ್ಯದ ಚಿಲುಮೆಯಾಗಿದ್ದಾಳೆ. ಹೆಣ್ಣಿಲ್ಲದೇ ಜೀವವಿಲ್ಲ, ಹೆಣ್ಣಿಲ್ಲದೇ ಜೀವನವಿಲ್ಲ. ಹೆಣ್ಣಿನಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ನಿಸ್ವಾರ. ಹೆಣ್ಣನ್ನು ಗೌರವಿಸಿ, ಹೆಣ್ಣು ಮಕ್ಕಳನ್ನು ಗೌರವಿಸಿ ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಮಹಿಳೆಯರು ಯಾರಿಗೂ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದಂತೆ ಸಾಧನೆ ಮಾಡಿದ್ದಾಳೆ. ಪರುಷನಿಗೆ ಸರಿಸಮಾನವಾಗಿ ನಿಲ್ಲುವಷ್ಟು ಶಕ್ತಿ ಹೊಂದಿದ್ದಾಳೆ. ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಾಹಿತ್ಯ, ಬಾಹ್ಯಾಕಾಶ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ಸಾವಿತ್ರಿ ಬಾಯಿ ಫುಲೆ, ಮದರ್ ತೆರೆಸಾ, ಸುಧಾ ಮೂರ್ತಿ ರಂತಹ ಸಾಧಕಿಯರು ನಮಗೆ ಆದರ್ಶಪ್ರಾಯರಾಗಬೇಕು.

ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ಶೋಷಣೆ,ದೌರ್ಜನ್ಯ,ಹಿಂಸೆ,ಕಿರುಕುಳ,ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದಕರ ಸಂಗತಿಯಾಗಿದೆ.ಮಹಿಳೆಯರು ಶೋಷಣೆ,ದೌರ್ಜನ್ಯ ವಿರುದ್ದ,ಸಮಾನ ಹಕ್ಕುಗಳಿಗಾಗಿ ಹೋರಾಡಬೇಕಿದೆ.ಮಹಿಳೆಯರಿಗಾಗಿ ಕಾನೂನು ಕಾಯ್ದೆಗಳು,ಹಕ್ಕುಗಳಿದ್ದರೂ ಅವರಿಗೆ ಸರಿಯಾಗಿ ನ್ಯಾಯ ಸಿಗುತ್ತಿಲ್ಲ.ಸಮಾನ ನ್ಯಾಯ,ರಕ್ಷಣೆ ಸಿಗಬೇಕು.

ಮಹಿಳಾ ದಿನಾಚಾರಣೆಗಳು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗಿರದೇ ಮಹಿಳೆಯರ ಸಾಧನೆಗೆಗಳಿಗೆ ಗೌರವ ಸಿಗುವ,ಅವರ ಸಮಸ್ಯೆಗಳಿಗೆ ನ್ಯಾಯ ಸಿಗುವ ವೇದಿಕೆಗಳಾಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಶುಂಪಾಲರಾದ ಭಾರತೀ ಮಾತನಾಡಿ ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳೆ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು.ವದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ.ಮನೆಯಲ್ಲಿ,ಕುಟುಂಬಗಳಲ್ಲಿ ಉತ್ತಮ ಕೌಟುಂಬಿಕ ವಾತಾವರಣವಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ.ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಪುರುಷನಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾಳೆ.ಮಹಿಳೆಯರ ಬಗ್ಗೆ ತಾರತಮ್ಯ ಭಾವನೆ ಸಲ್ಲದು ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಸಂಚಾಲಕಿ ಆಶಾ ಬಾರ್ಕೂರು,ಐಕ್ಯೂಎಸಿ ಸಂಚಾಲಕಿ ಡಾ.ಆಶಾ ಬಿ.ಜಿ.ಮತ್ತಿತರರು ಉಪಸ್ಥಿತರಿದ್ದರು.

13 ಶ್ರೀ ಚಿತ್ರ 1-ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ವೇದಿಕೆ ಆಯೋಜಿಸಿದ್ದ ಮಹಿಳಾ ದಿನಾಚಾರಣೆ ಅಂಗವಾಗಿ ಪೂರ್ಣಿಮಾ ಸಿದ್ದಪ್ಪ ಉಪನ್ಯಾಸ ನೀಡಿದರು.ಪ್ರಾಂಶುಪಾಲರಾದ ಭಾರತೀ,ಡಾ.ಆಶಾ ಬಿ.ಜಿ,ಆಶಾ ಬಾರ್ಕೂರು ಮತ್ತಿತರರು ಇದ್ದರು.ಏ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ