ವಿವಿಧೆಡೆ ಕಳ್ಳತನ; ಆರೋಪಿಗಳ ಬಂಧನ

KannadaprabhaNewsNetwork |  
Published : Feb 16, 2025, 01:47 AM IST
15ಕೆಪಿಎಲ್3:ಕೊಪ್ಪಳ ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿ ಹಾಗು ಅವರು ಮಾಡಿದ ಕಳ್ಳತನದ ಹಣ, ಬಂಗಾರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿ ಕಳ್ಳತನದ ಹಣ, ಬಂಗಾರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಿವೃತ್ತ ಬ್ಯಾಂಕ್‌ ಅಧಿಕಾರಿ ಕೃಷ್ಣಮೂರ್ತಿಯವರ ಮನೆಯಲ್ಲಿ ₹20 ಲಕ್ಷ,

ಇದೇ ಗ್ರಾಮದ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹೈದ್ರಾಬಾದ್ ಮೂಲದ ರಹಿಮ್ ಮುಸ್ತಾಫನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹17 ಲಕ್ಷ ನಗದು, ಬೆಳ್ಳಿ-ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.ಗಂಗಾವತಿ ನಗರದಲ್ಲಿ ಎನ್. ವೆಂಕೋಬಾರ ಮನೆಯಲ್ಲಿ ₹2.20 ಲಕ್ಷ ನಗದು, 16 ಗ್ರಾಂ ಬಂಗಾರ, 180 ಗ್ರಾಂ ಬೆಳ್ಳಿ ಆಭರಣ ಕಳ್ಳತನವಾಗಿತ್ತು.

ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಕನಕಗಿರಿಯ ಹನುಮೇಶ ಭಜಂತ್ರಿ ಎಂಬುವರು ಕಳ್ಳತನ ಮಾಡಿದ್ದು ಪತ್ತೆ ಆಗಿದೆ. ಕಳ್ಳನನ್ನು ಬಂಧಿಸಿದ್ದಾರೆ. ಈತ ಬಾದಾಮಿ ಹಾಗೂ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಒಟ್ಟು 4 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಇದೆ. ಈ ಬಂಧಿತನಿಂದ ₹9.10 ಲಕ್ಷ ನಗದು ವಶ ಮಾಡಿಕೊಂಡಿದ್ದಾರೆ.

ಕುಷ್ಟಗಿ ಪಟ್ಟಣ ಮಾರುತಿ ಸರ್ಕಲ್ ಕೋರಾ ಎಲೆಕ್ಟ್ರಾನಿಕ್ ನಲ್ಲಿ 15.73 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ

ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ ಸಲ್ಮಾನ್ ಹಾಗೂ ಸೈಯದ್ ನದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹7.67 ಲಕ್ಷ ಮೌಲ್ಯದ ಮೊಬೈಲ್‌ ವಶ ಮಾಡಿಕೊಂಡಿದ್ದಾರೆ.

ಕುಷ್ಟಗಿ ತಾಲೂಕಿನ ಶಿರಗುಂಪಿಯಲ್ಲಿ ಮನೆ ಬಾಗಿಲು ಮುರಿದು ಹನುಮವ್ವ ಎಂಬವರ ಮನೆ ಕಳ್ಳತನ ಮಾಡಿ

₹2.20 ಲಕ್ಷದ ಆಭರಣ, ₹50 ಸಾವಿರ ನಗದು ದೋಚಿದ್ದ ಮಸ್ತಾನ್‌ನನ್ನು ಬಂಧಿಸಿ ₹40 ಗ್ರಾಂ ಬಂಗಾರ ವಶ ಪಡಿಸಿಕೊಂಡಿದ್ದಾರೆ.ಪ್ರಕರಣ ಭೇಧಿಸಿ ಕಳ್ಳರ ಪತ್ತೆಗಾಗಿ ಶ್ರಮಿಸಿದ ಪೊಲೀಸರನ್ನು ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಿಸಿದ್ದಿ ಪ್ರಶಂಸಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!