ಮಹಿಳೆಯರು ಉದ್ಯಮ ಮೂಲಕ ಸಬಲರಾಗಬೇಕು

KannadaprabhaNewsNetwork |  
Published : Feb 16, 2025, 01:47 AM IST
ಸಿಕೆಬಿ-2 ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಹೆಚ್‌ಎಎಲ್‌ನ ಸಿಎಸ್‌ಆರ್  ನಿಧಿಯಿಂದ ಇಡಿಐಐ ಸಂಸ್ಥೆ ಆಯೋಜಿಸಿದ್ದ ಉಧ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭವನ್ನು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಉಧ್ಘಾಟಿಸಿದರು | Kannada Prabha

ಸಾರಾಂಶ

ಮಹಿಳೆಯರಿಗೆ ಅರಿವು, ಕೌಶಲ್ಯಾಭಿವೃದ್ಧಿ ಸಹಿತ ತರಬೇತಿ ಮತ್ತು ಉದ್ಯಮ ಸ್ಥಾಪಿಸಲು ಬೆಂಬಲವನ್ನು ಒದಗಿಸುವ ಮೂಲಕ ಸ್ವಾಲವಂಭಿ ಬದುಕನ್ನು ಕಟ್ಟುತ್ತಿರುವ ಇಡಿಐಐ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕೃಷಿ, ಆಹಾರ ಸಂಸ್ಕರಣೆ, ರೇಷ್ಮೆ ಕೃಷಿ, ಸೆಣಬಿನ ಚೀಲ ತಯಾರಿಕೆ, ಸೌಂದರ್ಯ ಆರೈಕೆ ಮತ್ತು ವಿವಿಧೋದ್ದೇಶ ಯಾಂತ್ರಿಕ ವ್ಯಾಪಾರದಂತಗ ಮಾರ್ಗ ಕಲ್ಪಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಹಿಳೆಯರು ಪುರುಷರಂತೆ ಉದ್ಯಮಶೀಲರಾಗಿ ಪ್ರವರ್ಧಮಾನಕ್ಕೆ ಬರುವ ಮೂಲಕ ಆರ್ಥಿಕ ಸಬಲತೆ ಹೊಂದಬೇಕು. ಆಗ ಮಾತ್ರ ಕುಟುಂಬದಲ್ಲಿ ಮಹಿಳೆಯರಿಗೆ ಗೌರವ ಸ್ಥಾನ ದೊರೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಎಚ್.ಎ.ಎಲ್‌ನ ಸಿ.ಎಸ್.ಆರ್ ಪ್ರಯೋಜಕತ್ವದಲ್ಲಿ ಏರ್ಪಡಿಸಿದ್ದ ಸೂಕ್ಷ್ಮ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ಯೋಜನೆ ಬಳಸಿಕೊಳ್ಳಿ

ಜಿಲ್ಲೆಯ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುತ್ತಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಮಹಿಳೆಯರು ಯಾವುದೇ ಕೆಲಸವಿರಲಿ ಲೆಕ್ಕಾಚಾರ ಮತ್ತು ಕೌಶಲ್ಯಪೂರ್ಣವಾಗಿ ತುಂಬಾ ನಿಷ್ಠೆಯಿಂದ ಮಾಡುತ್ತಾರೆ. ಇಂತಹವರು ಉದ್ಯಮಶೀಲರಾಗಿ ತೊಡಗಿಸಿಕೊಂಡರೆ ಬಹುಬೇಗ ಗುರಿ ಸಾಧಿಸಬಹುದು. ಮಹಿಳಾ ಸಬಲೀಕರಣಕ್ಕೆ ಸರ್ಕಾರದಿಂದ ಬಹಳಷ್ಟು ಯೋಜನೆಗಳು ಜಾರಿಯಾಗುತ್ತಿವೆ. ಇವುಗಳನ್ನು ಸಂಪೂರ್ಣವಾಗಿ ಉಪಯೋಗಿಸಕೊಂಡರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

ಮಹಿಳೆಯರಿಗೆ ಅರಿವು, ಕೌಶಲ್ಯಾಭಿವೃದ್ಧಿ ಸಹಿತ ತರಬೇತಿ ಮತ್ತು ಉದ್ಯಮ ಸ್ಥಾಪಿಸಲು ಬೆಂಬಲವನ್ನು ಒದಗಿಸುವ ಮೂಲಕ ಸ್ವಾಲವಂಭಿ ಬದುಕನ್ನು ಕಟ್ಟುತ್ತಿರುವ ಇಡಿಐಐ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕೃಷಿ, ಆಹಾರ ಸಂಸ್ಕರಣೆ, ರೇಷ್ಮೆ ಕೃಷಿ, ಸೆಣಬಿನ ಚೀಲ ತಯಾರಿಕೆ, ಸೌಂದರ್ಯ ಆರೈಕೆ ಮತ್ತು ವಿವಿಧೋದ್ದೇಶ ಯಾಂತ್ರಿಕ ವ್ಯಾಪಾರಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ತಾಂತ್ರಿಕ ತರಬೇತಿಯನ್ನು ನೀಡುತ್ತಾ ಜೀವನೋಪಾಯಕ್ಕೆ ಸರಿಯಾದ ಮಾರ್ಗವನ್ನು ಕಲ್ಪಿಸುತ್ತಿದೆ ಎಂದರು.

ಉದ್ಯಮ ಆರಂಭಿಸಲು ನೆರವು

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಇದರ ಉಪಯೋಗ ದೊರೆಯಲಿ, ಜಿಲ್ಲಾಡಳಿತವೂ ಕೂಡ ಉದ್ಯಮಶೀಲರಾಗಬಯಸುವ ಮಹಿಳೆಯರಿಗೆ ಬೇಕಾದ ನೆರವನ್ನು ಒದಗಿಸಲಾಗುವುದು ಎಂದರು. ಇದೇ ವೇಳೆ ತರಬೇತಿ ಪಡೆದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಉದ್ಯಮಶೀಲರಾಗಲು ಸಜ್ಜಾಗಿರುವವರನ್ನು ಪ್ರಶಂಸಿದರು.

ಕಾರ್ಯಕ್ರಮ ನಿರ್ದೇಶಕ ಎ.ಎಲ್.ಎನ್ ಪ್ರಸಾದ್ ಮಾತನಾಡಿ ಚಿಕ್ಕಬಳ್ಳಾಪುರ, ಕೋಲಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2024ರಲ್ಲಿ ಇಡಿಐಐ ಸಂಸ್ಥೆಯು ಉದ್ಯಮಶೀಲತಾ ತರಬೇತಿ ನೀಡಲು ಪ್ರಾರಂಭಿಸಲಾಗಿದೆ. ಪ್ರಧಾನವಾಗಿ ಕೃಷಿ, ಆಹಾರ ಸಂಸ್ಕರಣೆ, ರೇಷ್ಮೆ ಕೃಷಿ, ಸೆಣಬಿನ ಚೀಲ ತಯಾರಿಕೆ, ಸೌಂದರ್ಯ ಆರೈಕೆ ಮತ್ತು ವಿವಿಧೋದ್ದೇಶ ಯಾಂತ್ರಿಕ ವ್ಯಾಪಾರಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ತಾಂತ್ರಿಕ ತರಬೇತಿ ನೀಡಲಾಗುತ್ತಿದೆ. ಜತೆಗೆ ಟೈಲರಿಂಗ್, ಜೂಟ್ ಬ್ಯಾಗ್ ತರಬೇತಿ ಮತ್ತು ಉತ್ಪದನಾ ಕೇಂದ್ರಗಳನ್ನು ಕೂಡಪ್ರಾರಂಭಿಸಲಾಗಿದೆ ಎಂದರು.

ಮಹಿಳಾ ಸಬಲೀಕರಣ

ಇಲ್ಲಿ ತರಬೇತಿ ಪಡೆದ ಫಲಾನುಭವಿಗಳು ಈಗಾಗಲೇ ಸ್ವಂತ ಉದ್ಯಮಗಳನ್ನು ಪ್ರಾರಂಬಿಸಿ ಉತ್ತಮ ಆದಾಯ ಗಳಿಸುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿದ್ದಾರೆ. ಈ ಉಪಕ್ರಮವು "ಮೇಕ್ ಇನ್ ಇಂಡಿಯಾ " ಮತ್ತು "ಲೋಕಲ್ ಫಾರ್ ವೋಕಲ್ " ರಾಷ್ಟ್ರೀಯ ಕಾರ್ಯಸೂಚಿಗಳೊಂದಿಗೆ ಅನುರಣಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಎಚ್‌ಎಎಲ್ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್‌ರಾವ್ ಮಾತನಾಡಿ, ಕರ್ನಾಟಕದಾದ್ಯಂತ ಯುವಕರು ಮತ್ತು ಮಹಿಳೆಯರ ಸಬಲೀಕರಣದೊಂದಿಗೆ ಮಹಿಳಾ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಯುವ ಸಬಲೀಕರಣಕ್ಕೆ ಉದ್ಯಮಶೀಲತೆಯೇ ಬಹುಮುಖ್ಯ ಅಡಿಗಲ್ಲು ಎಂದರು.

ಪ್ರಮಾಣ ಪತ್ರ ವಿತರಣೆ

ಇದೇ ವೇಳೆ ನವ ಉದ್ಯಮಿಗಳೊಂದಿಗೆ ಸಂವಾದ ನಡೆಸಿದ ಅವರು ಉದ್ಯಮಶೀಲರನ್ನು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ಅರ್ಹ 200 ಮಂದಿ ಫಲಾನುಭಾವಿಗಳಿಗೆ ಉದ್ಯಮ ಆಧಾರ್ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ಸಂಯೋಜಕ ಎಸ್.ಪ್ರವೀಣ್ ಕುಮಾರ್.ನವೀನ್ ಸಿಬ್ಬಂದಿಗಳಾದ ಅಖಿಲ್, ರಫಿಯಾ,ಸೌಮ್ಯ, ಮಹಂತ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ