ಮಹಿಳಾ ಮೀಸಲು: ವಿಪಕ್ಷಗಳು ಮಾಡಿರುವ ಕುತಂತ್ರ

KannadaprabhaNewsNetwork |  
Published : Apr 23, 2026, 01:15 AM IST
೨೨ಕೆಎಲ್‌ಆರ್-೧ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿ ಗೌಡ ಪತ್ರಿಕಾ ಹೇಳಿಕೆ ನೀಡುತ್ತಿರುವುದು. | Kannada Prabha

ಸಾರಾಂಶ

ಸಂಸತ್ತು ಮತ್ತು ವಿಧಾನ ಸಭೆಗಳಲ್ಲಿ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ೧೩೧ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋಲನ್ನು ಒಪ್ಪಿರುವುದು ದೇಶದ ಸ್ತ್ರೀ ಶಕ್ತಿಯ ಸಬಲೀಕರಣಕ್ಕೆ ಆದ ಹಿನ್ನಡೆ.

ಕನ್ನಡಪ್ರಭ ವಾರ್ತೆ ಕೋಲಾರಶೇ. ೩೩ರಷ್ಟು ಮಹಿಳಾ ಮೀಸಲು ವಿಧೇಯಕ್ಕೆ ಹಿನ್ನಡೆಯಾಗಿರುವುದು ಮಹಿಳೆಯರ ಸ್ವಾಭಿಮಾನದ ಮೇಲೆ ವಿರೋಧ ಪಕ್ಷಗಳು ಮಾಡಿರುವ ಕುತಂತ್ರವೆಂದು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಗೌಡ ಪತ್ರಿಕಾ ಹೇಳಿಕೆ ಮುಖಾಂತರ ಅಸಮಾಧಾನ ವ್ಯಕ್ತಪಡಿಸಿದರು.ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ೨೦೨೬ರ ಏ. ೧೭ ಮಹತ್ವದ ದಿನವಾಗಬೇಕಾಗಿತ್ತು. ಆದರೆ ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನ ಸಭೆಗಳಲ್ಲಿ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ೧೩೧ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋಲನ್ನು ಒಪ್ಪಿರುವುದು ದೇಶದ ಸ್ತ್ರೀ ಶಕ್ತಿಯ ಸಬಲೀಕರಣಕ್ಕೆ ಆದ ಹಿನ್ನಡೆ. ೨೯೮ ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರು. ಅಗತ್ಯವಿದ್ದ ಮೂರನೇ ೨ರಷ್ಟು ಬಹುಮತ ಸಿಗದ ಕಾರಣ ಮಸೂದೆ ಬಿದ್ದು ಹೊಗಿರುವುದು ದುರದುಷ್ಟಕರ ಎಂದು ಆಸಮಾಧನ ವ್ಯಕ್ತಪಡಿಸಿದರು. ಹಿಂದಿನ ದಶಕಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ ಹರಿದು ಹಾಕಿದ ಸದನದಲ್ಲಿ ಗದ್ದಲ ಎಬ್ಬಿಸಿ ತಡೆದ ಅದೇ ಶಕ್ತಿಗಳು ಇಂದು ಡಿಲಿಮಿಟೇಶನ್ ನೆಪದಲ್ಲಿ ಮೀಸಲಾತಿ ವಿರೋಧಿಸುತ್ತೇವೆ. ೨೦೨೩ರಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಗ ಇಡೀ ದೇಶ ಸಂಭ್ರಮಿಸಿತ್ತು. ಆದರೆ ಅನುಷ್ಠಾನಕ್ಕೆ ಬೇಕಾದ ಸಾಂವಿಧಾನಿಕ ತಿದ್ದುಪಡಿ ಪ್ರತಿ ಪಕ್ಷಗಳು ತಡೆದಿದ್ದೆ ಮಹಿಳೆಯರಿಗೆ ರಾಜಕೀಯ ಅಧಿಕಾರಿ ನೀಡುವಲ್ಲಿ ಈ ರೀತಿಯ ಅಡೆ ತಡೆಗಳು ಪ್ರಗತಿಪರ ರಾಷ್ಟ್ರಕ್ಕೆ ಶೋಭೆ ತರುವುದಿಲ್ಲವೆಂದು ಮಹಿಳಾ ವಿರೋಧಿ ಸಂಸದರಿಗೆ ಧಿಕ್ಕಾರ ಎಂದರು.

ಈ ವೇಳೆ ಶೈಲಜ, ರತ್ನಮ್ಮ, ವೇಣಮ್ಮ, ಗೌರಮ್ಮ, ನಯನ, ಪವಿತ್ರ, ಚೌಡಮ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಸಂಸ್ಕಾರದಿಂದ ಮಕ್ಕಳ ಭವಿಷ್ಯ ಉಜ್ವಲ
ಬಸ್-ಲಾರಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು