ಹೊಳೆಹೊನ್ನೂರು: ಸರ್ಕಾರಗಳು ಒಂದೆಡೆ ಮದ್ಯನೀಡಿ ಜನರ ಪ್ರಾಣ ತೆಗೆದು, ಮತ್ತೊಂದೆಡೆ ಗ್ಯಾರಂಟಿ ಭಾಗ್ಯ ನೀಡಿ ಬದುಕು ಕಟ್ಟಿಕೊಳ್ಳಿ ಎನ್ನುವುದು ಯಾವ ನ್ಯಾಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಪ್ರಶ್ನಿಸಿದರು.
ಧರ್ಮಸ್ಥಳ ಕ್ಷೇತ್ರದ ಜನಪರ ಯೋಜನೆಗಳಿಂದ ಗ್ರಾಮೊದ್ಧಾರಗಳಾಗಿವೆ. ಧರ್ಮಸ್ಥಳಕ್ಕೆ ನಂಬಿಕೆಯೆ ಬುನಾದಿ. ಮಠಾಧಿಶರು ಸೇರಿದಂತೆ ರೈತ ಸಂಘಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲ ಹಳ್ಳಿಗಳಲ್ಲಿ ಮದ್ಯದ ಹಾವಳಿ ದುಪ್ಪಟಾಗಿದೆ. ಕುಟುಂಬಕ್ಕೆ ಆಧಾರಸ್ಥಂಭವಾದವರು ದಿನ ಪೂರ್ತಿ ಕುಡಿದರೆ ಕುಟುಂಬದ ಗತಿ ಏನಾಗಬೇಡ. ಅಪ್ರಾಪ್ತರು ಸೇರಿದಂತೆ ನವ ವಿವಾಹಿತರು ವ್ಯಸನಗಳಿಗೆ ಬಲಿಯಾಗಿ ಬದುಕು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಚಿತ್ರದುರ್ಗದ ಯೋಜನಾಧಿಕಾರಿ ನಾಗರಾಜ್ ಮಾತನಾಡಿ, ಪ್ರತಿಯೊಬ್ಬರೂ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೋಡಬೇಕಿದೆ ಎಂದು ಕರೆ ನೀಡಿದ ಅವರು, ರಾಜ್ಯಾದ್ಯಂತ ನಡೆದ ಮದ್ಯವರ್ಜನ ಶಿಬಿರದಲ್ಲಿ 1.35 ಲಕ್ಷಕ್ಕೂ ಅಧಿಕ ಮಂದಿ ವ್ಯಸನ ಮುಕ್ತರಾಗಿದ್ದಾರೆ ಎಂದು ತಿಳಿಸಿದರು.ಭದ್ರಾವತಿ ಯೋಜನಾಧಿಕಾರಿ ಅಜಯ್‍ಕುಮಾರ್, ಗೌರವಾಧ್ಯಕ್ಷ ಎಚ್.ಬಸಪ್ಪ, ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ, ಯಶೋಧಮ್ಮ, ನಂದ್ಯಪ್ಪ, ಪಂಚಾಕ್ಷರಪ್ಪ, ಮಂಜುನಾಥಗೌಡ, ಶ್ರೀನಿವಾಸ್, ಲಿಂಗರಾಜು, ಮೂರ್ತಪ್ಪ, ಶಿವಕುಮಾರ್, ಬಸವರಾಜ್, ಹೊನ್ನಪ್ಪ, ಶಿವಣ್ಣ, ರಮೇಶ್, ಪುಟ್ಟಪ್ಪ, ಮಂಜುನಾಥ್, ಚಂದ್ರಕಲಾ, ರುದ್ರೋಜಿರಾವ್, ಪಾರ್ವತಮ್ಮ, ಹಿಮಾಕ್ಷೇತ, ಎಚ್.ಎನ್.ನಾಗರಾಜ್, ಶಶಿಕುಮಾರ್, ಅನಿತಾ, ಮಧು ಇತರರಿದ್ದರು.