ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮುದಾಯದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಬಲುದೊಡ್ಡದು. ಸ್ವಾವಲಂಬನೆಗೆ ಬದುಕಿಗೆ ಸಂಘದ ಮೂಲಕವಾಗಿ ಸಕ್ರಿಯ ಚಟುವಟಿಕೆಯಲ್ಲಿ ಭಾಗಿಯಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಸಾಸಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟಿಸಿ ಮಾತನಾಡಿ, ಗ್ರಾಪಂ ಅಧಿಕಾರಿಗಳಿಗೆ ಅಧಿಕಾರ ವ್ಯಾಪ್ತಿ ದೊಡ್ಡದಿದೆ. ಅಧಿಕಾರವನ್ನು ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ನೊಂದವರಿಗೆ, ನಿರಾಶ್ರಿತರಿಗೆ ಸರ್ಕಾರದ ಸೌಲಭ್ಯ ಆದ್ಯತೆಯೊಂದಿಗೆ ನೀಡಿ ಎಂದರು.
ಮಹಿಳಾ ಸಂಘಕ್ಕೆ 5 ಲಕ್ಷ ರು.ಅನುದಾನ ಬಂದಿದೆ. ಈ ಅನುದಾನ ಹಣವನ್ನು ಹಂಚಿಕೊಳ್ಳದೆ ಮತ್ತಷ್ಟು ಹಣವನ್ನು ಬ್ಯಾಂಕ್‌ಗಳಲ್ಲಿ ಸಾಲವಾಗಿ ಪಡೆಯಿರಿ. ಕೋಳಿ ಫಾರಂ ಉದ್ಯಮಕ್ಕೆ ಮುಂದಾಗಬೇಕು. ಮಹಿಳೆಯರು ಮನಸ್ಸು ಮಾಡಿದರೆ ಇಡೀ ಗ್ರಾಮದ ಚಿತ್ರಣವನ್ನೆ ಬದಲಾಯಿಸಬಹುದು. ಸಂಘದ ಅಭಿವೃದ್ಧಿಯೊಂದಿಗೆ ಮಹಿಳೆಯರು ಸ್ವಾವಲಂಭಿಗಳಾಗಲು ಚಿಂತಿಸಿ ಎಂದು ಸಲಹೆ ನೀಡಿದರು.ಸಂಘದ ಮಹಿಳೆಯರು ಗ್ರಾಮದಲ್ಲಿ ಸಣ್ಣಪುಟ್ಟ ಸಮಾರಂಭ ಮಾಡಲು ಸಮಸ್ಯೆಯಾಗಿದೆ. ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಿಕೊಡಿ ಎಂದರು. ಇದೇ ವೇಳೆ ಮುಖಂಡರು ಗ್ರಾಮದಲ್ಲಿ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಸಮರ್ಪಕ ಚರಂಡಿ, ಸೇತುವೆ ಮಾಡದೆ ರಸ್ತೆ ಕಾಮಗಾರಿ ಮಾಡಲಾಗಿದೆ. ಹಲವೆಡೆ ಅರ್ಧಕ್ಕೆ ಕಾಮಗಾರಿ ನಿಂತಿದೆ ಎಂದು ಅಲವತ್ತುಕೊಂಡರು.
ಸೂಕ್ತ ಮಾಹಿತಿ ಪಡೆದು ಲೋಪವಾಗಿರುವುದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಶಾಸಕರು ನುಡಿದರು.ಐಕನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಶಂಭುಲಿಂಗಯ್ಯ, ಉಪಾಧ್ಯಕ್ಷ ಈ.ರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಕರವೇ ಗುರುಮೂರ್ತಿ, ಡೇರಿಜಗದೀಶ್, ಸಂಘದ ಚಿನ್ನಮ್ಮ, ಶಿವಮ್ಮ, ಜಯಮ್ಮ, ನಿಂಗಮ್ಮ, ಲಕ್ಷ್ಮಮ್ಮ, ಚಿಕ್ಕತಾಯಮ್ಮ, ಸರೋಜಮ್ಮ ಉಪಸ್ಥಿತರಿದ್ದರು.
ಇಂದು ವಿದ್ಯುತ್ ವ್ಯತ್ಯಯಮಳವಳ್ಳಿ: ಸತ್ತೇಗಾಲ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ಆ.11ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವಿತರಣಾ ಕೇಂದ್ರದ ಎಫ್ 7 ಬೆಳಕವಾಡಿ ವಾಟರ್ ಸಪ್ಲೈ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುವ ರೊಟ್ಟಿಕಟ್ಟೆ, ಬ್ಲಫ್, ಜವನಗಳ್ಳಿ, ಮಲ್ಲಿಕ್ಯಾತನಹಳ್ಳಿ, ಮದ್ದೂರು ಮತ್ತು ಮಳವಳ್ಳಿ ತಾಲೂಕು ಕುಡಿಯುವ ನೀರಿನ ಸ್ಥಾವನ(ಹೆಡ್‌ವರ್ಕ್ಸ್) ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಿಗೆ ವಿದ್ಯುತ್ ಅಡಚಣೆ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಟಿ.ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.