ಯುಬಿಡಿಟಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

KannadaprabhaNewsNetwork |  
Published : Mar 27, 2025, 01:08 AM IST
ಕ್ಯಾಪ್ಷನ26ಕೆಡಿವಿಜಿ36 ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ತರಬೇತುದಾರ ಸುನಿಲ್ ಗೌಡ ಫೀಟ್ನೆಸ್ ಕುರಿತು ಮಾಹಿತಿ ನೀಡಿದರು. | Kannada Prabha

ಸಾರಾಂಶ

ವಿಶ್ವವಿದ್ಯಾನಿಲಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾಲೇಜ್ ಇಂಟರ್‌ನಲ್ ಕಂಪೈಂಟ್ ಕಮಿಟಿ (ಸಿಐಸಿಸಿ), ಎನ್ನೆಸ್ಸೆಸ್ ಸಹಯೋಗದಲ್ಲಿ ಎಲ್ಲ ಮಹಿಳೆಯರು ಮತ್ತು ಹುಡುಗಿಯರಿಗಾಗಿ: ಹಕ್ಕುಗಳು, ಸಮಾನತೆ, ಸಬಲತೆ ವಿಷಯದಡಿ ಮಹಿಳಾ ದಿನ ಆಚರಿಸಲಾಯಿತು.

ದಾವಣಗೆರೆ: ವಿಶ್ವವಿದ್ಯಾನಿಲಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾಲೇಜ್ ಇಂಟರ್‌ನಲ್ ಕಂಪೈಂಟ್ ಕಮಿಟಿ (ಸಿಐಸಿಸಿ), ಎನ್ನೆಸ್ಸೆಸ್ ಸಹಯೋಗದಲ್ಲಿ ಎಲ್ಲ ಮಹಿಳೆಯರು ಮತ್ತು ಹುಡುಗಿಯರಿಗಾಗಿ: ಹಕ್ಕುಗಳು, ಸಮಾನತೆ, ಸಬಲತೆ ವಿಷಯದಡಿ ಮಹಿಳಾ ದಿನ ಅಚರಿಸಲಾಯಿತು.

ನಗರದ ಸೂಪರ್ ಫಿಟ್ನೆಸ್ ಸಂಸ್ಥೆ ತರಬೇತುದಾರ ಸುನಿಲ್ ಗೌಡ ಕಾರ್ಯಕ್ರಮ ಉದ್ಘಾಟಿಸಿ, ಈ ಕಾರ್ಯಕ್ರಮ ಮಹಿಳೆಯರ ಆರೋಗ್ಯ ಮತ್ತು ಸಬಲತೆ ಮಹತ್ವ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ವ್ಯಾಯಾಮ ದೇಹದ ಸ್ನಾಯುಬಲ ಹೆಚ್ಚಿಸಿ, ಮಧುಮೇಹ ಮತ್ತು ತೂಕವನ್ನು ನಿಯಂತ್ರಿಸಿ, ಹೃದಯ ಆರೋಗ್ಯ ಸುಧಾರಿಸಿ, ಒತ್ತಡ ಕಡಿಮೆ ಮಾಡುತ್ತದೆ ಮತ್ತು ಮಾನಸಿಕ-ದೈಹಿಕ ಸುಧಾರಣೆಗೆ ಮುಖ್ಯವಾಗಿದೆ ಎಂದರು.

ಏರೋಬಿಕ್ಸ್ ಅನ್ನು ಗುಂಪಿನಲ್ಲಿ ಮಾಡುವುದರಿಂದ ಉತ್ಸಾಹ ಮತ್ತು ಪ್ರೇರಣೆ ದೊರೆಯುತ್ತದೆ. ಆದರೆ ಏಕಾಂಗಿಯಾಗಿ ಮಾಡುವುದರಿಂದ ಸ್ವತಂತ್ರವಾಗಿ ಶ್ರದ್ಧೆ ಮತ್ತು ನಿಯಂತ್ರಣ ಹೆಚ್ಚುತ್ತದೆ. ಉತ್ಸಾಹಭರಿತ ವ್ಯಾಯಾಮ ಮಹಿಳೆಯರು ಮತ್ತು ಹುಡುಗಿಯರಲ್ಲಿ ಉತ್ತಮ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ತರುತ್ತದೆ ಎಂದರು.

ಕಾಲೇಜಿನ ಫಿಜಿಕ್ಸ್ ವಿಭಾಗ ಮುಖ್ಯಸ್ಥೆ ಡಾ. ಕೆ.ಪ್ರಭಾ ಮಾತನಾಡಿ, ವ್ಯಾಯಾಮವು ಆರೋಗ್ಯವರ್ಧನೆ, ಸಮಗ್ರ ಆರೋಗ್ಯ ಹೆಚ್ಚಿಸುವ ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ. ಟಿ.ಸಿ.ಶಶಿಕಲಾ, ಡಾ. ಬಿ.ವಿಜಯ ಇತರರು ಇದ್ದರು.

- - - -26ಕೆಡಿವಿಜಿ36:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಪ್ತ ಶಾಸಕರ ಜತೆ ಸದನದ ಕೊನೆ ಸಾಲಲ್ಲಿ ಡಿಕೆಶಿ ಚರ್ಚೆ
ಅಹಂಕಾರ, ದರ್ಪ ತೋರದೇ ಎಲ್ಲ ಜನರನ್ನೂ ಗೌರವಿಸಿದ ಶಾಮನೂರು: ಅಣಬೇರು ರಾಜಣ್ಣ